ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದೇಶದ ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ಬಹುಮುಖಿ ತಾಣವಾದ ಜಿಯೋ ವರ್ಲ್ಡ್ ಸೆಂಟರ್ ತೆರೆಯುವುದಾಗಿ ಇಂದು ಘೋಷಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ನಿರ್ದೇಶಕಿ ಮತ್ತು ರಿಲಯನ್ಸ್ ಫೌಂಡೇಷನ್ನ ಸಂಸ್ಥಾಪಕ ಅಧ್ಯಕ್ಷೆ ನೀತಾ ಅಂಬಾನಿ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ 18.5 ಎಕರೆ ವಿಸ್ತಾರವಾದ ಪ್ರದೇಶ ಹೊಂದಿದ್ದು, ಭಾರತದ ನಾಗರಿಕರಿಗೆ ಅಪ್ರತಿಮ ವ್ಯಾಪಾರ, ವಾಣಿಜ್ಯ ಮತ್ತು ಸಂಸ್ಕೃತಿಯ ಅನುಭವ ನೀಡುವ ತಾಣವಾಗುವ ಮೂಲಕ ವಿಶ್ವದರ್ಜೆಯ ಗುಣಮಟ್ಟವನ್ನು ಒದಗಿಸಲು ಸಿದ್ಧವಾಗಿದೆ.
ಧೀರೂಭಾಯಿ ಅಂಬಾನಿ ಸ್ಕ್ವೇರ್ ಮತ್ತು ಮುಂಬೈ ನಗರಕ್ಕೆ ಸಂಗೀತ ಕಾರಂಜಿಯ ಫೌಂಟೇನ್ ಆಫ್ ಜಾಯ್ ಮತ್ತು ಭಾರತದ ಅತಿದೊಡ್ಡ ಮತ್ತು ಅತ್ಯುತ್ತಮವಾದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನ ಆರಂಭದೊಂದಿಗೆ ಇದು ಮುಂದಿನ ಹಲವು ಅವಧಿಗಳಲ್ಲಿ ಹಂತ ಹಂತವಾಗಿ ತೆರೆಯಲಿದೆ.
ಜಿಯೋ ವರ್ಲ್ಡ್ ಸೆಂಟರ್ ನಮ್ಮ ಭವ್ಯ ರಾಷ್ಟ್ರದ ಗೌರವ ಮತ್ತು ನವ ಭಾರತದ ಆಕಾಂಕ್ಷೆಗಳ ಪ್ರತಿಬಿಂಬ. ಅತಿದೊಡ್ಡ ಸಮಾವೇಶಗಳನ್ನು ನಡೆಸಲು ಅನುಕೂಲ ಕಲ್ಪಿಸುವುದರಿಂದ ಹಿಡಿದು ಸಾಂಸ್ಕೃತಿಕ ಅನುಭವಗಳವರೆಗೆ ಚಿಲ್ಲರೆ ವ್ಯಾಪಾರ ಮತ್ತು ಊಟದ ಸೌಲಭ್ಯಗಳವರೆಗೆ, ಜಿಯೋ ವರ್ಲ್ಡ್ ಸೆಂಟರ್ ಮುಂಬೈನ ಹೊಸ ಹೆಗ್ಗುರುತಾಗಲಿದೆ. ಭಾರತದ ಬೆಳವಣಿಗೆಯ ಕಥೆಯ ಮುಂದಿನ ಅಧ್ಯಾಯವನ್ನು ಬರೆಯಲು ನಾವು ಒಟ್ಟಿಗೆ ಸೇರಲಿದ್ದೇವೆ.
| ನೀತಾ ಅಂಬಾನಿ ಸಂಸ್ಥಾಪಕ ಅಧ್ಯಕ್ಷೆ, ರಿಲಯನ್ಸ್ ಫೌಂಡೇಷನ್
ಧೀರೂಭಾಯಿ ಅಂಬಾನಿ ಚೌಕ
ಮುಂಬೈ ನಗರದಲ್ಲಿ ಹೊಸ ಹೆಗ್ಗುರುತಾಗಿ ನಿರ್ಮಾಣವಾಗುತ್ತಿರುವ ಧೀರೂಭಾಯಿ ಅಂಬಾನಿ ಸ್ಕ್ವೇರ್ ರಿಲಯನ್ಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಮತ್ತು ಮುಂಬೈ ನಗರಕ್ಕೆ ನೀಡುತ್ತಿರುವ ಸಮರ್ಪಣೆಯಾಗಿದೆ. ಮುಕ್ತ-ಪ್ರವೇಶ, ಮುಕ್ತ ಸಾರ್ವಜನಿಕ ಸ್ಥಳದೊಂದಿಗೆ ಇದು ಸ್ಥಳೀಯ ನಾಗರಿಕರು ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ನೋಡಲೇಬೇಕಾದ ತಾಣವಾಗಿರಲಿದೆ.
ಧೀರೂಭಾಯಿ ಅಂಬಾನಿ ಚೌಕವು ಫೌಂಟೇನ್ ಆಫ್ ಜಾಯ್ ಸುತ್ತಲೂ ನಿರ್ಮಾಣವಾಗಲಿದೆ. ಇದು ನೀರು, ದೀಪ ಮತ್ತು ಸಂಗೀತದ ಅದ್ಭುತ ಕಾರಂಜಿ ಪ್ರದರ್ಶನಗಳ ಸರಣಿಯಾಗಿರಲಿದೆ. ಕಾರಂಜಿಯು ಭಾರತ ಹಾಗೂ ಅದರ ಹಲವು ಬಣ್ಣಗಳನ್ನು ಸಂಕೇತಿಸಲಿದೆ. ಎಂಟು ಫೈರ್ ಶೂಟರ್ಗಳು, 392 ವಾಟರ್ ಜೆಟ್ಗಳು ಮತ್ತು 600ಕ್ಕೂ ಹೆಚ್ಚು ಎಲ್‌ಇಡಿ ದೀಪಗಳು ಸಂಗೀತದ ಮಾಧುರ್ಯಕ್ಕೆ ನೃತ್ಯ ಮಾಡುವ ಹೂವಿನ ದಳಗಳಾಗಿ ಬದಲಾಗಿ ಮರೆಯಲಾಗದ ಪ್ರದರ್ಶನವನ್ನು ಸೃಷ್ಟಿಸಲಿವೆ.
ಸಂಗೀತ ಕಾರಂಜಿಯನ್ನು ಲೋಕಾರ್ಪಣೆ ಮಾಡಿದ ನೀತಾ ಅಂಬಾನಿ, ಅತ್ಯಂತ ಸಂತೋಷ ಮತ್ತು ಹೆಮ್ಮೆಯಿಂದ, ನಾವು ಧೀರೂಭಾಯಿ ಅಂಬಾನಿ ಚೌಕ ಮತ್ತು ವಿಶ್ವ ದರ್ಜೆಯ ಫೌಂಟೇನ್ ಆಫ್ ಜಾಯ್ಯನ್ನು ಮುಂಬೈ ಜನರಿಗೆ ಮತ್ತು ನಗರಕ್ಕೆ ಅರ್ಪಿಸುತ್ತೇವೆ. ನಗರದಲ್ಲಿ ಸಂಭ್ರಮಾಚರಣೆ ನಡೆಸುವ, ಜನರು ಸಂತೋಷಗಳನ್ನು ಹಂಚಿಕೊಳ್ಳುವ ಮತ್ತು ಆಮ್ಚಿ ಮುಂಬೈ ಬಣ್ಣಗಳು ಮತ್ತು ಶಬ್ದಗಳಲ್ಲಿ ನೆನೆಯುವ ಅಪ್ರತಿಮ ಹೊಸ ಸಾರ್ವಜನಿಕ ಸ್ಥಳವಾಗಿ ಬದಲಾಗಿದೆ ಎಂದರು. ಇದರ ಆರಂಭದ ಮೊದಲ ರಾತ್ರಿಯ ಸಂತಸವನ್ನು ಶಿಕ್ಷಕರಿಗೆ ವಿಶೇಷ ಗೌರವವಾಗಿ ಅರ್ಪಿಸಲು ನಾನು ಸಂತೋಷಪಡುತ್ತೇನೆ. ನಾನೇ ಶಿಕ್ಷಕಿ ಆಗಿರುವುದರಿಂದ ಈ ಸವಾಲಿನ ಸಮಯದಲ್ಲಿ ದಣಿವಿನ ಅರಿವಿಲ್ಲದೆ ಕೆಲಸ ಮಾಡಿದ ಮತ್ತು ಜ್ಞಾನದ ಜ್ವಾಲೆಯನ್ನು ಉರಿಯುತ್ತಿರುವ ನಮ್ಮ ಶಿಕ್ಷಕರಿಗೆ ಧನ್ಯವಾದಗಳು. ನಮ್ಮ ಈ ಗೌರವಾರ್ಪಣೆಯು ನಿಜವಾದ ವೀರರನ್ನು ಶ್ಲಾಘಿಸುತ್ತದೆ ಎಂದರು.
ಜ್ಞಾನದ ಜ್ವಾಲೆಯನ್ನು ಪ್ರಜ್ವಲಿಸುವ ಮತ್ತು ಭವ್ಯ ಭಾರತದ ಭವಿಷ್ಯವನ್ನು ಮುಂದಿನ ಜನಾಂಗದಲ್ಲಿ ಕಟ್ಟಿಕೊಡುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಹೊಸ ಬೋಧನಾ ವಿಧಾನಗಳಿಗೆ ಹೊಂದಿಕೊಳ್ಳುವಲ್ಲಿ ಹೆಚ್ಚಿನ ಪ್ರಯತ್ನಗಳನ್ನು ಹಾಕಿದ ಮುಂಬೈನಾದ್ಯಂತ ಬಿಎಂಸಿ ಶಾಲೆಗಳು ಮತ್ತು ಇತರ ಶಾಲೆಗಳಿಂದ 250ಕ್ಕೂ ಹೆಚ್ಚು ಶಿಕ್ಷಕರನ್ನು ಆರಂಭಿಕ ಪ್ರದರ್ಶನಕ್ಕೆ ಆಹ್ವಾನಿಸಲಾಯಿತು. ಚೌಕವು ಪ್ರತಿದಿನ ಸಂಜೆಯ ಪ್ರದರ್ಶನಗಳೊಂದಿಗೆ ಆರಂಭಗೊಳ್ಳುತ್ತದೆ. ಉಚಿತ ಪ್ರವೇಶ ಪಾಸ್ಗಳನ್ನು www.dhirubhaiambanisquare.com ನಲ್ಲಿ ಬುಕ್ ಮಾಡಬಹುದು.
ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್
ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್, ಭಾರತದ ಅತ್ಯುತ್ತಮ, ಬೃಹತ್ ಸಮಾವೇಶ ಮತ್ತು ಪ್ರದರ್ಶನ ಸೌಲಭ್ಯಗಳನ್ನು ನೀಡುತ್ತದೆ ಮತ್ತು ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಸಮಾವೇಶ ಮತ್ತು ಪ್ರದರ್ಶನಗಳ ಪರಿಸರ ವ್ಯವಸ್ಥೆಯಲ್ಲಿ ಭಾರತವನ್ನು ದೃಢವಾಗಿ ಇರಿಸುವ ಗುರಿ ಹೊಂದಿದೆ. ಇದು ಭಾರತ ಮತ್ತು ಮುಂಬೈ ನಗರಕ್ಕೆ ಅತಿ ದೊಡ್ಡ ಕೊಡುಗೆಯಾಗಿದೆ.
ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಗ್ರಾಹಕರ ಪ್ರದರ್ಶನಗಳು, ಸಮ್ಮೇಳನಗಳು, ಎಕ್ಸಿಬಿಷನ್, ಮೆಗಾ ಕನ್ಸರ್ಟ್ಗಳು, ಗಾಲಾ ಔತಣಕೂಟಗಳು ಮತ್ತು ವಿವಾಹಗಳು ಸೇರಿ ವಿಶಿಷ್ಟ ವ್ಯಾಪಾರ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಭಾರತದ ಅಗ್ರಗಣ್ಯ ಸ್ಥಳವಾಗಿದೆ. ಬಹು ಆಯಾಮ ಹೊಂದಿರುವ ಈ ಪ್ರದೇಶವು ತಂತ್ರಜ್ಞಾನದ ಬೆಂಬಲದೊಂದಿಗೆ ಭಾರತದಲ್ಲಿ ಜಾಗತಿಕ ಮಾನದಂಡಗಳನ್ನು ಒದಗಿಸುತ್ತದೆ.
ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಮುಖ್ಯಾಂಶಗಳು
- 161460 ಚದರ ಅಡಿ ವಿಸ್ತೀರ್ಣದ 3 ಪ್ರದರ್ಶನ ಸಭಾಂಗಣಗಳು, 16,500 ಅತಿಥಿಗಳಿಗೆ ಅವಕಾಶ.
- 107640 ಚದರ ಅಡಿಗಳ ಒಟ್ಟು 2 ಕನ್ವೆನ್ಷನ್ ಹಾಲ್ಗಳು, 10,640 ಅತಿಥಿಗಳಿಗೆ ಅವಕಾಶ.
- ಭವ್ಯವಾದ 32,290 ಚದರ ಅಡಿ ಬಾಲ್ ರೂಂ, 3200 ಅತಿಥಿಗಳಿಗೆ ಅವಕಾಶ.
- ಒಟ್ಟು 29062 ಚದರ ಅಡಿ ವಿಸ್ತೀರ್ಣದೊಂದಿಗೆ 25 ಸಭಾ ಕೊಠಡಿಗಳು.
- ಎಲ್ಲಾ ಹಂತಗಳಲ್ಲಿ 139930 ಚದರ ಅಡಿ ಪೂರ್ವ-ಕಾರ್ಯ ಸಭೆಯ ಒಟ್ಟು ಪ್ರದೇಶ
- ಹೈಬ್ರಿಡ್ ಮತ್ತು ಡಿಜಿಟಲ್ ಅನುಭವಗಳಿಗಾಗಿ ಸಕ್ರಿಯ 5G ನೆಟ್ವರ್ಕ್.
- ದಿನಕ್ಕೆ 18,000ಕ್ಕೂ ಹೆಚ್ಚು ಊಟ ಪೂರೈಸುವ ಸಾಮರ್ಥ್ಯ ಹೊಂದಿರುವ ದೊಡ್ಡ ಅಡುಗೆ ಮನೆ
- 5,000 ಕಾರುಗಳ ನಿಲುಗಡೆಗೆ ಸಾಮರ್ಥ್ಯವಿರುವ ಕನ್ವೆನ್ಷನ್ ಸೆಂಟರ್, ಇದು ಭಾರತದ ಅತಿದೊಡ್ಡ ಆನ್-ಸೈಟ್ ಪಾರ್ಕಿಂಗ್ ಆಗಲಿದೆ.
- ಒಬೆರಾಯ್ 360 ಸೇರಿ ಹಲವು ಹೊಸ ಹಾಗೂ ನವೀನ ಜಾಗತಿಕ ಪಾಕಶಾಲೆಯ ಪರಿಕಲ್ಪನೆ ಒಳಗೊಂಡಿರಲಿದೆ. ಇಂಡಿಯಾ ಆಕ್ಸೆಂಟ್ನಂಥ ವಿಶ್ವ ದರ್ಜೆಯ ಶಾಪಿಂಗ್ ಅನುಭವ ಮತ್ತು ಐಷಾರಾಮಿ ಬ್ರಾಂಡ್ಗಳು ಲಭ್ಯವಿರಲಿವೆ. ಹೀಗಿದ್ದೂ, ಸಾಂಸ್ಕೃತಿಕವಾಗಿ ಮನಸೂರೆಗಳ್ಳುವ ಅನುಭವಗಳ ಸಾಂಸ್ಕೃತಿಕ ಕೇಂದ್ರಬಿಂದುವಾಗಿ, ಕಲಾತ್ಮಕ ಸಮುದಾಯದ ಭಾಗವಾಗಿ ಇದು 2023ರಲ್ಲಿ ಆರಂಭವಾಗಲಿದೆ.