ಕೋಲ್ಕತ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಂಚನೆ ತಡೆಗಟ್ಟಲು ಪ.ಬಂಗಾಳ ಸರ್ಕಾರ ರಾಜ್ಯದ ಕೆಲ ಸ್ಥಳಗಳಲ್ಲಿ ಇಂಟರ್ನೆಟ್ ಸೇವೆಗೆ ತಾತ್ಕಾಲಿಕ ನಿರ್ಬಂಧ ಹೇರಿರುವ ಘಟನೆ ವರದಿಯಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವ್ಯಾಪಕವಾಗಿ ನಕಲು ಮಾಡುವ ಬಗ್ಗೆ ಇಂಟೆಲಿಜೆನ್ಸ್ ವರದಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.
2019 ಮತ್ತು 2020ರಲ್ಲಿ ಮಾಲ್ಡಾ, ಮುರ್ಷಿದಾಬಾದ್ ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಇಂಟರ್ನೆಟ್ ಮಾತ್ರ ಬ್ಯಾನ್ ಮಾಡಿದ್ದು, ಕಾಲ್ ಮತ್ತು ಎಸ್ಸೆಮ್ಮೆಸ್ ಸೇವೆಗಳಿಗೆ ನಿರ್ಬಂಧ ಇರಲಿಲ್ಲ.