HEALTH TIPS

ಕಾಸರಗೋಡು ಕಲೆಕ್ಟರೇಟ್ ನಲ್ಲಿ ಅಗ್ನಿ ಅವಘಡ!: ರಕ್ಷಣಾ ಚಟುವಟಿಕೆಗಳ ಅಣಕು ಪ್ರದರ್ಶನಕ್ಕೆ ಸಾಕ್ಷಿಯಾದ ಜಿಲ್ಲಾ ಕೇಂದ್ರ

                                             

            ಕಾಸರಗೋಡು: ನಿನ್ನೆ ಬೆಳಗ್ಗೆ 11 ಗಂಟೆಗೆ ಕಲೆಕ್ಟರೇಟ್ ನಲ್ಲಿ ಮೊಳಗಿದ ಸೈರನ್ ಸದ್ದಿಗೆ ನೌಕರರು ಒಂದು ಕ್ಷಣ ತಬ್ಬಿಬ್ಬಾದರು.  ಬಳಿಕ ಬೆಂಕಿ ಆಕಸ್ಮಿಕವಾಗಿ ಹಬ್ಬಿರುವ ಬಗ್ಗೆ ಘೋಷಣೆ ಕೇಳಿಬಂತು. ಕಲೆಕ್ಟರೇಟ್‍ನ ಮುಖ್ಯ ಬ್ಲಾಕ್‍ನಲ್ಲಿರುವ ಟೆರೇಸ್‍ನಿಂದ ಬೆಂಕಿ ಕೆನ್ನಾಲಿಗೆ ಮತ್ತು ಹೊಗೆ ಬಾನೆತ್ತರ ಏರಿತು.  ಅಗ್ನಿಶಾಮಕ ರಕ್ಷಣಾ ತಂಡ,  ಪೋಲೀಸರು ರಕ್ಷಣಾ ಕಾರ್ಯಾಚರಣೆಯೊಂದಿಗೆ ಸ್ಥಳದಲ್ಲಿದ್ದರು. ಅಗ್ನಿಶಾಮಕ ದಳದ ಎರಡು ಅಗ್ನಿಶಾಮಕ ವಾಹನಗಳು ಕಲೆಕ್ಟರೇಟ್ ಮುಖ್ಯದ್ವಾರದತ್ತ ಧಾವಿಸಿದವು. ಬಳಿಕ  ಅಗ್ನಿಶಾಮಕ ಪ್ರಯತ್ನಗಳು ಮತ್ತು ರಕ್ಷಣಾ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ನಡೆಯಿತು. ಕಾಸರಗೋಡು ಜನರಲ್ ಆಸ್ಪತ್ರೆಯಿಂದ ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿದ್ದವು.


                      ಮುಖ್ಯ ಬ್ಲಾಕ್‍ನಲ್ಲಿರುವ ಕಂದಾಯ ಇಲಾಖೆಯ 18 ವಿಭಾಗಗಳು ಮತ್ತು ಇತರ ಇಲಾಖೆಗಳ ನೌಕರರನ್ನು ಕಲೆಕ್ಟರೇಟ್ ಮುಂಭಾಗದ ಅಸೆಂಬ್ಲಿ ಪಾಯಿಂಟ್‍ಗೆ ವರ್ಗಾಯಿಸಲಾಯಿತು. ಬೆಂಕಿಯಿಂದ ಇಬ್ಬರನ್ನು ರಕ್ಷಿಸಲಾಗಿದೆ. ಮೂರನೇ ಮಹಡಿಯಲ್ಲಿ ಸಿಲುಕಿದ್ದ ನೌಕರ ಅಖಿಲ್ ಅವರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಚೇರ್ ನೋಟ್ ಸಿಸ್ಟಮ್ ಮೂಲಕ ಹಗ್ಗದಿಂದ ಕೆಳಗೆ ಸುರಕ್ಷಿತವಾಗಿ ಕೆಳಗಿಳಿಸಿದರು. ಅಖಿಲನನ್ನು ಚಿಕಿತ್ಸೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ರವಾನಿಸಲಾಯಿತು. ಪೋಲೀಸ್, ಅಗ್ನಿಶಾಮಕ ಮತ್ತು ರಕ್ಷಣಾ ಮತ್ತು ಆರೋಗ್ಯ ಇಲಾಖೆಯಿಂದ ರಕ್ಷಣಾ ಕಾರ್ಯಾಚರಣೆಯು ಸುಮಾರು 20 ನಿಮಿಷಗಳ ಕಾಲ ನಡೆಯಿತು, ಬೆಂಕಿಯನ್ನು ನಂದಿಸುವುದು ಮತ್ತು ಜನರನ್ನು ಸ್ಥಳಾಂತರಿಸುವುದು ಸೇರಿದಂತೆ ಕಾರ್ಯಚಟುವಟಿಕೆಗಳು ಯಶಸ್ವಿಯಾಗಿ ನಡೆದವು.

                      ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಎಲ್ಲಾ ಜಿಲ್ಲೆಗಳ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಮಾಕ್ ಡ್ರಿಲ್(ಅಣಕು ಕಾರ್ಯಾಚರಣೆ) ನಡೆಸಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಣಕು ಪ್ರಯೋಗವನ್ನು ಆಯೋಜಿಸಿತ್ತು. ಮಾಕ್ ಡ್ರಿಲ್‍ಗೆ ಮೊದಲೇ ಸಿದ್ಧತೆ ನಡೆಸಲಾಗಿತ್ತು. ಮಾಕ್ ಡ್ರಿಲ್‍ನ ಭಾಗವಾಗಿರುವ ಇಲಾಖೆಗಳಿಗೂ ತರಬೇತಿ ನೀಡಲಾಯಿತು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎ.ಟಿ.ಹರಿದಾಸನ್, ಠಾಣಾಧಿಕಾರಿ ಪಿ.ವಿ.ಪ್ರಕಾಶ್ ಕುಮಾರ್ ಮತ್ತು ಎಸ್‍ಎಫ್‍ಆರ್‍ಒ ಪಿ.ರಾಧಾಕೃಷ್ಣನ್ ನೇತೃತ್ವದಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ ಪಡೆಯ 18 ಮಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾನಗರ ಪೋಲೀಸ್ ಠಾಣೆ ಎಸ್‍ಐ ಕೆ ಪ್ರಶಾಂತ್ ನೇತೃತ್ವದ ಪೋಲೀಸ್ ತಂಡ ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಯ ಡಾ ಕರುಣ್ ನೇತೃತ್ವದ ವೈದ್ಯಕೀಯ ತಂಡ ಅಣಕು ಡ್ರಿಲ್‍ನಲ್ಲಿ ಭಾಗವಹಿಸಿದ್ದರು. ಕಾಸರಗೋಡು ಆರ್‍ಡಿಒ ಅತುಲ್ ಸ್ವಾಮಿನಾಥ್ ಅಣಕು ಡ್ರಿಲ್‍ನ ಸ್ವತಂತ್ರ ವೀಕ್ಷಕರಾಗಿದ್ದರು. 


                 ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಎಡಿಎಂ ಎ. ಕೆ ರಾಮೇಂದ್ರನ್, ಎಚ್. ವಿಪತ್ತು ನಿರ್ವಹಣಾ ವಿಭಾಗದಿಂದ ಎಸ್.ಕೆ.ಜಿ.ಮೋಹನ್, ಜೂನಿಯರ್ ಸೂಪರಿಂಟೆಂಡೆಂಟ್ ಎಸ್. ಸಜೀವ್, ಅಪಾಯ ವಿಶ್ಲೇಷಕ ಪ್ರೇಮ್ ಜಿ ಪ್ರಕಾಶ್, ಕೆ ಸುರೇಶ, ಕೆ ಮಹೇಶ, ದಿನೂಪ್ ಕುಮಾರ್ ನೇತೃತ್ವ ವಹಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries