ಲಖನೌ: ತಕ್ಷಣದಿಂದಲೇ ಜಾರಿ ಬರುವಂತೆ ಉತ್ತರ ಪ್ರದೇಶದಲ್ಲಿ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಲಾಗಿದೆ ಎಂದು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಅಧ್ಯಕ್ಷ ಜಯಂತ್ ಜೌಧರಿ ಘೋಷಿಸಿದ್ದಾರೆ.
ಲಖನೌ: ತಕ್ಷಣದಿಂದಲೇ ಜಾರಿ ಬರುವಂತೆ ಉತ್ತರ ಪ್ರದೇಶದಲ್ಲಿ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಲಾಗಿದೆ ಎಂದು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಅಧ್ಯಕ್ಷ ಜಯಂತ್ ಜೌಧರಿ ಘೋಷಿಸಿದ್ದಾರೆ.
ಆರ್‌ಎಲ್‌ಡಿ ಮಾರ್ಚ್ 21ರಂದು ಪಕ್ಷದ ಶಾಸಕಾಂಗ ಸಭೆಯನ್ನು ಕರೆದಿದೆ.
:
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ (ಎಸ್‌ಪಿ) ಮೈತ್ರಿ ಮಾಡಿಕೊಂಡು ಆರ್‌ಎಲ್‌ಡಿ ಸ್ಪರ್ಧೆಗಿಳಿದಿತ್ತು. 2017ರಲ್ಲಿ ಒಂದು ಸ್ಥಾನ ಪಡೆದಿದ್ದ ಪಕ್ಷವು ಈ ಬಾರಿ ಸ್ಪರ್ಧಿಸಿದ್ದ 33 ಕ್ಷೇತ್ರಗಳ ಪೈಕಿ ಎಂಟು ಸ್ಥಾನ ಗೆದ್ದಿತ್ತು.
ಇನ್ನೊಂದೆಡೆ ಸಮಾಜವಾದಿ ಪಕ್ಷವು 2017ರಲ್ಲಿದ್ದ 47 ಸ್ಥಾನಗಳಿಂದ ಈ ಸಲ 111 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.