ಕೊಚ್ಚಿ: ಎರ್ನಾಕುಳಂ ಜಿಲ್ಲೆಯ ವ್ಯಾಪಾರ ಕೇಂದ್ರ-ಅಂಗಡಿ ಮುಗ್ಗಟ್ಟುಗಳು ಇಂದು ತೆರೆದಿರುತ್ತವೆ. ಮುಷ್ಕರದಿಂದಾಗಿ ರಾಜ್ಯದಲ್ಲಿನ ಸಣ್ಣ ಉದ್ದಿಮೆಗಳು ಮುಚ್ಚಲ್ಪಟ್ಟರೂ ಲುಲು ಮಾಲ್ ಸೇರಿದಂತೆ ಏಕಸ್ವಾಮ್ಯ ಬಂಡವಾಳಶಾಹಿಗಳ ಅಂಗಡಿಗಳು ತೆರೆದಿದ್ದವು. ಇದು ಕೇರಳದ ಮಾರುಕಟ್ಟೆ ಏಕಸ್ವಾಮ್ಯದ ಬಂಡವಾಳಶಾಹಿಗಳನ್ನು ಬೆಳೆಸುವ ತಂತ್ರಗಾರಿಕೆಯ ಒಂದು ಭಾಗವಾಗಿದೆ ಎಂದು ವ್ಯಾಪಾರಿ ಸಂಘಟನೆ ಮುಖಂಡರು ಹೇಳಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ನಿರ್ಮೂಲನೆಗೆ ಮುಷ್ಕರ ಕಾರಣ ಎಂದು ವರ್ತಕರ ಸಂಘಟನೆಗಳು ಆರೋಪಿಸಿದರು.
ಕೇರಳ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಜಿಲ್ಲಾಧ್ಯಕ್ಷ ಪಿ.ಸಿ.ಜೇಕಬ್ ಮಾತನಾಡಿ, ನಾಗರಿಕರ ಮೂಲಭೂತ ಹಕ್ಕಾದ ಜೀವನೋಪಾಯಕ್ಕೆ ಏಕಸ್ವಾಮ್ಯ ಧೋರಣೆ ಬಾರದಂತೆ ಇಂದು ಜಿಲ್ಲೆಯ ಎಲ್ಲ ಸಂಸ್ಥೆಗಳು ತೆರೆದುಕೊಳ್ಳಲಿವೆ. ಕೇರಳ ಮಚೆರ್ಂಟ್ ಚೇಂಬರ್ ಆಫ್ ಕಾಮರ್ಸ್, ಆಲ್ ಕೇರಳ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್, ಕೇರಳ ಹೋಟೆಲ್ ಮತ್ತು ರೆಸ್ಟೊರೆಂಟ್ಸ್ ಅಸೋಸಿಯೇಷನ್ ಮತ್ತು ಬೇಕರ್ಸ್ ಅಸೋಸಿಯೇಷನ್ ಇವೆಲ್ಲವೂ ಕೇರಳದ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಸಮನ್ವಯ ಸಮಿತಿಯೊಂದಿಗೆ ಸಾಲಿನಲ್ಲಿವೆ.