ಕಾಸರಗೋಡು: ಪ್ರಮುಖ ಧಾರ್ಮಿಕ ವಿದ್ವಾಂಸ, ಪುತ್ತಿಗೆ ಮುಹಿಮ್ಮತ್ ಸ್ಥಾಪಕ ಸಯ್ಯದ್ ತ್ವಾಹಿರುಲ್ ಅಹ್‍ದಲ್ ತಙಳ್ ಅವರ 16ನೇ ವರ್ಷದ ಉರುಸ್ ಮುಬಾರಕ್, ಪದವಿಪ್ರದಾನ ಸಮಾರಂಭ ಮಾರ್ಚ್ 8ರಂದು ಆರಂಭಗೊಳ್ಳಲಿರುವುದಾಗಿ ಮುಹಿಮತ್ ಉಪಾಧ್ಯಕ್ಷ ಸಯ್ಯದ್ ಹಸನುಲ್ ಅಹ್‍ದಲ್ ತಙಳ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದರು.
ಮಾ. 8ರಂದು ಪ್ರಾರ್ಥನೆಯೊಂದಿಗೆ ಉರುಸ್‍ಗೆ ಚಾಲನೆ ನೀಡಲಾಗುವುದು. ಎಸ್.ಕೆ ಅಟ್ಟಕೋಯ ತಙಳ್ ಉರುಸ್ ಸಮಾರಂಭ ಉದ್ಘಾಟಿಸುವರು. ರಾತ್ರಿ 8ಕ್ಕೆ ನಡೆಯುವ ಧಾರ್ಮಿಕ ಪ್ರವಚನ ಸಮಾರಂಭಕ್ಕೆ ಸಯ್ಯದ್ ಅತಾವುಲ್ಲಾ ತಙಳ್ ಉದ್ಯಾವರ ಚಾಲನೆ ನೀಡುವರು. 12ರಂದು ನಡೆಯುವ ಸ್ನೇಹ ಸಂಗಮ ಕಾರ್ಯಕ್ರಮವನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. 13ರಂದು ಸಂಜೆ ಪದವಿಪ್ರದಾನ ಸಮರಂಭ ನಡೆಯುವುದು. ಈ ವರ್ಷ 116ಮಂದಿ ಹಿಮ್ಮಿ ಪಂಡಿತರು, 27ಮಂದಿ ಹಾಫಿಳ್‍ಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶೀ ಬಿ.ಎಸ್ ಅಬ್ದುಲ್ಲಕುಞÂ ಫೈಸಿ, ಕೋಶಾಧಿಕಾಸಿ.ಐ ಅಮೀರಲಿ ಚೂರಿ, ಸುಲೈಮಾನ್ ಕರಿವೆಳ್ಳುರ್, ಅಬ್ದುಲ್ ಖಾದರ್ ಸಖಾಫಿ ಕಾಟಿಪ್ಪಾರ, ವೈ.ಎಂ ಅಬ್ದುಲ್ ರಹಮಾನ್ ಅಹ್‍ಸಾನಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸ ಸಖಾಫಿ ಕಳತ್ತೂರ್ ಉಪಸ್ಥಿತರಿದ್ದರು.