ನವದೆಹಲಿ: ಉತ್ತರ ಪ್ರದೇಶದಲ್ಲಿ 7ನೇ ಹಾಗೂ ಕೊನೆಯ ಹಂತದ ಮತದಾನ ಸೋಮವಾರ ಸಂಜೆ ಮುಕ್ತಾಯವಾಗಿದ್ದು, ಇದರೊಂದಿಗೆ ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ತೆರೆಬಿದ್ದಿದೆ. ಈಗ ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಆರಂಭವಾಗಿದೆ.
ಹಲವು ಸಮೀಕ್ಷೆಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಮತದಾರ ಈ ಬಾರಿಯೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ಕೈಹಿಡಿಯುವ ಸಾಧ್ಯತೆ ಇದ್ದು, ಮತ್ತೊಮ್ಮೆ ಕಮಲ ಅರಳಲಿದೆ.
ಸಿಎನ್‌ಎನ್ ನ್ಯೂಸ್ 18 ಸಮೀಕ್ಷೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಎರಡನೇ ಬಾರಿ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದೆ. ಬಿಜೆಪಿ 262 ರಿಂದ 277 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದ್ದರೆ, ಎಸ್‌ಪಿ ಮೈತ್ರಿಕೂಟ 119 ರಿಂದ 134 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಕಾಂಗ್ರೆಸ್ 3 ರಿಂದ 4 ಸ್ಥಾನ ಪಡೆದರೆ, ಬಿಎಸ್ ಪಿ 7 ರಿಂದ 15 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
ಇಟಿಜಿ ರಿಸರ್ಚ್ ಸಮೀಕ್ಷೆಯ ಪ್ರಕಾರ: ಬಿಜೆಪಿ 230–245, ಕಾಂಗ್ರೆಸ್ 2–6, ಎಸ್‌ಪಿ+ 150–165, ಬಿಎಸ್‌ಪಿ 5–10
ನ್ಯೂಸ್ ಎಕ್ಸ್– ಪೋಲ್‌ಸ್ಟರ್ ಪ್ರಕಾರ: ಬಿಜೆಪಿ 211–245, ಕಾಂಗ್ರೆಸ್ 4–6, ಎಸ್‌ಪಿ+ 146–160, ಬಿಎಸ್‌ಪಿ 14–24
ರಿಪಬ್ಲಿಕ್ ಟಿ.ವಿ ಸಮೀಕ್ಷೆ: ಬಿಜೆಪಿ 240, ಕಾಂಗ್ರೆಸ್ 4, ಎಸ್‌ಪಿ+ 140, ಬಿಎಸ್‌ಪಿ 17
ಪಂಜಾಬ್
ಇಟಿಜಿ ರಿಸರ್ಚ್ ಸಮೀಕ್ಷೆ ಪ್ರಕಾರ: ಬಿಜೆಪಿ 3–7, ಕಾಂಗ್ರೆಸ್ – 27–33, ಎಎಪಿ 70–75, ಅಖಾಲಿದಳ 7–13
ಇಂಡಿಯಾ ಟುಡೆ: ಬಿಜೆಪಿ 1–4, ಕಾಂಗ್ರೆಸ್ 19–31, ಎಎಪಿ 76–90, ಅಖಾಲಿದಳ 7–11
ನ್ಯೂಸ್‌ಎಕ್ಸ್– ಪೋಲ್‌ಸ್ಟರ್: ಬಿಜೆಪಿ 1–6, ಕಾಂಗ್ರೆಸ್ 24–29, ಎಎಪಿ 56–61, ಅಖಾಲಿದಳ 22–26
ರಿಪಬ್ಲಿಕ್ ಟಿ.ವಿ: ಬಿಜೆಪಿ 1–3, ಕಾಂಗ್ರೆಸ್ 23–31, ಎಎಪಿ 62–70, ಅಖಾಲಿದಳ 16–24
ಟಿವಿ9–ಭಾರತವರ್ಷ–ಪೋಲ್‌ಸ್ಟರ್: ಬಿಜೆಪಿ 1–6, ಕಾಂಗ್ರೆಸ್ 24–29, ಎಎಪಿ 56–61, ಅಖಾಲಿದಳ 22–26
ಗೋವಾದಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ, ಆದರೆ ಈ ಬಾರಿ ಆಡಳಿತರೂಢ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.
ಇಂಡಿಯಾ ಟಿವಿ– ಸಿಎನ್‌ಎಸ್ ವರದಿ ಪ್ರಕಾರ, ಬಿಜೆಪಿ 16–22, ಕಾಂಗ್ರೆಸ್ 11–17, ಟಿಎಂಸಿ 1–2
ಇಟಿಜಿ ರಿಸರ್ಚ್: ಬಿಜೆಪಿ 17–20, ಕಾಂಗ್ರೆಸ್ 15–17, ಟಿಎಂಸಿ 3–4
ನ್ಯೂಸ್ ಎಕ್ಸ್–ಪೋಲ್‌ಸ್ಟರ್: ಬಿಜೆಪಿ 17–19, ಕಾಂಗ್ರೆಸ್ 11–13, ಟಿಎಂಸಿ 0
ಝೀ ನ್ಯೂಸ್–ಡಿಸೈನ್‌ಬಾಕ್ಸ್ಡ್: ಬಿಜೆಪಿ 13–18, ಕಾಂಗ್ರೆಸ್ 14–19, ಟಿಎಂಸಿ 2–5
ಉತ್ತರಾಖಂಡ – ವಿವಿಧ ಸಮೀಕ್ಷೆಗಳ ವರದಿ
ಎಬಿಪಿ ನ್ಯೂಸ್ – ಸಿವೋಟರ್ : ಬಿಜೆಪಿ 26–32, ಕಾಂಗ್ರೆಸ್ 32–38, ಎಎಪಿ 0–2
ಇಟಿಜಿ ರಿಸರ್ಚ್ : ಬಿಜೆಪಿ 37–40, ಕಾಂಗ್ರೆಸ್ 29–32, ಎಎಪಿ 0–1
ನ್ಯೂಸ್ 24: ಬಿಜೆಪಿ 43, ಕಾಂಗ್ರೆಸ್ 24, ಎಎಪಿ 0
ನ್ಯೂಸ್‌ಎಕ್ಸ್–ಪೋಲ್‌ಸ್ಟರ್: ಬಿಜೆಪಿ 31–33, ಕಾಂಗ್ರೆಸ್ 33–35, ಎಎಪಿ 0–3
ರಿಪಬ್ಲಿಕ್ ಟಿ.ವಿ : ಬಿಜೆಪಿ 35–39, ಕಾಂಗ್ರೆಸ್ 28–34, ಎಎಪಿ 0–3
ಟೈಮ್ಸ್ ನವ್ – ವಿಇಟಿಒ: ಬಿಜೆಪಿ 37, ಕಾಂಗ್ರೆಸ್ 31, ಎಎಪಿ 1
ಮಣಿಪುರ
ಇಂಡಿಯಾ ನ್ಯೂಸ್: ಬಿಜೆಪಿ 23–28, ಕಾಂಗ್ರೆಸ್+ 10–14
ಇಂಡಿಯಾ ಟಿವಿ–ಗ್ರೌಂಡ್ ಜೀರೊ ರಿಸರ್ಚ್: ಬಿಜೆಪಿ 26–31, ಕಾಂಗ್ರೆಸ್ 12–17
ನ್ಯೂಸ್ 18 – ಪಿ ಮಾರ್ಕ್: ಬಿಜೆಪಿ 27–31, ಕಾಂಗ್ರೆಸ್ 11–17
ಝೀ ನ್ಯೂಸ್ ಡಿಸೈನ್‌ಬಾಕ್ಸ್ಡ್: ಬಿಜೆಪಿ 32–38, ಕಾಂಗ್ರೆಸ್ 12–17