HEALTH TIPS

ಕಾರಡ್ಕ ಅರಣ್ಯ ಸತ್ಯಾಗ್ರಹದ ಇತಿಹಾಸ ಮರು ನೆನಸುವಿಕೆ ಅಗತ್ಯ: ಕರಿವೆಳ್ಳೂರು ಮುರಳಿ: ಜಿಲ್ಲಾ ಮಾಹಿತಿ ಕಛೇರಿ ಆಯೋಜಿಸಿದ್ದ ಆಝಾದಿ ಕ ಅಮ್ಯತ್ ಮಹೋತ್ಸವದಲ್ಲಿ ಸಾಂಸ್ಕøತಿಕ ಉಪನ್ಯಾಸದಲ್ಲಿ ಅಭಿಮತ

                          

            ಮುಳ್ಳೇರಿಯ: ಭಾರತ ಸ್ವಾತಂತ್ರ್ಯ ಉತ್ಸವದ 75ನೇ ವರ್ಷಾಚರಣೆಯ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಆಜಾದಿಖಾ ಅಮೃತ ಮಹೋತ್ಸವದ ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮ ನಿನ್ನೆ ಕರ್ಮಂತೋಡಿ ಬ್ಲಾಕ್ ಪಂಚಾಯತಿ ಪರಿಸರದಲ್ಲಿ ನಡೆಯಿತು. 

            ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪ್ರಸಿದ್ದ ಇತಿಹಾಸ ಸಂಶೋಧಕ, ಚಿಂತಕ ಕರಿವೆಳ್ಳೂರು ಮುರಳಿ ಮಾತನಾಡಿ,  ಸ್ವಾತಂತ್ರ್ಯ ಹೋರಾಟಗಾರರ ರಕ್ತದಿಂದ ತೋಯ್ದ ಮಣ್ಣಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ  ವಿಭಿನ್ನ ಭಾವಪೂರ್ಣ ಅನುಭವ ಎಂದರು.

                    ಬ್ರಿಟಿಷರ ಆಕ್ರಮಣಶೀಲ ಕಾನೂನನ್ನು ಉಲ್ಲಂಘಿಸಿ ನಡೆದ ಕಾರಡ್ಕ ಅರಣ್ಯ ಸತ್ಯಾಗ್ರಹ ಇಂದು ಬಹಳ ಪ್ರಸ್ತುತವಾಗಿದೆ.  ಉತ್ತರ ಕೇರಳದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಕಾರಡ್ಕ  ಆಂದೋಲನವು ಬ್ರಿಟಿಷ್ ಪೋಲೀಸರಿಂದ ಅತ್ಯಂತ ಕ್ರೂರ ದಮನವನ್ನು ಸ್ವೀಕರಿಸಿತು ಮತ್ತು ಆಮೂಲಾಗ್ರ ಬದಲಾವಣೆಗಾಗಿ ಚಳುವಳಿಯ ಉದಯದೊಂದಿಗೆ ಸಂಬಂಧ ಹೊಂದಿತ್ತು. ಆದರೆ ಆ ಬಳಿಕದ ರಾಜಕೀಯ ಇತಿಹಾಸದಲ್ಲಿ ನಿರ್ಲಕ್ಷಿಸಲಾಯಿತು. ಎಲ್ಲಿಯೂ ಹೋರಾಟದ ಲಿಖಿತ ಇತಿಹಾಸಗಳಿಲ್ಲ. ಇಂದು ಹೆಚ್ಚಿನವರು ಮಾಹಿತಿಗಾಗಿ ಹುಡುಕಾಡುವ ಸೈಬರ್ ಲೋಕದಲ್ಲಿ ಹೋರಾಟದ ಬಗ್ಗೆ ಮಾಹಿತಿ ದೊರೆಯದಿರುವುದು ನೋವಿನ ಸಂಗತಿ ಎಂದರು.

            1932ರ ಆಗಸ್ಟ್‍ನಲ್ಲಿ ಈಸ್ಟ್ ಇಂಡಿಯಾ ಕಂಪನಿಯು ನಮ್ಮ ಅರಣ್ಯ ಸಂಪತ್ತನ್ನು ಲೂಟಿ ಮಾಡಲು ಜಾರಿಗೆ ತಂದ ಅರಣ್ಯ ಕಾನೂನನ್ನು ಸಂಪೂರ್ಣವಾಗಿ ವಿರೋಧಿಸಿ ಕಾಸರಗೋಡು ತಾಲೂಕಿನ ಕಾರಡ್ಕ,  ಮುಳಿÀಯಾರ್ ಮತ್ತು ಇರಿಯಣ್ಣಿ ಅರಣ್ಯ ಗ್ರಾಮಗಳ ಸಾಮಾನ್ಯ ಜನರು ಕಾರಡ್ಕದಲ್ಲಿ ಧರಣಿ ಆರಂಭಿಸಿದರು. ಅರಣ್ಯದಿಂದ ಸಂಪನ್ಮೂಲಗಳನ್ನು ಸಂಗ್ರಹಿಸಬಾರದೆಂಬ ಬ್ರಿಟಿಷರ  ನಿಯಮದ ವಿರುದ್ಧ ಪ್ರತಿಭಟಿಸಲು ಪ್ರತಿಭಟನಾಕಾರರು ಅರಣ್ಯ ಪ್ರವೇಶಿಸಿ ಮರಗಳನ್ನು ಕಡಿದರು. ಆಂದೋಲನದ ಭಾಗವಾಗಿ ನಾರಾಂತಟ್ಟು ರಾಮನ್ ನಾಯರ್, ನಾರಾಂತಟ್ಟ ಕೃಷ್ಣನ್ ನಂಬಿಯಾರ್, ಎ.ವಿ.ಕುಂಞಂಬು ಮತ್ತು ಕೆ.ಎನ್.ಕುಂಞÂ್ಞ ಕಣ್ಣನ್ ನಾಯರ್ ಮುಂತಾದ ನಾಯಕರನ್ನು ಹಲವು ಬಾರಿ ಬಂಧಿಸಲಾಗಿತ್ತು. ಪಿ.ಕೃಷ್ಣ ಪಿಳ್ಳೆ ಸೇರಿದಂತೆ ಮುಖಂಡರು ಕಾರಡ್ಕಕ್ಕೆ ಬಂದು ಆಂದೋಲನಕ್ಕೆ ಉತ್ತೇಜನ ನೀಡಿದ್ದು, ಹೀಗಾಗಿ ಕಾರಡ್ಕ ಅರಣ್ಯ ಸತ್ಯಾಗ್ರಹ ಸ್ಥಳೀಯ ಪ್ರತಿರೋಧಕ್ಕೆ ಹೆಸರಾಯಿತು.

                   ಆದರೆ ಎಲ್ಲಿಯೂ ಒಂದು ಚೂರು ಇತಿಹಾಸ ಉಳಿಯದಿರುವುದು ದೌರ್ಬಾಗ್ಯಕರ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಡ ಹೋರಾಟಗಾರರ ರಕ್ತ ಎಂದಿಗೂ ವ್ಯರ್ಥವಾಗಬಾರದು ಮತ್ತು ನೆನಪುಗಳು ಎಂದಿಗೂ ಅನಾಥವಾಗಬಾರದು. ಇದು ನಿಜವಾಗಿಯೂ ಹೋರಾಟವಾಗಿರುವ ನೆನಪುಗಳ ಮರು ನೆನಪಿಸುವಿಕೆ ಅಗತ್ಯವಾಗಿದೆ. ಅಮೃತ ಮಹೋತ್ಸವವು ತಮ್ಮ ನೆಲದಲ್ಲಿ ಬಿದ್ದ ಜನರ ಬೆವರು ಮತ್ತು ರಕ್ತವನ್ನು ಹುಡುಕುವಲ್ಲಿ ನಾಂದಿಯಾಗಿದೆ ಎಂದು ಅವರು ಹೇಳಿದರು.


-

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries