HEALTH TIPS

ಒನ್ ಡೇಟಾ, ಒನ್ ಎಂಟ್ರೀ: ಇನ್ನು ದೇಶಾದ್ಯಂತ ಪತ್ತೆಗೆ ಹೊಸ ವಿಧಾನ

              ದೇಶದ ಎಲ್ಲ ರಾಜ್ಯಗಳ ಅಪರಾಧ ಪ್ರಕರಣ, ಆರೋಪಿಗಳ ಬಂಧನ, ಕೈದಿಗಳ ಪೂರ್ವಾಪರ, ಕೋರ್ಟ್ ವಿಚಾರಣೆ ವಿವರ, ಶಿಕ್ಷೆ ಪ್ರಮಾಣ ಸೇರಿ ಕ್ರಿಮಿನಲ್ ಪ್ರಕರಣಗಳ ಸಮಗ್ರ ಮಾಹಿತಿ ಇನ್ಮುಂದೆ ಒಂದೇ ವೇದಿಕೆಯಲ್ಲಿ ಸಿಗಲಿದೆ!

             ಕ್ರಿಮಿನಲ್ ನ್ಯಾಯದಾನ ಪ್ರಕ್ರಿಯೆಯ ಐದು ವಿಭಾಗಗಳ ಸಂಯೋಜನೆ ಮುಖಾಂತರ ಪರಿಣಾಮಕಾರಿ ಹಾಗೂ ಆಧುನಿಕ ಪೊಲೀಸಿಂಗ್ ವ್ಯವಸ್ಥೆ ಸೃಷ್ಟಿಸುವ ನಿಟ್ಟಿನಲ್ಲಿ ಜಾರಿಗೊಳಿಸುತ್ತಿರುವ 'ಒನ್ ಡೇಟಾ ಒನ್ ಎಂಟ್ರಿ' ಯೋಜನೆ ಅನುಷ್ಠಾನ ಪ್ರಕ್ರಿಯೆ ಇದೇ ಏಪ್ರಿಲ್​ನಲ್ಲಿ ಶುರುವಾಗಲಿದೆ.


           ಪೊಲೀಸ್ (ಅಪರಾಧ, ಕ್ರಿಮಿನಲ್ ನಿಗಾ ಮತ್ತು ಸಂಪರ್ಕ ಜಾಲ), ಇ-ಫೋರೆನ್ಸಿಕ್ (ವಿಧಿವಿಜ್ಞಾನ ಪ್ರಯೋಗಾಲಯಗಳು), ಇ-ಕೋರ್ಟ್ (ನ್ಯಾಯಾಲಯಗಳು), ಇ-ಪ್ರಾಸಿಕ್ಯೂಷನ್ ಮತ್ತು ಇ- ಜೈಲು (ಕಾರಾಗೃಹಗಳು) ಐಟಿ ವ್ಯವಸ್ಥೆಯನ್ನು ಇಂಟರ್ ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಂ ಯೋಜನೆಯಡಿ ಏಕೀಕರಣಗೊಳಿಸಲಾಗುತ್ತಿದೆ. ಡಿಜಿಟಲೀಕರಣದ ವ್ಯವಸ್ಥೆಯಡಿ ಬೆರಳ ತುದಿಯಲ್ಲೇ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಸಮಗ್ರ ಮಾಹಿತಿ ದೊರೆಯಲಿದೆ. ಈ ಐದೂ ವಿಭಾಗಗಳ ದಂತ್ತಾಂಶ ಒಂದೆಡೆ ಸಂಯೋಜಿಸುವುದರಿಂದ ಯಾವುದೇ ರಾಜ್ಯದ ಅಪರಾಧ ಪ್ರಕರಣಗಳ ಎಲ್ಲ ಮಾಹಿತಿ ಒಂದೇ ಕಡೆ ಲಭ್ಯವಾಗಲಿದೆ. ಇದರಿಂದ ಶೀಘ್ರವಾಗಿ ಕೇಸಿನ ಮಾಹಿತಿ ವಿನಿಮಯವಾಗುವುದರಿಂದ ನ್ಯಾಯದಾನದ ಪ್ರಕ್ರಿಯೆ ವಿಳಂಬವಾಗುವುದಿಲ್ಲ. ಹೈಟೆಕ್ ಪೊಲೀಸ್ ವ್ಯವಸ್ಥೆ ಜಾರಿಯಾಗುವುದರ ಜತೆಗೆ ಪೊಲೀಸರ ತನಿಖಾ ಸಾಮರ್ಥ್ಯವೂ ಬಲಗೊಳ್ಳಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

               ಪ್ರತ್ಯೇಕ ದಾಖಲು ಅಗತ್ಯವಿಲ್ಲ: ಪ್ರಸ್ತುತ ಪೊಲೀಸ್, ಜೈಲು, ಎಫ್​ಎಸ್​ಎಲ್, ಅಭಿಯೋಜನೆ ಹಾಗೂ ನ್ಯಾಯಾಲಯ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಸಂಗ್ರಹಿಸುವ ದತ್ತಾಂಶವನ್ನು ಪ್ರತ್ಯೇಕವಾಗಿ ದಾಖಲಿಸುವ ವ್ಯವಸ್ಥೆ ಇದೆ. ಒನ್ ಡೇಟಾ ಒನ್ ಎಂಟ್ರಿ ತತ್ವದ ಮೇಲೆ ಜಾರಿಯಾಗುತ್ತಿರುವ ಐಸಿಜೆಎಸ್ ಯೋಜನೆಯಡಿ ಒಂದು ವಿಭಾಗದಲ್ಲಿ ಡೇಟಾ ನಮೂದು ಮಾಡಿದರೆ ಸಾಕು ಎಲ್ಲ ಕಡೆಗಳಲ್ಲೂ ಸಿಗಲಿದೆ.

                ಲಾಭಗಳೇನು?: ಮೊದಲ ಹಂತದಲ್ಲಿ ಜಾರಿಯಾಗಿರುವ ಸಿಸಿಟಿಎನ್​ಎಸ್ (ಕ್ರೖೆಂ ಆಂಡ್ ಕ್ರಿಮಿನಲ್ ಟ್ರಾಯಕಿಂಗ್ ನೆಟ್​ವರ್ಕ್ ಸಿಸ್ಟಂ) ಯೋಜನೆಯಡಿ ಆಯಾ ರಾಜ್ಯಗಳು ಪ್ರತ್ಯೇಕ ಐಟಿ ವ್ಯವಸ್ಥೆ ಹೊಂದಲು ಅವಕಾಶ ಕಲ್ಪಿಸಲಾಗಿತ್ತು. ದೇಶದ ಎಲ್ಲ ಪೊಲೀಸ್ ಠಾಣೆಗಳು ಇದರ ವ್ಯಾಪ್ತಿಗೆ ಒಳಪಟ್ಟಿವೆ. ಕ್ರಿಮಿನಲ್ ಪ್ರಕರಣದ ಎಫ್​ಐಆರ್​ನಿಂದ ನ್ಯಾಯಾಲಯದ ತೀರ್ಪಿನವರೆಗೆ ಇದರಲ್ಲಿ ಸಿಗುತ್ತಿವೆ. ಆರೋಪಿಗಳ ಬೆರಳಚ್ಚು ಸಂಗ್ರಹಿಸಿ ದಾಖಲಿಸಲಾಗಿದೆ. ಯಾವುದೇ ರಾಜ್ಯದಲ್ಲಿ ಆರೋಪಿ ಅಪರಾಧ ಕೃತ್ಯವೆಸಗಿದ್ದರೆ ಆತನ ಪತ್ತೆಹಚ್ಚಲು ಸಾಧ್ಯವಾಗುತ್ತಿದೆ.

              ಎಷ್ಟು ವೆಚ್ಚ, ಯಾವಾಗ ಪೂರ್ಣ?: ಸಿಸಿಟಿಎನ್​ಎಸ್ (ಕ್ರೖೆಂ ಆಂಡ್ ಕ್ರಿಮಿನಲ್ ಟ್ರಾಯಕಿಂಗ್ ನೆಟ್​ವರ್ಕ್ ಸಿಸ್ಟಂ) ಯೋಜನೆಯ 2ನೇ ಹಂತವಾಗಿ 3375 ಕೋಟಿ ರೂ. ವೆಚ್ಚದಲ್ಲಿ ಐಸಿಜೆಎಸ್ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಹೊಸ ಯೋಜನೆ ಜಾರಿಗೆ ರಾಜ್ಯಗಳಿಗೆ ಪ್ರತ್ಯೇಕವಾಗಿ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಬದಲಾಗಿ ಸಿಸಿಟಿಎನ್​ಎಸ್ ನಿಧಿಯನ್ನೇ ಬಳಸಿಕೊಳ್ಳಲು ಸೂಚಿಸಲಾಗಿದೆ. 2022ರ ಏಪ್ರಿಲ್​ನಿಂದ ಏಕೀಕರಣಗೊಳಿಸುವ ಪ್ರಕ್ರಿಯೆ ಆರಂಭವಾಗಲಿದ್ದು, 2025-26ರ ವೇಳೆಗೆ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆ ತಲುಪಿಸುವ ಪಕ್ರಿಯೆ ಪೂರ್ಣಪ್ರಮಾಣದಲ್ಲಿ ಯೋಜನೆ ವ್ಯಾಪ್ತಿಗೆ ಒಳಪಡಲಿದೆ.

              ಹೊಣೆಗಾರಿಕೆ ಯಾರಿಗೆ?: ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ಯೋಜನೆಯನ್ನು ಜಾರಿಗೊಳಿಸುವ ಜವಾಬ್ದಾರಿ ನಿರ್ವಹಿಸಲಿದೆ. ಯೋಜನೆ ಅನುಷ್ಠಾನಗೊಳಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರ, (ಎನ್​ಐಸಿ) ಎನ್​ಸಿಆರ್​ಬಿಗೆ ನೆರವು ಕೊಡಲಿದೆ.

                                      ಏನೆಲ್ಲ ಮಾಹಿತಿ ಸಿಗುತ್ತೆ?

  •           ದೇಶದ ಎಲ್ಲ ರಾಜ್ಯಗಳ ಕ್ರಿಮಿನಲ್ ಪ್ರಕರಣಗಳ ವಿವರ. ಎಫ್​ಐಆರ್, ಕೇಸ್ ನಂಬರ್, ಕಾರಾಗೃಹ ಐಡಿ.
  •         ಪೊಲೀಸರು ಸಂಗ್ರಹಿಸಿರುವ ಕೇಸಿನ ವಿವರ, ಆರೋಪಿಗಳ ಬಂಧನ, ಅವರ ಹೇಳಿಕೆ, ಸಾಕ್ಷಿದಾರರ ಮಾಹಿತಿ, ವೈದ್ಯಕೀಯ ಪರೀಕ್ಷಾ ವಿವರ
  •         ಕೋರ್ಟ್ ವಿಚಾರಣೆ, ವಿಚಾರಣೆ ಯಾವ ಹಂತದಲ್ಲಿದೆ, ವಾರಂಟ್, ಸಮನ್ಸ್, ಜಾಮೀನು, ಶಿಕ್ಷೆ, ತೀರ್ಪಿನ ಮಾಹಿತಿ, ಎಫ್​ಎಸ್​ಎಲ್ ವರದಿ
  •             ಸರ್ಕಾರಿ ಅಭಿಯೋಜನೆ, ಕಾನೂನು ಅಭಿಪ್ರಾಯ, ಕೇಸಿನ ಸಂಬಂಧ ಪ್ರತಿನಿತ್ಯ ನಡೆಯುವ ವಿಚಾರಣಾ ಪ್ರಕ್ರಿಯೆಗಳ ಮಾಹಿತಿ, ಪ್ರಮಾಣ ಪತ್ರಗಳು
  •              ಕೋರ್ಟ್ ಕೇಸ್ ದಾಖಲೆ, ಕಲಾಪದ ವಿವರ, ಫೋಟೋಗಳು/ವಿಡಿಯೋ, ಡಾಕ್ಯುಮೆಂಟರಿ ಸಾಕ್ಷ್ಯ, ತೀರ್ಪಿನ ಪ್ರತಿಗಳು

                                        ಅನುಕೂಲಗಳೇನು?

  •             ಕ್ರಿಮಿನಲ್ ಪ್ರಕರಣಗಳ ನ್ಯಾಯದಾನ ಒದಗಿಸಲು ಬೇಕಾದ ಮಾಹಿತಿ ತ್ವರಿತ ವಿನಿಮಯಕ್ಕೆ ಅವಕಾಶ
  •           ಕ್ರಿಮಿನಲ್ ನ್ಯಾಯ ತಲುಪಿಸುವ ಪ್ರಕ್ರಿಯೆಯ ಹಾದಿ ಸುಗಮ ಹಾಗೂ ವೈಜ್ಞಾನಿಕ ತನಿಖೆಗೆ ಸಹಕಾರಿ ತನಿಖಾ ಸಾಮರ್ಥ್ಯ ವೃದ್ಧಿಸುವ ಜತೆಗೆ ಶೀಘ್ರವಾಗಿ ತನಿಖೆ ಪೂರ್ಣಗೊಳಿಸಲು ಸಾಧ್ಯ
  • ಸಾಂಪ್ರದಾಯಿಕ ಪದ್ಧತಿಯಿಂದ ಸ್ಮಾರ್ಟ್ ಪೊಲೀಸಿಂಗ್ ವ್ಯವಸ್ಥೆಯತ್ತ ಅಪ್​ಗ್ರೇಡ್
  • ದತ್ತಾಂಶ ನಮೂದಿಸುವಲ್ಲಿನ ದೋಷ ನಿವಾರಣೆ ಜತೆಗೆ ಗುಣಮಟ್ಟದ ದತ್ತಾಂಶ ಲಭ್ಯ
  • ಹಳೇ ಪದ್ಧತಿಗೆ ತಿಲಾಂಜಲಿಯಿಟ್ಟು ಪೇಪರ್​ಲೆಸ್ ವ್ಯವಸ್ಥೆಗೆ ಹೊಂದಿಕೊಳ್ಳುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries