ಎಲ್ಲಾ ಕಾಲದಲ್ಲೂ, ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ, ಆದರೆ ಇದರ ಅಗತ್ಯ ಬೇಸಿಗೆ ಕಾಲದಲ್ಲಿ ತುಸು ಹೆಚ್ಚೇ. ಏಕೆಂದರೆ, ಬಿಸಿನಿಲಿಂದ ಬೆವರಿ, ದೇಹದ ವಿವಿಧ ಬಾಗಗಳಲ್ಲಿ ದುರ್ವಾಸನೆ ಹುಟ್ಟಿಕೊಳ್ಳುವುದು. ಅದರಲ್ಲೂ ಬೇಸಿಗೆಯಲ್ಲಿ ಕಂಕುಳಿಂದ ಬರುವ ಬೆವರಿನ ವಾಸನೆಯು ಮುಜುಗರಕ್ಕೆ ಕಾರಣವಾಗುವ ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಡಿಯೋಡ್ರೆಂಟ್ ಗಳು ಲಭ್ಯವಿದ್ದರೂ, ಅವುಗಳಿಂದ ಮನೆಮದ್ದುಗಳೇ ಹೆಚ್ಚು ಪರಿಣಾಮಕಾರಿ. ಆದ್ದರಿಂದ ಇಂದು ನಾವು ಕಂಕುಳಡಿಯ ವಾಸನೆ ಕಡಿಮೆ ಮಾಡುವ ಮನೆಮದ್ದುಗಳನ್ನು ತಿಳಿಸಿಕೊಡಲಿದ್ದೇವೆ.
ಕಂಕುಳಡಿಯ ದುರ್ವಾಸನೆ ಹೋಗಲಾಡಿಸಲು ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:
ಆಲೂಗಡ್ಡೆ:
ಕಂಕುಳಡಿಯಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ನೀವು ಆಲೂಗಡ್ಡೆ ಬಳಕೆಯ ಪರಿಣಾಮಕಾರಿ ವಿಧಾನದ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಒಂದು ಆಲೂಗೆಡ್ಡೆ ಸ್ಲೈಸ್ ತೆಗೆದುಕೊಂಡು ಅದನ್ನು ಸ್ವಲ್ಪ ಸಮಯದವರೆಗೆ ಕಂಕುಳಡಿಯಲ್ಲಿ ಇಡಿ. ಇದರಿಂದ ಬಿಸಿಲ ಬೇಗೆಯಿಂದ ಉಂಟಾಗುವ ವಾಸನೆಯನ್ನು ಹೋಗಲಾಡಿಸಬಹುದು.
ತೆಂಗಿನೆಣ್ಣೆ:
ಕೊಬ್ಬರಿ ಎಣ್ಣೆಯು ಕಂಕುಳಡಿಯಿಂದ ಬರುವ ದುರ್ವಾಸನೆಯನ್ನು ಹೋಗಲಾಡಿಸುವಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವುದು. ಇದಕ್ಕಾಗಿ, ನಿಮ್ಮ ಕೈಯಲ್ಲಿ ಸ್ವಲ್ಪ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಕಂಕುಳಡಿಗೆ ಮಸಾಜ್ ಮಾಡಿ. ಎಣ್ಣೆಯನ್ನು ಕೆಲವು ನಿಮಿಷಗಳ ಕಾಲ ಎಣ್ಣೆ ಹೀರಿಕೊಳ್ಳಲು ಬಿಡಿ, ನಂತರ ಅದನ್ನು ತಣ್ಣೀರಿನಿಂದ ತೊಳೆಯಿರಿ.
ಟೊಮೆಟೊ ಜ್ಯೂಸ್: ಈ ಮನೆಮದ್ದು ಬೇಸಿಗೆಯಲ್ಲಿ ಕಂಕುಳಿನಿಂದ ಬರುವ ವಾಸನೆಯನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ, ಟೊಮೆಟೊವನ್ನು ತುರಿದು, ಅದರ ರಸವನ್ನು ಪಾತ್ರೆಯಲ್ಲಿ ಹಾಕಿ. ಈಗ ಹತ್ತಿ ಉಂಡೆಯ ಸಹಾಯದಿಂದ ಕಂಕುಳಡಿ ಮಸಾಜ್ ಮಾಡಿ. ಇದರಿಂದ ದುರ್ವಾಸನೆ ಬೀರುವುದು ಕಡಿಮೆಯಾಗುವುದು.
ನಿಂಬೆ: ಲಿಂಬೆ ರಸದಲ್ಲಿ ಆಮ್ಲೀಯ ಗುಣವು ಇದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ಕಂಕುಳಿನಲ್ಲಿ ಇರುವಂತಹ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಇದು ತಡೆಯುವುದು. ತ್ವಚೆಯ ಆರೈಕೆಯಲ್ಲಿ ಅತ್ಯುತ್ತಮವಾಗಿರುವ ನಿಂಬೆ, ಕಂಕುಳಡಿಯ ವಾಸನೆಯ ಹೊರತಾಗಿ, ಡಾರ್ಕ್ ಅಂಡರ್‌ಆರ್ಮ್ ಸಮಸ್ಯೆಯನ್ನು ಸಹ ತೆಗೆದುಹಾಕಬಹುದು. ನೀವು ಇದಕ್ಕಾಗಿ ಒಂದು ಟೀಚಮಚ ನಿಂಬೆ ರಸಕ್ಕೆ ಅರ್ಧ ಟೀಚಮಚ ಅಡುಗೆ ಸೋಡಾವನ್ನು ಬೆರೆಸಬೇಕು. ಈ ಪೇಸ್ಟ್‌ನ್ನು ತೋಳುಗಳ ಕೆಳಗೆ ಹಚ್ಚಿ, ಸ್ವಲ್ಪ ಸಮಯದ ಬಳಿಕ ತಣ್ಣೀರಿನಿಂದ ತೊಳೆದು, ಸ್ವಚ್ಛಗೊಳಿಸಿ.
ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಅಂಡರ್ ಆರ್ಮ್ಸ್ ವಾಸನೆಯನ್ನು ತೆಗೆದುಹಾಕಲು ಸಹಕಾರಿ. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದಕ್ಕೆ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ. ಈಗ ಈ ನೀರಿನಿಂದ ನಿಮ್ಮ ಕಂಕುಳನ್ನು ತೊಳೆಯಿರಿ. ಈ ಪಾಕವಿಧಾನ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು.
ಲ್ಯಾವೆಂಡರ್ ಸಾರಭೂತ ತೈಲ: ಲ್ಯಾವೆಂಡರ್ ಸಾರಭೂತ ತೈಲವು ಚರ್ಮಕ್ಕೆ ಅದ್ಭುತವಾಗಿ ಕೆಲಸ ಮಾಡುವುದರ ಜೊತೆಗೆ ಕಂಕುಳಡಿಯಿಂದ ದುರ್ವಾಸನೆ ಬೀರಲು ಕಾರಣವಾಗುವ ಬ್ಯಾಕ್ಟೀರಿಯಾವನ್ನು ಇದು ನಾಶ ಮಾಡುವುದು. ಇದಕ್ಕಾಗಿ ಒಂದು ಪಿಂಗಾಣಿಯಲ್ಲಿ, 2 ಚಮಚ ಅಡುಗೆ ಸೋಡಾ ಮತ್ತು ಮೂರು ಚಮಚ ಕಾರ್ನ್‌ಫ್ಲೋರ್ ಹಾಕಿ, ಮಿಶ್ರಣ ಮಾಡಿಕೊಳ್ಳಿ. ಬಳಿಕ 8-10 ಹನಿ ಲ್ಯಾವೆಂಡರ್ ತೈಲ ಹಾಕಿ. ಮತ್ತೆ ಮಿಶ್ರನ ಮಾಡಿ. ಈ ಮಿಶ್ರಣದಿಂದ ದಿನನಿತ್ಯವೂ ಸ್ಕ್ರಬ್ ಮಾಡಿದರೆ ಅದರಿಂದ ಕೆಲವೇ ದಿನಗಳಲ್ಲಿ ದುರ್ವಾಸನೆ ಮಾಯವಾಗುವುದು.