HEALTH TIPS

ನಾಳೆ ಹಾಗೂ ಮಂಗಳವಾರ ಕುಕ್ಕಂಕೂಡ್ಲು ಸನ್ನಿಧಿಯಲ್ಲಿ ದೃಢಕಲಶಾಭಿಷೇಕ

                  ಬದಿಯಡ್ಕ: ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಕುಕ್ಕ0ಕೂಡ್ಲಲಲಿ ಇಂದು ಹಾಗೂ ನಾಳೆ ಕ್ಷೇತ್ರ ತ0ತ್ರಿಗಳಾದ ಬ್ರಹ್ಮಶ್ರೀ  ವೇದಮೂರ್ತಿ ದೇಲಂಪಾಡಿ ಗಣೇಶ ತ0ತ್ರಿಗಳ ನೇತೃತ್ವದಲ್ಲಿ ದೃಢಕಲಶಾಭಿಷೇಕ ನಡೆಯಲಿದೆ. 

             ಕಾರ್ಯಕ್ರಮದ ಅಂಗವಾಗಿ ಇಂದು ಬೆಳಿಗ್ಗೆ 7.30  ಬೆಳಗಿನ ಪೂಜೆ, 9 ಗ0ಟೆಯಿಂದ ಶ್ರೀ ಕ್ಷೇತ್ರ ಮತ್ತು ಪರಿಸರ ಶುಚೀಕರಣ ನಡೆಯಲಿದೆ. 10 ಗ0ಟೆ, ನೀರ್ಚಾಲು ಅಶ್ವತ್ಥ ಕಟ್ಟೆ ಪರಿಸರದಿಂದ ಹಸಿರುವಾಣಿ ಕ್ಷೇತ್ರಕ್ಕೆ ಆಗಮನ, 12.30 ಪ್ರಸಾದ ಭೋಜನ, ಸಂಜೆ 5.30 ಕ್ಷೇತ್ರಕ್ಕೆ ತ0ತ್ರಿಗಳ ಆಗಮನ,ಪೂರ್ಣಕು0ಭ  ಸ್ವಾಗತ ನಡೆಯಲಿದೆ. ಬಳಿಕ ಪುಣ್ಯಾಹ ವಾಚನ,ಪ್ರಾಸಾದಶುದ್ದಿ,ರಾಕ್ಷೋಗ್ನಹೋಮ,ವಾಸ್ತುಹೋಮ,ವಾಸ್ತುಬಲಿ ಮೊದಲಾದ ವೈದಿಕ ವಿಧಿಗಳು ನಡೆಯಲಿದೆ. ಸಂಜೆ 6.30 ರಿಂದ ಭಜನೆ, ರಾತ್ರಿ 8. ರಿ0ದನಾಟ್ಯ ವಿದ್ಯಾಲಯ ಕುಂಬಳೆಯ ವಿದುಷಿಃ ವಿದ್ಯಾ|ಲಕ್ಷ್ಮೀ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸ0ಭ್ರಮ ನಡೆಯಲಿದೆ. ರಾತ್ರಿ 9 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. 

        ಮ0ಗಳವಾರ ಬೆಳಿಗ್ಗೆ 7 ಕ್ಕೆ ಗಣಪತಿ ಹೋಮ,ಕಲಶಪೂಜೆ, ದೃಢಕಲಶಾಭಿಷೇಕ ನಡೆಯಲಿದೆ. 11 ಕ್ಕೆ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಆಗಮನ ,ಪೂರ್ಣಕು0ಭ ಸ್ವಾಗತ, ಸಭಾಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಕ್ಷೇತ್ರ ತಂತ್ರಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಶ್ರೀಕ್ಷೇತ್ರದ ಮೊಕ್ತೇಸರ ನ್ಯಾಯವಾದಿ. ಗೌರೀ ಶ0ಕರ ರೈ ಆಧ್ಯಕ್ಷತೆ ವಹಿಸುವರು. 12.15 ಕ್ಕೆ ಮಹಾಪೂಜೆ, ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವಕ್ಕೆ ಅವಿರತ ಶ್ರಮಿಸಿದ ಭಕ್ತಸಮೂಹದ ಶ್ರೇಯೋಭಿವೃದ್ಧಿಗೆ ತ0ತ್ರಿಗಳಿಂದ ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ,ಪ್ರಸಾದ ಭೋಜನ, ಸಂಜೆ 5 ಕ್ಕೆ  ಭಜನೆ, 6 ಕ್ಕೆ ಯಕ್ಷ ವಿಹಾರಿ ಬದಿಯಡ್ಕ ತಂಡದವರಿಂದ ಗಾನವೈಭವ, ರಾತ್ರಿ 8.30 ಕ್ಕೆ ದೀಪೆÇೀತ್ಸವ, ವಿಶೇಷ ಕಾರ್ತಿಕಪೂಜೆ,ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಳ್ಳಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries