ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು ಕುಟುಂಬಶ್ರೀ ಸಿಡಿಎಸ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಇದರ ಅಂಗವಾಗಿ ಪೆರ್ಲ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ಬಳಿಕ ಪಂಚಾಯತು ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಜಿ.ಪಂ.ಸದಸ್ಯ ನಾರಾಯಣ ನಾಯ್ಕ್ , ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್,ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ವಾರ್ಡ್ ಸದಸ್ಯರಾದ ಮಹೇಶ್ ಭಟ್, ರಾಮಚಂದ್ರ ಎಂ, ಇಂದಿರಾ, ಉಷಾ ಕುಮಾರಿ,ಆಶಾಲತಾ,ರಮ್ಲ,ಕುಸುಮಾವತಿ, ಝರೀನಾ, ಶಶಿಧರ,ನರಸಿಂಹ ಪೂಜಾರಿ,ಪಂ.ಕಾರ್ಯದರ್ಶಿ ಅನ್ವರ್, ಸಿಡಿಎಸ್ ಅಕೌಂಟೆಟ್ ಸುನೀತಾ, ಸಿಡಿಎಸ್ ಸದಸ್ಯರು ಮಾತನಾಡಿದರು. ಈ ಸಂದರ್ಭದಲ್ಲಿ "ಮಹಿಳೆ ಮತ್ತು ಸಮಾಜ" ಎಂಬ ವಿಷಯದ ಬಗ್ಗೆ ಕೀರ್ತಿ ಬಿ. ಉಪನ್ಯಾಸ ನೀಡಿದರು.
ಸ್ವಉದ್ಯೋಗ sಸಾಧನೆಗಾಗಿ ರಮ್ಲತ್ ಅವರಿಗೆ ಸಿಇಎಫ್ ಫಂಡ್ ವಿತರಿಸಲಾಯಿತು. ಎನ್.ಎಚ್ ಜಿ ಯ ಹಿರಿಯ ಮಹಿಳೆಯರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.ಸ್ತ್ರೀಪಕ್ಷ ನವ ಕೇರಳದ ಅಂಗವಾಗಿ ಭಿತ್ತಿ ಚಿತ್ರವನ್ನು ರಚಿಸಿದ ಅನ್ಸಾ ಹಾಗೂ ವಂದಿತಾರನ್ನು ಅಭಿನಂದಿಸಲಾಯಿತು. ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ ಸ್ವಾಗತಿಸಿ ಉದಯಕುಮಾರಿ ವಂದಿಸಿದರು.