ಕಾಸರಗೋಡು: ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಆಸ್ಪತ್ರೆಗಳಿಗೆ ನೋರ್ಕಾ ವ್ಯವಸ್ಥೆಗಳ ಮೂಲಕ ಮಹಿಳಾ ದಾದಿಯರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳು ಲಭ್ಯವಿದೆ. ವಿದ್ಯಾರ್ಹತೆ - ಬಿ.ಎಸ್.ಸಿ,/ಎಂಎಸ್ಸಿ/ ಪಿಎಚ್ ಡಿ/ ನರ್ಸಿಂಗ್ ಗಳಲ್ಲಿ ಕನಿಷ್ಠ 36 ತಿಂಗಳ (3 ವರ್ಷ) ಕೆಲಸದ ಅನುಭವವಿರಬೇಕು. ಪ್ರಸ್ತುತ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದೀರಿ ಎಂದು ಸಾಬೀತುಪಡಿಸುವ ಪ್ರಮಾಣಪತ್ರವನ್ನು ಅರ್ಜಿಯೊಂದಿಗೆ ಸೇರಿಸಬೇಕು. ನಿರಂತರ ಸೇವಾ ಅನುಭವದ ಅಗತ್ಯವಿದೆ. ಆಸಕ್ತ ಅಭ್ಯರ್ಥಿಗಳು ಬಯೋಡೇಟಾ, ಆಧಾರ್, ಪಾಸ್‍ಪೆÇೀರ್ಟ್, ಅರ್ಹತಾ ಪ್ರಮಾಣಪತ್ರ (ಪದವಿ / ಸ್ನಾತಕೋತ್ತರ ಪ್ರಮಾಣಪತ್ರ), ಕೆಲಸದ ಅನುಭವದ ಪ್ರಮಾಣಪತ್ರ, ಪ್ರಸ್ತುತ ಉದ್ಯೋಗದ ಪ್ರಮಾಣಪತ್ರ, ಪೋಟೋ (500 * 500 ಪಿಕ್ಸೆಲ್‍ಗಳು, ಬಿಳಿ ಹಿನ್ನೆಲೆ ಜೆಪಿಜಿ ಪಾಮ್ರ್ಯಾಟ್) ಮತ್ತು ನರ್ಸಿಂಗ್ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಮಾರ್ಚ್ 20 ರಂದು ಮಧ್ಯಾಹ್ನ 3 ಗಂಟೆಯವರೆಗೆ ಅರ್ಜಿಗಳನ್ನು rmt3.norka@kerala.gov.in/ norkaksa19@gmail.com ಗೆ ಕಳುಹಿಸಬಹುದು. ವಯಸ್ಸಿನ ಮಿತಿ 35 ವರ್ಷಗಳು. ಆಕರ್ಷಕ ಸಂಬಳ. ವಸತಿ, ಊಟ ಮತ್ತು ವೀಸಾ ಉಚಿತ. ಪ್ರತಿ ವರ್ಷ ಒಪ್ಪಂದವನ್ನು ನವೀಕರಿಸಬಹುದು. ಕೊಚ್ಚಿಯಲ್ಲಿ ಮಾರ್ಚ್ 21 ರಿಂದ 24 ರವರೆಗೆ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಇಮೇಲ್ ಕಳುಹಿಸುವಾಗ ಸಂದರ್ಶನಕ್ಕೆ ಹಾಜರಾಗಲು ಆಸಕ್ತಿಯ ದಿನಾಂಕವನ್ನು ಸಹ ಬರೆಯಬೇಕು. ನಾರ್ಕೊ ರೂಟ್ಸ್ ವೆಬ್‍ಸೈಟ್‍ನಲ್ಲಿ ( (www.norkaroots.org) ಭಾರತದಿಂದ ಟೋಲ್ ಫ್ರೀ ಸಂಖ್ಯೆ 1800 425 3939 ಮತ್ತು ವಿದೇಶದಿಂದ +91 8802 012345 (ಮಿಸ್ಡ್ ಕಾಲ್ ಸೌಲಭ್ಯ) ನಲ್ಲಿ ಮಾಹಿತಿ ಲಭ್ಯವಿದೆ.