ಕಾಸರಗೋಡು: ಯುದ್ದ ವ್ಯಸ್ಥವಾಗಿ ಸಂಕಷ್ಟಕ್ಕೆ ಸಿಲುಕಿರುವ ಉಕ್ರೇನ್ ನಿಂದ ಆಗಮಿಸಿದ ಕಾಞಂಗಾಡ್ ನಿವಾಸಿ ಅನುಶ್ರೀ ಅವರನ್ನು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಹಾಗೂ ಕೌನ್ಸಿಲರ್ ಎಚ್.ಶಿವದತ್ ಅವರು ಸಿಹಿ ತಿನ್ನಿಸಿ ಬರಮಾಡಿಕೊಂಡರು.
ಅನುಶ್ರೀ ಕಾಞಂಗಾಡ್‍ನ ಕುಶಾಲ್ ನಗರದಲ್ಲಿ ವಾಸಿಸುತ್ತಿದ್ದು, ಉಕ್ರೇನ್‍ನ ಕಾರ್ಗೀವ್ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಐದನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ. ಲಕ್ಷ್ಮಣ್ ಮತ್ತು ಬಿಜಿ ಸುಜಾ ದಂಪತಿಯ ಪುತ್ರಿ. ಯುದ್ಧದ ಆರಂಭದಲ್ಲಿ ಅವರನ್ನು ಕರೆತರುವ ಪ್ರಯತ್ನಗಳು ನಡೆದವು. ತಾನು ಏಜೆನ್ಸಿಯೊಂದರ ಸಹಾಯದಿಂದ ಮನೆಗೆ ಬಂದಿದ್ದು, ಫೆಬ್ರವರಿ 27 ರಂದು ಹೊರಟಿದ್ದೆ ಎಂದು ಅನುಶ್ರೀ ಮಾಹಿತಿ ಹಂಚಿಕೊಂಡಿರುವರು. ಕಾಲ್ನಡಿಗೆಯಲ್ಲಿ ಮತ್ತು ಟ್ಯಾಕ್ಸಿಯಲ್ಲಿ ಗಡಿಯನ್ನು ತಲುಪಲು ಎರಡು ದಿನಗಳು ಬೇಕಾಯಿತು. ಗಡಿಯಲ್ಲಿ ಸುಮಾರು ಎಂಟು ಗಂಟೆಗಳ ಹಿಮ ಮತ್ತು ಚಳಿಯನ್ನು ಸಹಿಸಬೇಕಾಯಿತು. ತವರಿಗೆ ಮರಳಿರುವುದು ಸಂತಸ ತಂದಿದೆ ಎಂದು ಅನುಶ್ರೀ ಹೇಳಿದ್ದಾರೆ.