ಕೊಚ್ಚಿ: ಪಂಜಾಬ್ ನಲ್ಲಿ ಅಧಿಕಾರಕ್ಕೆ ಬಂದ ನಂತರ ಕೇರಳದಲ್ಲೂ ತಮ್ಮ ಪಕ್ಷದ ಬಲ ಹೆಚ್ಚಿಸಲು ಆಮ್ ಆದ್ಮಿ ಪಕ್ಷ ಸಜ್ಜಾಗಿದೆ. ಕೇರಳದಲ್ಲಿ ಈಗಾಗಲೇ ಕಾರ್ಯಾಚರಣೆ ಆರಂಭಿಸಿರುವ ಎಎಪಿ ಪ್ರಬಲವಾಗಿ ಅಸ್ತಿತ್ವಕ್ಕೆ ಬರಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಕೇರಳದಲ್ಲಿ ಪಕ್ಷದ ನೂತನ ಕಚೇರಿ ತೆರೆಯಲಾಗಿದೆ. ರಾಜ್ಯ ಸಮಿತಿಯ ಕಾರ್ಯನಿರ್ವಹಣೆಗಾಗಿ ಕೊಚ್ಚಿಯಲ್ಲಿ ಹೊಸ ಕಚೇರಿ ತೆರೆಯಲಾಗಿದೆ.
ಆಮ್ ಆದ್ಮಿ ಪಕ್ಷದ ಕೇರಳ ರಾಜ್ಯ ಕಚೇರಿಯನ್ನು ಎರ್ನಾಕುಳಂ ಉತ್ತರ ರೈಲು ನಿಲ್ದಾಣದ ಎದುರಿನ ಮೀಥರ್ ಕಟ್ಟಡದಲ್ಲಿ ತೆರೆಯಲಾಯಿತು. ರಾಜ್ಯ ಸಮಿತಿಯ ಕಾರ್ಯಾಲಯವನ್ನು ಕೇರಳ ಉಸ್ತುವಾರಿ ಪ್ರಭಾರಿ ಎನ್ ರಾಜಾ ಉದ್ಘಾಟಿಸಿದರು. ಕೇರಳದಲ್ಲಿ ಆಮ್ ಆದ್ಮಿ ಪಕ್ಷವನ್ನು ಬಲಪಡಿಸಲಾಗುವುದು ಮತ್ತು ಕೇರಳವು ಪಕ್ಷದ ರಾಷ್ಟ್ರೀಯ ಸಮಿತಿಯ ಕೇಂದ್ರೀಕೃತ ರಾಜ್ಯಗಳಲ್ಲಿ ಒಂದಾಗಿದೆ ಎಂದು ಎನ್ ರಾಜಾ ಹೇಳಿದರು.
ಪಂಜಾಬ್‍ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಕಾಂಗ್ರೆಸ್ ನ್ನು ಪರಾಭವಗೊಳಿಸುವ ಮೂಲಕ ಹೆಚ್ಚಿನ ರಾಜ್ಯಗಳಿಗೆ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ನಿರ್ಧರಿಸಿದೆ.