ಬದಿಯಡ್ಕ: ಕೇರಳ ಸ್ಟೇಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವತಿಯಿಂದ ವಾಸಯೋಗ್ಯವಾದ ಮನೆಯಿಲ್ಲದ ಮಕ್ಕಳಿಗೆ ಮನೆ ನಿರ್ಮಿಸಿಕೊಡುವ ಯೋಜನೆಯಾಗಿದೆ ಸ್ನೇಹ ಭವನ. ಈ ಯೋಜನೆಯ ಅಂಗವಾಗಿ ಕುಂಬಳೆ ಸ್ಥಳೀಯ ಸಂಸ್ಥೆಯ ವತಿಯಿಂದ ನಿರ್ಮಿಸಿಕೊಡುವ ಸ್ನೇಹ ಭವನಕ್ಕೆ 32570 ರೂ. ದೇಣಿಗೆಯನ್ನು ಶಾಲೆಯ ಪ್ರಬಂಧಕರಾದ ಜಯದೇವ ಖಂಡಿಗೆ ಇವರು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಇವರಿಗೆ ಗುರುವಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಶಿವಪ್ರಕಾಶ ಎಮ್ ಕೆ, ಕಿರಿಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ರೈ, ಹೈಯರ್ ಸೆಕೆಂಡರಿ ವಿಭಾಗದ ಹಿರಿಯ ಅಧ್ಯಾಪಿಕೆ ಜಯಲಕ್ಷ್ಮಿ, ಸ್ಕೌಟ್ ಅಧ್ಯಾಪಕರಾದ ಶಿವರಂಜನ್ ಪಿ ಆರ್, ಅವಿನಾಶ ಕಾರಂತ ಎಮ್,ಗೈಡ್ ಅಧ್ಯಾಪಿಕೆಯರಾದ ವಾಣಿ ಪಿ ಎಸ್, ಅನ್ನಪೂರ್ಣ ಎಸ್, ಸುಲಲಿತ ಪಿ ಕೆ ಉಪಸ್ಥಿತರಿದ್ದರು.