ಮುಟ್ಟು ಎಂಬುವುದು ಹದಿ ಹರೆಯದ ಪ್ರಾಯದಿಂದ ಮೆನೋಪಾಸ್‌ವರೆಗೆ ಪ್ರತೀ ತಿಂಗಳು ನೈಸರ್ಗಿಕ ಪ್ರಕ್ರಿಯೆ. ಈ ಸಮಯದಲ್ಲಿ ಕೆಲವರಿಗೆ ಕಿರಿಕಿರಿ ಅನಿಸಿದರೆ ಇನ್ನು ಕೆಲವರಿಗೆ ತುಂಬಾ ಹೊಟ್ಟೆ ನೋವು ಉಂಟಾಗುವುದು. ಈ ನೋವು ಶಮನವಾಗಲು ಮಾತ್ರೆ ತೆಗೆದುಕೊಳ್ಳುತ್ತಾರೆ, ಆದರೆ ಮಾತ್ರೆ ತೆಗೆದುಕೊಳ್ಳುವುದು ಆರೊಗ್ಯಕರವಲ್ಲ, ಅದರ ಬದಲಿಗೆ ನೈಸರ್ಗಿಕ ಮನೆಮದ್ದುಗಳನ್ನು ಮಾಡಬೇಕು.
ಮುಟಟಿನ ಹೊಟ್ಟೆನೋವು ಕಡಿಮೆ ಮಾಡಲು ಅನೇಕ ಮನೆಮದ್ದುಗಳಿವೆ, ಇಲ್ಲಿ ನಾವು ಅಂಥದ್ದೇ ಮನೆಮದ್ದು ಹೇಳಿದ್ದೇವೆ. ಈ ಮನೆಮದ್ದು ಕುಡಿದರೆ ನಿಮ್ಮ ಮುಟ್ಟಿನ ನೋವು ಕೆಲವೇ ಹೊತ್ತಿನಲ್ಲಿ ಮಾಯವಾಗುವುದು. ಆ ಮನೆಮದ್ದು ಯಾವುದು, ಅದನ್ನು ತಯಾರಿಸುವುದು ಹೇಗೆ ಎಂದು ನೋಡೋಣ:
ಮುಟ್ಟಿನ ನೋವು ಕಡಿಮೆ ಮಾಡುವಲ್ಲಿ ಅಜ್ವೈನ್ ತುಂಬಾ ಪರಿಣಾಮಕಾರಿ. ಅಜ್ವೈನ್ ಟೀ ಮಾಡಿ ಕುಡಿಯಬೇಕು, ಅದನ್ನು ತಯಾರಿಸುವುದು ಹೇಗೆ? ಈ ಅಜ್ವೈನ್ ಟೀ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳೇನು? ಎಂದು ನೋಡೋಣ ಬನ್ನಿ:
ಅಜ್ವೈನ್ ಟೀಗೆ ಬೇಕಾಗುವ ಸಾಮಗ್ರಿ ಹಾಗೂ ಅದರ ಗುಣಗಳು
1.ಅಜ್ವೈನ್
2.ಟೀ ಎಲೆ
3. ಬೆಲ್ಲ
4. ತುಪ್ಪ
ಅಜ್ವೈನ್:
ಅಜ್ವೈನ್‌ನಲ್ಲಿ ನಾರಿನಂಶ ಅಧಿಕವಿದ್ದು, ವಿಟಮಿನ್ಸ್, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್‌ಗಳು ಇದ್ದು ಇದು ನೋವನ್ನು ಕಡಿಮೆ ಮಾಡುವುದು.
ಟೀ ಎಲೆ:
ಪಾಲಿಫೀನೋಲ್ಸ್ , ಟೀ ಎಲೆಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳಾದ ಕ್ಯಾಟೆಚಿನ್‌ಗಳು, ಪಾಲಿಫೀನೋಲ್ಸ್ ಇದ್ದು ಇದು ಚಯಪಚಯ ಕ್ರಿಯೆಗೆ ಸಹಕಾರಿ, ಇದರಿಂದ ಮುಟ್ಟಿನ ಸಮಯದಲ್ಲಿ ಕಾಡುವ ಮುಟ್ಟು ಕಡಿಮೆಯಾಗುವುದು.
ಬೆಲ್ಲ:
ಬೆಲ್ಲ ತಿನ್ನುವುದರಿಂದ ಹೀಮೋಗ್ಲೋಬಿನ್ ಹೆಚ್ಚುವುದು, ರಕ್ತ ಹೀನತೆ, ಸ್ನಾಯು ಸೆಳೆತ, ತಲೆಸುತ್ತು, ಅನಿಯಮಿತ ಮುಟ್ಟು ಇವುಗಳನ್ನು ತಡೆಗಟ್ಟುವಲ್ಲಿ ಬೆಲ್ಲ ಪ್ರಯೋಜನಕಾರಿ.
ತುಪ್ಪ:
ತುಪ್ಪದಲ್ಲಿ ವಿಟಮಿನ್ ಎ, ಇ, ಡಿ ಇದ್ದು ಇದು ದೇಹವು ಖನಿಜಾಂಶಗಳು, ಕೊಬ್ಬಿನ ಆಮ್ಲಗಳು ಇವುಗಳನ್ನು ಹೀರಿಕೊಳ್ಳುವಂತೆ ಮಾಡುತ್ತದೆ ಹಾಗೂ ಮುಟ್ಟಿನ ಸಮಯದಲ್ಲಿ ಕಾಡುವ ಸ್ನಾಯು ಸೆಳೆತ ಕಡಿಮೆ ಮಾಡುವುದು.
ಅಜ್ವೈನ್ ಟೀ ಮಾಡುವುದು ಹೇಗೆ? * ಒಂದು ಕಪ್ ನೀರಿಗೆ ಬೆಲ್ಲ ಹಾಕಿ ಕುದಿಸಿ * ಅದಕ್ಕೆ 1/2 ಚಮಚ ಅಜ್ವೈನ್ ಹಾಕಿ ಕುದಿಸಿ * ನಂತರ ಸ್ವಲ್ಪ ಟೀ ಎಲೆ ಹಾಕಿ ಕುದಿಸಿ. * ನಂತರ ಟೀಯನ್ನು ಸೋಸಿ ಅದಕ್ಕೆ ಅರ್ಧ ಚಮಚ ತುಪ್ಪ ಹಾಕಿ ಕುಡಿಯಿರಿ. ಈ ಟೀ ಕುಡಿದ ಅರ್ಧ ಗಂಟೆಗೆಲ್ಲಾ ನಿಮ್ಮ ಹೊಟ್ಟೆ ನೋವು, ಸ್ನಾಯು ಸೆಳೆತ, ಸುಸ್ತು ದೂರ ಓಡಿರುತ್ತದೆ.