HEALTH TIPS

ಅಚ್ಚರಿಯಾದ್ರೂ ಸತ್ಯ; ಅಸ್ಸಾಂ ಚಹಾಕ್ಕೆ ಉಕ್ರೇನ್‌ ಅಧ್ಯಕ್ಷರ ಹೆಸರು!

Top Post Ad

Click to join Samarasasudhi Official Whatsapp Group

Qries

               ಗುವಾಹತಿ: ಅಚ್ಚರಿಯಾದ್ರೂ ಸತ್ಯ ಅಸ್ಸಾಂ ಮೂಲದ ಸ್ಟಾರ್ಟಪ್ ವೊಂದು ತನ್ನ ಚಹಾಕ್ಕೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿಪ್ ಝೆಲೆನ್ಸ್ಕಿ ಅವರ ಹೆಸರನ್ನಿಟ್ಟಿದೆ.

               ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಇಡೀ ಪ್ರಪಂಚದ ಗಮನವನ್ನು ಸೆಳೆದಿದ್ದು, ಉಕ್ರೇನ್ ಅಧ್ಯಕ್ಷ ವೊಲೋಡಿಮಿಪ್ ಝೆಲೆನ್ಸ್ಕಿ ಅವರಿಗೆ ಜಗತ್ತಿನ ನಾನಾ ದೇಶಗಳು ಬೆಂಬಲ ಘೋಷಣೆ ಮಾಡಿವೆ.  ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಉಂಟಾದ ನಾಶ, ಹಾನಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಅಂತೆಯೇ ಜಗತ್ತಿನ ಪುಟ್ಟ ರಾಷ್ಟ್ರವಾದರೂ ಜಗತ್ತಿನ ಪ್ರಬಲ ರಾಷ್ಟ್ರದ ಎದುರು ಮಂಡಿಯೂರದೆ ಕೆಚ್ಚದೆಯಿಂದ ಹೋರಾಟ ಮಾಡುತ್ತಿರುವ ಉಕ್ರೇನ್ ಹೋರಾಟವೂ ಕೂಡ ವ್ಯಾಪಕ ಸುದ್ದಿಯಾಗುತ್ತಿದೆ.

               ರಷ್ಯಾದ ಆಕ್ರಮಣದ ವಿರುದ್ಧ "ಕೊನೆಯ ಸೈನಿಕರು ಇರುವವರೆಗೆ" ಹೋರಾಡಲು ಪ್ರತಿಜ್ಞೆ ಮಾಡಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಅನೇಕರು ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ ಮತ್ತು ಅವರ ದೇಶವನ್ನು ಉಳಿಸಲು ಮಾಡುವ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ.

               ಈ ನಡುವೆ ಭಾರತದ ಅಸ್ಸಾಂನ ಸ್ಟಾರ್ಟ್ ಅಪ್‌ ಕಂಪನಿಯೊಂದು ಉಕ್ರೇನ್‌ ಅಧ್ಯಕ್ಷರಿಗೆ ಗೌರವ ಸಲ್ಲಿಸುವ ಸಲುವಾಗಿ ಹೊಸ ಚಹಾ ಪುಡಿಗೆ ಅಧ್ಯಕ್ಷ ಝೆಲೆನ್ಸ್ಕಿ ಅವರ ಹೆಸರನ್ನಿಟ್ಟಿದೆ. ದೇಶಕ್ಕಾಗಿ ಹೋರಾಡುತ್ತಿರುವ ಉಕ್ರೇನ್ ಅಧ್ಯಕ್ಷರನ್ನು ತಮ್ಮದೇ ಆದ ರೀತಿಯಲ್ಲಿ ಗೌರವಿಸಲು ಈ ಸ್ಟಾರ್ಟಪ್ ನಿರ್ಧರಿಸಿದ್ದು, ಅವರ ಹೆಸರನ್ನು ಅವರ ಹೊಸ ಚಹಾಕ್ಕೆ ಇಟ್ಟಿದೆ. ಅಧ್ಯಕ್ಷರ ಶೌರ್ಯಕ್ಕೆ ಗೌರವವಾಗಿ ತನ್ನ ಚಹಾವನ್ನು "ಝೆಲೆನ್ಸ್ಕಿ" ಎಂದು ಹೆಸರಿಸಲು ಸ್ಟಾರ್ಟ್-ಅಪ್ ನಿರ್ಧರಿಸಿದೆ.

               ಸಂಸ್ಥೆಯು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಶೌರ್ಯ ಮತ್ತು ಧೈರ್ಯವನ್ನು ಗೌರವಿಸಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಹೆಸರಿನ ಸಿಟಿಸಿ ಚಹಾವನ್ನು ಪ್ರಾರಂಭಿಸಿದೆ.

              ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಸುಗಂಧ ಚಹಾದ ನಿರ್ದೇಶಕ ರಂಜಿತ್ ಬರುವಾ, 'ಝೆಲೆನ್ಸ್ಕಿ' ಬ್ರ್ಯಾಂಡ್, ಪ್ರಬಲ ಅಸ್ಸಾಂ ಅಖಿಅ ಚಹಾವನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. Zeಟeಟಿsಞಥಿಥಿ ಬ್ರ್ಯಾಂಡ್ ಚಹಾದ ಚಿತ್ರವನ್ನು ಟೀ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾದ ಪ್ರಧಾನ ಅಧಿಕಾರಿ ಜೋಯ್ದೀಪ್ ಫುಕನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,  ಯುದ್ಧ ಪೀಡಿತ ಉಕ್ರೇನ್‌ನಿಂದ ಪಾರಾಗುವ ಯುಎಸ್ ಪ್ರಸ್ತಾಪವನ್ನು ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷರ ಶೌರ್ಯ ಮತ್ತು ಧೈರ್ಯವನ್ನು ಗೌರವಿಸುವುದು ನಮ್ಮ ಮೂಲ ಆಲೋಚನೆಯಾಗಿದೆ. ಝೆಲೆನ್ಸ್ಕಿ ಅವರು ಯುದ್ಧ ಭೂಮಿ ತೊರೆಯದೇ ಕೊನೆಯ ಸೈನಿಕ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು. ಇದು ಅವರ ಇದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಪಿಟಿಐ ಜೊತೆ ಮಾತನಾಡಿದ ಸುಗಂಧ ಚಹಾದ ನಿರ್ದೇಶಕ ರಂಜಿತ್ ಬರುವಾ ತಿಳಿಸಿದರು. 

              ಆರೊಮ್ಯಾಟಿಕ್ ಟೀ ಕಂಪನಿಯ ಝೆಲೆನ್ಸ್ಕಿ ಬ್ರಾಂಡ್ ಚಹಾವು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ ಎಂದು ಬರುವಾ ಈ ಸಂದರ್ಭದಲ್ಲೇ ಹೇಳಿದರು. 


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries