ಕಾಸರಗೋಡು: ಚಿನ್ಮಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ 'ವಿದ್ಯಾ ಗೋಪಾಲ ಮಂತ್ರ ಹೋಮ' ಶಾಲಾ ಸಭಾಂಗಣದಲ್ಲಿ ಜರುಗಿತು. ಕರೊನಾ ಸಾಂಕ್ರಾಮಿಕ ರೋಗ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರಿದ್ದು, ಪ್ರತಿ ವಿದ್ಯಾರ್ಥಿ ಮಾನಸಿಕ, ದೈಹಿಕ ಹಾಗೂ ಸದೃಢವಾಗಿ, ಯೋಗ್ಯ ರೀತಿಯಲ್ಲಿ ಪರೀಕ್ಷೆ ಬರೆಯುವಂತಾಗಲು ಅತ್ಯಂತ ಪ್ರಭಾವಶಾಲಿಯಾಗಿರುವ 'ವಿದ್ಯಾ ಗೋಪಾಲ ಮಂತ್ರ ಹೋಮವನ್ನು ಆಯೋಜಿಸಲಾಗಿದೆ. ಈ ಹೋಮ ವಿದ್ಯಾರ್ಥಿಗಳಿಗೆ ಶ್ರೀದೇವರ ಅನುಗ್ರಹ ಒದಗಿಸುವುದರ ಜತೆಗೆ ಪರೀಕ್ಷೆಯಲ್ಲಿ ಆತ್ಮವಿಶ್ವಾಸದೊಂದಿಗೆ ಉತ್ತೀರ್ಣರಾಗಲು ಸಹಕಾರಿಯಾಗಿರುವುದಾಗಿ ಹೋಮದ ರೂವಾರಿ, ಒಟ್ಟಪ್ಪಾಲಂನ ಬ್ರಹ್ಮಚಾರಿ ಮುಕುಂದ ಚೈತನ್ಯ ತಿಳಿಸಿದ್ದಾರೆ. ಹೋಮದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಚಿನ್ಮಯ ಮಿಷನ್ ರಾಜ್ಯ ಸಮಿತಿ ಮುಖ್ಯಸ್ಥ, ಕಾಸರಗೋಡು ಚಿನ್ಮಯ ವಿದ್ಯಾಲಯ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದ ಸರಸ್ವತೀ, ನಿರ್ದೇಶಕ ಬಿ. ಪುಷ್ಪರಾಜ್, ಮುಖ್ಯಶಿಕ್ಷಕಿಯರಾದ ಪೂರ್ಣಿಮಾ, ಸಿಂಧು ಶಶೀಂದ್ರನ್, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.