ಕಾಸರಗೋಡು: ರಾಷ್ಟ್ರೀಯ ಮುಷ್ಕರದ ಹಿನ್ನೆಲೆಯಲ್ಲಿ ಕಾಸರಗೋಡು ಪ್ರಧಾನ ಅಂಚೆ ಕಚೇರಿಯಲ್ಲಿ ವಿವಿಧ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಮೆರವಣಿಗೆ ಹಾಗೂ ಧರಣಿ ನಡೆಯಿತು.
ಧರಣಿಯನ್ನು ಎಫ್‍ಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ತಸ್ಲೀಂ ಮಾಂಬಾಡು ಉದ್ಘಾಟಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ಮತ್ತು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಇದನ್ನು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಎಫ್. ಐಟಿಯು ಜಿಲ್ಲಾಧ್ಯಕ್ಷ ಹಮೀದ್ ಕಾಕಂದಂ ಅಧ್ಯಕ್ಷತೆ ವಹಿಸಿದ್ದರು. ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಮಹಮ್ಮದ್ ವಡಕ್ಕೆಕ್ಕರ ಆಶಯ ಭಾಷಣ ಮಾಡಿದರು. ಎಫ್. ಐಟಿಯು ರಾಜ್ಯ ಸಮಿತಿ ಸದಸ್ಯ ಸಿ.ಎಚ್.ಮುತ್ತಲಿಬ್, ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಸಿ.ಸಾಬೀರ್, ಕೆಎಸ್ ಟಿಎಂ ಜಿಲ್ಲಾಧ್ಯಕ್ಷ ಕೆ.ಕೆ.ಇಸ್ಮಾಯಿಲ್, ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಎಂ.ಶಫೀಕ್, ಅನುದಾನ ರಹಿತ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಮಹೇಶ್ ಮಾಸ್ತರ್, ಕೃಷಿ ಕಾರ್ಮಿಕರ ಸಂಘದ ಸಂಚಾಲಕ ಬಿ.ಮೊಯ್ದೀನ್, ಅಂಗಡಿ ಮತ್ತು ಸಂಸ್ಥೆಗಳ ಸಂಚಾಲಕ ಅಬ್ದುಲ್ ಖಾದರ್ ಚಟ್ಟಂಚಾಲ್, ಹೊಲಿಗೆ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಅಸ್ಮಾ ಅಬ್ಬಾಸ್, ಸಮನ್ವಯ ಸಮಿತಿ ಜಿಲ್ಲಾ ಸದಸ್ಯರಾದ ಅಂಬುಂಜಿ ತಳಕಲೆ, ರಾಮಕೃಷ್ಣನ್ ಕುಂಪಲ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಪಿ.ಎಸ್.ಅಬ್ದುಲಕುಞÂ ಮಾಸ್ಟರ್ ಸ್ವಾಗತಿಸಿ, ಅಬ್ದುಲ್ಲತೀಫ್ ಕುಂಪಲ ವಂದಿಸಿದರು.