ಕಾಸರಗೋಡು: ಸರ್ಕಾರಿ ಜನರಲ್ ಆಸ್ಪತ್ರೆಗೆ ಆಸ್ಪತ್ರೆಯ ಅಭಿವೃದ್ಧಿ ಸಮಿತಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬ್ಲಡ್ ಬ್ಯಾಂಕ್‍ನ ಕೋಂಪೋನೆಂಟ್ ಟೆಕ್ನಿಕಲ್ ಸೂಪರ್‍ವೈಸರ್, ಲ್ಯಾಬ್-ಬ್ಲಡ್ ಬ್ಯಾಂಕ್ ಟಕ್ನಿಶಿಯನ್‍ನ ತೆರವಾಗಿರುವ ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಲ್ಯಾಬ್-ಬ್ಲಡ್ ಬ್ಯಾಂಕ್ ಟಕ್ನಿಶಿಯನ್ ಹುದ್ದೆಗೆ ಬಿಎಸ್ಸಿ ಎಂಎಲ್‍ಟಿ ಜತೆಗೆ ಬ್ಲಡ್ ಕೋಂಪೋನೆಂಟ್ ಸೆಪರೇಶನ್ ಯೂನಿಟ್‍ನಲ್ಲಿ ಆರು ತಿಂಗಳ ಸೇವಾನುಭವ ಅಥವಾ ಡಿಎಂಎಲ್‍ಟಿ ಜತೆಗೆ ಬ್ಲಡ್ ಕೋಂಪೋನೆಂಟ್ ಸೆಪರೇಶನ್ ವಿಭಾಗದಲ್ಲಿ ಒಂದು ವರ್ಷದ ಸೇವಾನುಭವ ಹೊಂದಿರಬೇಕಾಗಿದೆ. ಬ್ಲಡ್ ಬ್ಯಾಂಕ್ ಯಾ ಲ್ಯಾಬ್ ಟೆಕ್ನಿಶಿಯನ್‍ಗೆ ಬಿಎಸ್ಸಿ-ಎಂಎಲ್‍ಟಿ ಅಥವಾ ಡಿಎಂಎಲ್‍ಟಿ ಅಥವಾ ಬ್ಲಡ್ ಕೋಂಪೋನೆಂಟ್ ಸೆಪರೇಶನ್ ಘಟಕದಲ್ಲಿ ಸೇವಾನುಭವ ಹೊಂದಿರಬೇಕಾಗಿದೆ. ಟೆಕ್ನಿಕಲ್ ಸೂಪರ್‍ವೈಸರ್ ಸಂದರ್ಶನ ಮಾ. 7ರಂದು ಬೆಳಗ್ಗೆ 10ಕ್ಕೆ ಹಾಗೂ ಲ್ಯಾಬ್ ಟೆಕ್ನಿಶಿಯನ್ ಹುದ್ದೆಗೆ 11.30ಕ್ಕೆ ಜನರಲ್ ಆಸ್ಪತ್ರೆಯಲ್ಲಿ ಸಂದರ್ಶನ ನಡೆಯುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 230080)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.