ಕೆಲವರಿಗೆ ಆಗಾಗ ಹೊಟ್ಟೆ ಹಾಳಾಗುತ್ತಿರುತ್ತದೆ. ಸ್ವಲ್ಪ ಮಸಾಲೆ ಪದಾರ್ಥ ತಿನ್ನುವಂತಿಲ್ಲ, ಹುಳಿ ಪದಾರ್ಥ ತಿನ್ನುವಂತಿಲ್ಲ, ಸ್ನ್ಯಾಕ್ಸ್ ಸವಿಯುವಂತಿಲ್ಲ, ಹೊಟ್ಟೆ ಹಾಳಾಗಿರುತ್ತದೆ. ಹೊಟ್ಟೆ ಉಬ್ಬಿದಂತೆ ಅನಿಸುವುದು, ಎದೆ ಉರಿ ಉಂಟಾಗುವುದು, ಬಾಯಲ್ಲಿ ಕಹಿ ತೇಗು ಬರಲಾರಂಭಿಸುತ್ತದೆ. ಇವೆಲ್ಲಾ ಅಸಿಡಿಟಿಯ ಲಕ್ಷಣಗಳಾಗಿವೆ.
ಅಸಿಡಿಟಿ ಸಮಸ್ಯೆ ಇರುವವರಿಗೆ ಸಮಾರಂಭಗಳಿಗೆ ಹೋದಾಗ, ರೆಸ್ಟೋರೆಂಟ್‌ಗಳಿಗೆ ಹೋದಾಗ ತಮಗೆ ಇಷ್ಟವಾದ ಆಹಾರ ಸವಿಯಲು ಭಯವಾಗುತ್ತೆ, ಏಕೆಂದರೆ ತಿಂದ ಸ್ವಲ್ಪ ಹೊತ್ತಿಗೆಲ್ಲಾ ಸಮಸ್ಯೆ ಶುರುವಾಗಿರುತ್ತೆ. ನಿಮಗೂ ಅಂಥ ಸಮಸ್ಯೆಯಿದ್ದರೆ ನಾವಿಲ್ಲಿ ಅಸಿಡಿಟಿ ಕಡಿಮೆ ಮಾಡುವ ಕೆಲವೊಂದು ಪರಿಣಾಮಕಾರಿಯಾದ ಮನೆಮದ್ದು ನೀಡಿದ್ದೇವೆ ನೋಡಿ:
ಅಸಿಡಿಟಿ ಸಮಸ್ಯೆ ತಡೆಗಟ್ಟಲು ಆಹಾರಕ್ರಮ ಮುಖ್ಯ
ಅನಾರೋಗ್ಯಕರ ಆಹಾರ ಪದ್ಧತಿಯೆಂದರೆ ಕರಿದ ಪದಾರ್ಥಗಳನ್ನು ತಿನ್ನುವುದು, ತುಂಬಾ ಎಣ್ಣೆಯಂಶವಿರುವ ಆಹಾರ ಸೇವನೆ, ಚೀಸ್, ತುಂಬಾ ತಣ್ಣನೆಯ ಆಹಾರ ಇವೆಲ್ಲಾ ಜೀರ್ಣಕ್ರಿಯೆಗೆ ತೊಂದರೆ ಉಂಟಾಗಿ ಹುಳಿ ತೇಗು, ಹೊಟ್ಟೆಯಲ್ಲಿ ಉಂಟಾಗುವುದು, ಕೆಲವರಿಗೆ ಮಲಬದ್ಧತೆ ಸಮಸ್ಯೆ ಉಂಟಾಗುವುದು. ಆದ್ದರಿಂದ ಆರೋಗ್ಯಕರ ಆಹಾರಕ್ರಮ ಪಾಲಿಸಿ.
ಈ ಮನೆಮದ್ದುಗಳು ಅಸಿಡಿಟಿ ಸಮಸ್ಯೆ ತಡೆಗಟ್ಟುವಲ್ಲಿ ತುಂಬಾನೇ ಸಹಕಾರಿಯಾಗಿದೆ ನೋಡಿ:
1. ಹಾಲು ಮತ್ತು ಗುಲಾಬಿ
ಹಾಲಿಗೆ ಗುಲಾಬಿಯ ದಳಗಳನ್ನು ಹಾಕಿ ಕುದಿಸಿ ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಕುಡಿಯಿರಿ. ಈ ರೀತಿ ಕೆಲವು ದಿನ ಮಾಡಿದರೆ ಅಸಿಡಿಟಿ ಕಡಿಮೆಯಾಗುವುದು, ಮಲಬದ್ಧತೆ ದೂರಾಗುವುದು.
2. ಅಜ್ವೈನ್ ಮತ್ತು ಜೀರಿಗೆ
ರಾತ್ರಿ ಒಂದು ಬಾಟಲಿ ನೀರಿನಲ್ಲಿ ಸ್ವಲ್ಪ ಅಜ್ವೈನ್ ಮತ್ತು ಜೀರಿಗೆ ಹಾಕಿಡಿ. ಆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಚಯಪಚಯ ಕ್ರಿಯೆ ಉತ್ತಮವಾಗಿಸುತ್ತೆ, ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತೆ, ಮಲಬ್ಧತೆ ಇರುವುದಿಲ್ಲ.
3. ಪುದೀನಾ ಎಲೆ ಎಲ್ಲಾ ಬಗೆಯ ಹೊಟ್ಟೆಯ ಸಮಸ್ಯೆಗೆ ಪುದೀನಾ ತುಂಬಾನೇ ಪ್ರಯೋಜನಕಾರಿ. ಪುದೀನಾ ಹೊಟ್ಟೆಯಲ್ಲಿ ಆಮ್ಲ ಉತ್ಪತ್ತಿ ಕಡಿಮೆ ಮಾಡುತ್ತೆ. ಅಲ್ಲದೆ ಹುಳಿ ತೇಗಿನಂಥ ಸಮಸ್ಯೆ ತಡೆಗಟ್ಟುತ್ತೆ. ಸ್ವಲ್ಪ ಪುದೀನಾ ಎಲೆ ಪುದೀನಾ ಅರಿದು ಅದರ ರಸ ತೆಗೆದು ಕುಡಿಯಿರಿ.
4. ತಣ್ಣನೆಯ ಹಾಲು ತಣ್ಣನೆಯ ಹಾಲು ಕೂಡ ಅಸಿಡಿಟಿ ಸಮಸ್ಯೆ ಕಡಿಮೆ ಮಾಡುತ್ತೆ. ಹಾಲು ಕುಡಿಯುವುದರಿಂದ ಹೊಟ್ಟೆಯಲ್ಲಿ ಅಧಿಕ ಆಮ್ಲ ಉತ್ಪತ್ತಿಯಾಗುವುದಿಲ್ಲ, ಇದರಿಂದ ಅಸಿಡಿಟಿ ಕಡಿಮೆಯಾಗುವುದು.
5. ಮೂಲಂಗಿ ಜ್ಯೂಸ್ ಮೂಲಂಗಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಅಲ್ಲದೆ ಮಲಬದ್ಧತೆ ಸಮಸ್ಯೆ ಹೋಗಲಾಡಿಸುತ್ತೆ. ಮೂಲವ್ಯಾಧಿ ಕೂಡ ತಡೆಗಟ್ಟುತ್ತೆ.