ಕಾಸರಗೋಡು: ಕರ್ನಾಟಕ-ಕೇರಳ ಗಡಿಭಾಗದ ಪಾಣತ್ತೂರಿನಲ್ಲಿ ಗಡಿ ವಿವಾದ ಬಗೆಹರಿಸಲು ವೆಳ್ಳರಿಕ್ಕುಂಡು ತಾಲೂಕು ಅಭಿವೃದ್ಧಿ ಸಮಿತಿ ಸಭೆ ನಿರ್ಧರಿಸಿದೆ. ಈ ಬಗ್ಗೆ ಕ್ರಮಕೈಗೊಳ್ಳಲು ಕಂದಾಯ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಸಭೆ ಒತ್ತಾಯಿಸಿತು. ವೆಳ್ಳರಿಕ್ಕುಂಡು ಮಿನಿ ಸಿವಿಲ್ ಸ್ಟೇಷನ್ ಸಭಾಂಗಣದಲ್ಲಿ ನಿನ್ನೆ ತಾಲೂಕು ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುರಳಿ ಹಾಗೂ ಕಿನಾನೂರು ಕರಿಂದಳ ಪಂಚಾಯತ್ ಅಧ್ಯಕ್ಷ ಟಿ.ಕೆ. ರವಿ, ಬಳಾಲ್ ಪಂಚಾಯಿತಿ ಉಪಾಧ್ಯಕ್ಷ ಎಂ. ರಾಧಾಮಣಿ, ಸಿ.ಪಿ. ಬಾಬು, ಟಿ.ಪಿ. ತಂಬಾನ್, ಎಂ.ವಿ. ಕೃಷ್ಣನ್ ಹಾಗೂ ಇತರ ಇಲಾಖಾ ಪ್ರತಿನಿಧಿಗಳು ಮಾತನಾಡಿದರು.
ಪರಪ್ಪ ತಾಲೂಕು ಆಸ್ಪತ್ರೆಯಲ್ಲಿ ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮಕೈಗೊಳ್ಳುವಂತೆ ಬ್ಲಾಕ್ ಪಂಚಾಯಿತಿ ಅಧ್ಯಕ್ಷರಿಗೆ ಸೂಚಿಸಲಾಗಿದೆ. ತಾಲೂಕಿನ ವೆಳ್ಳರಿಕುಂಡು ಬಳಿ ಬಸ್ ತಂಗುದಾಣ ನಿರ್ಮಿಸುವಂತೆ ಪಿಡಬ್ಲ್ಯುಡಿ, ಆರ್ ಟಿಒ ಹಾಗೂ ಬಳಾಲ್ ಪಂಚಾಯಿತಿಗೆ ಸೂಚಿಸಲಾಗಿದೆ. ಪರಪ್ಪದಲ್ಲಿ ಜಮೀನು ಒತ್ತುವರಿಯಾಗಿರುವ ಬಗ್ಗೆ ಸರಕಾರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದೆ ಎಂದು ತಹಸೀಲ್ದಾರ್ ತಿಳಿಸಿದರು. ವೆಳ್ಳರಿಕುಂಡು ಹಲವೆಡೆ ತೆರೆದ ಗಟಾರಗಳಲ್ಲಿ ಸ್ಲ್ಯಾಬ್‍ಗಳನ್ನು ಹಾಕಲು ಸಮಿತಿಯು ಪಿಡಬ್ಲ್ಯುಡಿಯನ್ನು ಕೇಳಿದೆ. ಕೋಳಿಚ್ಚಾಲ್ ಪೇಟೆಯಲ್ಲಿ ಪಿಡಬ್ಲ್ಯುಡಿ ಜಮೀನು ಒತ್ತುವರಿಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಭೂ ಅಭಿವೃದ್ದಿ ಬ್ಯಾಂಕ್ ಮೂಲಕ ನಿವೇಶನ ಪಡೆದವರಿಗೆ ನಿವೇಶನ ನೀಡಲು ಕೂಡಲೇ ಕ್ರಮಕೈಗೊಳ್ಳಬೇಕು. ಈಗಿರುವ 1200 ಅರ್ಜಿದಾರರಿಗೆ ನಿವೇಶನ ನೀಡುವ ಪ್ರಕ್ರಿಯೆ ಚುರುಕುಗೊಳಿಸಬೇಕು. 69 ಮಂದಿಗೆ ಭೂಮಿ ನೀಡಲಾಗಿದೆ ಎಂದು ತಿಳಿಸಲಾಗಿದೆ.
ವೆಳ್ಳರಿಕ್ಕುಂಡು ಆರ್‍ಟಿಒ ಪರೀಕ್ಷಾ ಮೈದಾನದ ಬಳಿ ಪರೀಕ್ಷಾ ದಿನಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ರಸ್ತೆಯ ಪಶ್ಚಿಮ ಭಾಗದಲ್ಲಿರುವ ಜಮೀನನ್ನು ಬಳಸಿಕೊಳ್ಳಲು ಕ್ರಮಕೈಗೊಳ್ಳಬೇಕು ಎಂದು ಕಿನಾನೂರು ಕರಿಂದಳ ಪಂಚಾಯಿತಿ ಅಧ್ಯಕ್ಷ ಟಿ.ಕೆ.ರವಿ ಹೇಳಿದರು. ಕುಂಬಳಪಲ್ಲಿ ವೃದ್ಧಾಶ್ರಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎಲ್ಲ ಕ್ರಮಗಳನ್ನು ಪೂರ್ಣಗೊಳಿಸಿ ಶೀಘ್ರದಲ್ಲಿ ವೃದ್ಧಾಶ್ರಮ ತೆರೆಯಲಾಗುವುದು ಎಂದು ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎಂ. ಲಕ್ಷ್ಮಿ ಹೇಳಿದರು.
ತಾಲೂಕಿನ ವೆಳ್ಳರಿಕ್ಕುನ್ನು ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ವಿದ್ಯುತ್ ಉಪವಿಭಾಗದ ಕಚೇರಿಯನ್ನು ಸ್ಥಾಪಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಸಭೆಯಲ್ಲಿ ವೆಳ್ಳರಿಕ್ಕುಂಡು, ಬಿರಿಕುಳಂ ತಾಲೂಕಿನ ಅಗ್ನಿಶಾಮಕ ಠಾಣೆ ಹಾಗೂ ಕೆಎಸ್‍ಆರ್‍ಟಿಸಿ ಉಪ ಡಿಪೆÇೀದಲ್ಲಿ ಉದ್ಯೋಗ ವಿನಿಮಯ ಸಮಸ್ಯೆ ಪ್ರಸ್ತಾಪಿಸಲಾಯಿತು.