HEALTH TIPS

ಮಹಿಳೆಯರಿಗಾಗಿ ನವಕೇರಳಂ ಕಲಾಜಾಥಾ ಆರಂಭ

                   ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪರ್ಯಟನೆ ನಡೆಸಲಿರುವ  ಸ್ತ್ರೀ ಶಕ್ತಿ ಕಲಾಜಾಥಾ ಆರಂಭಗೊಂಡಿದೆ. 

                 ನಿನ್ನೆ ಸಿವಿಲ್ ಸ್ಟೇಷನ್‍ನಿಂದ ಆರಂಭವಾದ ಮೆರವಣಿಗೆಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಚಾಲನೆ ನೀಡಿದರು. ಪ್ರಸ್ತುತ ಸಮಾಜದಲ್ಲಿ ಹೆಚ್ಚುತ್ತಿರುವ ವರದಕ್ಷಿಣೆ ದೌರ್ಜನ್ಯ, ದೌರ್ಜನ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಮೂಲಕ ಸಮಾಜಕ್ಕೆ ಕಾಯಕಲ್ಪ ನೀಡುವುದು ಕಲಾ ಜಾಥಾದ ಉದ್ದೇಶವಾಗಿದೆ. ಮಾರ್ಚ್ 10ರಿಂದ 23ರವರೆಗೆ 12 ದಿನಗಳ ಕಾಲ ಜಿಲ್ಲೆಯ 50 ಕೇಂದ್ರಗಳಲ್ಲಿ ಮೆರವಣಿಗೆ ನಡೆಯಲಿದೆ. ಕುಟುಂಬಶ್ರೀ ಜಿಲ್ಲಾ ಮಿಷನ್‍ನ ರಂಗಶ್ರೀ ತಂಡದ ಸದಸ್ಯರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಾರೆ. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಡಿ.18ರಂದು ಹಮ್ಮಿಕೊಂಡಿರುವ ಸ್ತ್ರೀ ವಿಭಾಗ ನವಕೇರಳ ಅಭಿಯಾನದ ಕೊನೆಯ ಹಂತವಾಗಿ ಕಲಾಜಾಥಾ ಪರ್ಯಟನೆ ಇದಾಗಿದೆ. 

                ಕರಿವೆಳ್ಳೂರು ಮುರಳಿ, ರಫೀಕ್ ಮಂಗಳಶ್ಶೇರಿ ಮತ್ತು ಶ್ರೀಜಾ ಅರಂಗಾಟ್ಟುಕರ ಅವರಿಂದ ನಾಟಕಗಳು ನಡೆಯಲಿವೆ. ಕಲಾ ಜಾಥಾ ನಿರ್ದೇಶಕ ಉದಯನ್ ಕುಂಡಂಗುಳಿ, ಸಂಗೀತ ಶಿಲ್ಪ ಸೇರಿದಂತೆ ಐದು ನಾಟಕಗಳ ಒಂದೂವರೆ ಗಂಟೆ ಪ್ರದರ್ಶನ ನಡೆಯಲಿದೆ.  ಸಿವಿಲ್ ಸ್ಟೇಶನ್ ಆವರಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ವಹಿಸಿದ್ದರು. ಪ್ರಕಾಶ ಪಾಳಾಯಿ ಸ್ವಾಗತಿಸಿ, ರೇಷ್ಮಾ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries