ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜಿನಲ್ಲಿ ಮಾ. 23ರಿಂದ 27ರ ವರೆಗೆ ನಡೆಯಲಿರುವ ಕಣ್ಣೂರು ವಿಶ್ವ ವಿದ್ಯಾಲಯ ಕಲೋತ್ಸವದ ವೆಬ್‍ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಕಾಸರಗೋಡು ವಿದ್ಯಾನಗರ ಸರ್ಕಾರಿ ಕಾಲೇಜಿನಲ್ಲಿ ಜರುಗಿತು.
ಕಲೋತ್ಸವದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು, ಕಾಲೇಜು, ಅಧಿಕಾರಿಗಳ ನೋಂದಾವಣೆ, ಕಾರ್ಯಕ್ರಮಗಳ ಮಾಹಿತಿ, ಕಾಲೇಜುಗಳಿಗೆ ಸಂಬಂಧಿಸಿದ ಮಾಹಿತಿಗಳನ್ನೊಳಗೊಂಡ ವೆಬ್‍ಸೈಟ್ ತೆರೆಯಲಾಗಿದೆ. ಇದರೊಂದಿಗೆ ಸ್ಪರ್ಧಾ ಮಾಹಿತಿ ಸಕಾಲಕ್ಕೆ ಲಭ್ಯವಾಗುವ ರೀತಿಯಲ್ಲಿ ಪ್ರತ್ಯೇಕ ಆ್ಯಪ್ ತಯಾರಿಸಲಾಗುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ನಗರಸಭಾ ಅಧ್ಯಕ್ಷ, ವಕೀಲ ಪಿ.ಎಂ ಮುನೀರ್ ವೆಬ್‍ಸೈಟ್ ಲೋಕಾರ್ಪಣೆಗೈದರು. ವಿಶ್ವ ವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಂ.ಸಿ ರಾಜು, ಸೆನೆಟ್ ಸದಸ್ಯ ಕೆ. ವಿಜಯನ್, ಕಾಲೇಜು ಪ್ರಾಂಶುಪಾಲ ಡಾ. ಕೆ ಹರಿಕುರುಪ್, ಎನ್.ಎ ಅಬೂಬಕ್ಕರ್ ಮುಂತಾದವರು ಉಪಸ್ಥಿತರಿದ್ದರು.