ಕಾಸರಗೋಡು: ಪಾಂಗೋಡು ಶ್ರೀ ದುರ್ಗಾ ಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಆಯೋಜಿಸಿದ ಸಾಂಸ್ಕøತಿಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಖಂಡ ದಾಸ ಸಂಕೀರ್ತನೆ ನಡೆಸಿದ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ರಜತ ತಾಳವನ್ನೊಳಗೊಂಡ ಸಂಕೀರ್ತನಾ ಸಾಮ್ರಾಟ್ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಖೇಶ್, ಕಾಸರಗೋಡು ನಗರಸಭಾ ಸದಸ್ಯೆ ರಂಜಿತಾ ಮೋಹನ್‍ದಾಸ್, ಪುತ್ತೂರು ಮುನ್ಸಿಪಲ್ ಕೌನ್ಸಿಲರ್ ಸಂತೋಷ್ ನಾಯಕ್ ಬೊಳುವಾರ್, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು, ರಾಮಕ್ಷತ್ರಿಯ ಸೇವಾ ಸಂಘ ಸುರತ್ಕಲ್ ಇದರ ಅಧ್ಯಕ್ಷೆ ರೇಖಾ ಸುಖೇಶ್ ರಾವ್, ಹೊನ್ನೆಮೂಲೆ ಶ್ರೀ ಚೆನ್ನ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರೋಹಿತಾಕ್ಷ ನಾಗರಕಟ್ಟೆ, ಭಿಕ್ಷು ಲಕ್ಷ್ಮಣಾನಂದ ಸೇವಾ ಸಮಾಜ ನಾಗರಕಟ್ಟೆ ಇದರ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಗರಕಟ್ಟೆ, ಪಾಂಗೋಡು ದೇವಸ್ಥಾನ ಸೇವಾ ಸಮಿತಿಯ ಪ್ರದೀಪ್ ನಾಯಕ್ ನಾಗರಕಟ್ಟೆ, ಶ್ರೀ ಕ್ಷೇತ್ರದ ಪಾತ್ರಿ ಪ್ರವೀಣ್ ನಾಯಕ್, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ವಾಮನ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್, ಜಗದೀಶ್ ಕೂಡ್ಲು, ಪ್ರದೀಪ್ ಬೇಕಲ್ ಮೊದಲಾದವರು ಉಪಸ್ಥಿತರಿದ್ದರು.