ಬದಿಯಡ್ಕ :ಎಡನೀರು ಶ್ರೀ ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿಯವರ ತಾಂತ್ರಿಕ ಕ್ರಿಯೆಯಲ್ಲಿ ಶುಕ್ರವಾರ ಮಹಾ ಶ್ರೀಚಕ್ರ ನವಾವರಣ ಪೂಜೆ ಸಂಪನ್ನಗೊಂಡಿತು.
ಮಧ್ಯಾಹ್ನ 2.30 ರಿಂದ ಪೂಜೆ ಪ್ರಾರಂಭಗೊಂಡಿತು. ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಮತ್ತು ತಂಡದವರಿಂದ ನವಾವರಣ ಕೃತಿ ಆಲಾಪನೆ ನಡೆಯಿತು. 6.30 ರಿಂದ ಅಷ್ಟಾವಧಾನ , ರಾತ್ರಿ 8.30 ಮಹಾಪೂಜೆ ಜgಗಿತು. ರಾತ್ರಿ 9.ರಿಂದ ವಿದುಷಿ ಅಯನಾ ಪೆರ್ಲ ಅವರಿಂದ ವಿಶೇಷ ಭರತನಾಟ್ಯ ನೃತ್ಯಾರ್ಪಣಂ ಜನಪ್ರಿಯವಾಗಿ ಪ್ರದರ್ಶನಗೊಂಡಿತು. ಬಳಿಕ 10.30 ರಿಂದ ಶ್ರೀ ಕೋದಂಡರಾಮ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.