HEALTH TIPS

ಎರಡು ಅಣುಸ್ಥಾವರಗಳ ವಶಪಡಿಸಿಕೊಂಡ ಬಳಿಕ ಇದೀಗ ಮೂರನೇ ಅಣುಸ್ಥಾವರ ವಶಕ್ಕೆ ರಷ್ಯಾ ಮುಂದು!

     ಕೀವ್: ರಷ್ಯಾದ ಪಡೆಗಳು ಈಗಾಗಲೇ ಎರಡು ಉಕ್ರೇನಿಯನ್ ಪರಮಾಣು ಸ್ಥಾವರಗಳನ್ನು ವಶಪಡಿಸಿಕೊಂಡಿದ್ದು, ಮೂರನೇ ಅಣುಸ್ಥಾವರ ವಶಕ್ಕೆ ಪಡೆದುಕೊಳ್ಳಲು ಮುಂದಾಗಿದೆ ಎಂದು ಉಕ್ರೇನ್ ಅಧ್ಯಕ್ಷರು ಶನಿವಾರ ಅಮೆರಿಕಾದ ಸೆನೆಟರ್‌ಗಳಿಗೆ ತಿಳಿಸಿದ್ದಾರೆಂದು ತಿಳಿದುಬಂದಿದೆ.

     ಇದು ಉಕ್ರೇನಿನ ಮತ್ತೊಂದು ಅತೀದೊಡ್ಡ ಅಣುಸ್ಥಾವರವಾಗಿದ್ದು, ಯುಝ್ನೋಕ್ರೈನ್ಸ್ಕ್ ದಿಂದ (yuzhnoukrainsk) ಕೇವಲ 20 ಕಿ.ಮೀ ದೂರದಲ್ಲಿದೆ. ರಷ್ಯಾ ಪಡೆಗಳು ಈ ಅಣುಸ್ಥಾವರವನ್ನು ಸುತ್ತುವರೆದಿದ್ದು, ವಶಕ್ಕೆ ಸಿದ್ಧವಾಗಿ ನಿಂತಿವೆ.

     ನಿಯಂತ್ರಣದಲ್ಲಿರುವ ಸ್ಥಾವರಗಳಲ್ಲಿ ಒಂದಾದ ಜಪೋರಿಝಿಯಾ ಪರಮಾಣು ಸ್ಥಾವರವು ಆಗ್ನೇಯ ನಗರವಾದ ಎನರ್ಹೋಡರ್, ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾಗಿದೆ.

     ಮತ್ತೊಂದು ಚೆರ್ನೋಬಿಲ್ ಅಣುಸ್ಥಾವರವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಆದರೆ, ಅಲ್ಲಿನ್ನೂ ಸಿಬ್ಬಂದಿಗಳು ಕಾರ್ಯನಿರ್ಹವಿಸುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ.

     ಜಪೋರಿಝಿಯಾ ಸ್ಥಾವರದ ಮೇಲೆ ಈ ಹಿಂದೆ ರಷ್ಯಾ ಶೆಲ್ ದಾಳಿ ನಡಸಿದ್ದರಿಂದ ಭಾರೀ ಆತಂಕ ಸೃಷ್ಟಿಯಾಗಿತ್ತು. ಅಣುಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಅದೃಷ್ಟವಶಾತ್ ಅಲ್ಲಿ ವಿಕಿರಣಗಳ ಬಿಡುಗಡೆಯಾಗಿರಲಿಲ್ಲ. ಬಳಿಕ ಬೆಂಕಿ ನಂದಿಸಲಾಗಿತ್ತು.

     ಅಣುಸ್ಥಾವರಗಳ 6 ರಿಯಾಕ್ಟರ್ ಗಳಲ್ಲಿ ಎರಡು ಸ್ಥಾವರಗಳನ್ನು ರಷ್ಯಾ ಪಡೆ ವಶಕ್ಕೆ ಪಡೆದುಕೊಂಡಿದೆ ಎಂದು ಪರಮಾಣು ನಿಯಂತ್ರಕ ಐಎಇಎ ಹೇಳಿದೆ. ಉಕ್ರೇನ್ ನಲ್ಲಿ 4 ಅಣುಸ್ಥಾವರನಗಳಿದ್ದು, 15 ರಿಯಾಕ್ಟರ್ ಗಳಿವ ಎಂದು ವರದಿಗಳು ತಿಳಿಸಿವೆ.

        ರಷ್ಯಾದಿಂದ ಕದನ ವಿರಾಮ ಉಲ್ಲಂಘನೆ
     ಉಕ್ರೇನ್ ಮೇಲೆ ನಡೆಸುತ್ತಿದ್ದ ಯುದ್ಧಕ್ಕೆ ಶನಿವಾರ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದ ರಷ್ಯಾ, ಕೆಲವೇ ಗಂಟೆಗಳಲ್ಲಿ ಮತ್ತೆ ಉಕ್ರೇನ್​ನ ಹಲವು ನಗರಗಳಲ್ಲಿ ಶೆಲ್ ದಾಳಿ ನಡೆಸುವ ಮೂಲಕ ಉಲ್ಲಂಘನೆ ಮಾಡಿತು.

     ಇದರಿಂದಾಗಿ ಯುದ್ಧದಿಂದ ತೀವ್ರ ಹಾನಿಗೊಳಗಾಗಿದ್ದ ಉಕ್ರೇನ್‌ನ ಬಂದರು ನಗರವಾದ ಮರಿಪೋಲ್‌ನಿಂದ ನಾಗರಿಕರ ಸ್ಥಳಾಂತರಿಸುವಿಕೆಯನ್ನು ಮತ್ತೆ ಸ್ಥಗಿತಗೊಳಿಸಲಾಯಿತು.

     “ರಷ್ಯಾದ ಸೇನಾಪಡೆ ಕದನ ವಿರಾಮವನ್ನು ಘೋಷಿಸಿದ್ದರೂ ಮರಿಪೋಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ಮೇಲೆ ಗುಂಡಿನ ದಾಳಿಯನ್ನು ಮುಂದುವರೆಸಿದೆ” ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಚೇರಿಯ ಉಪ ಮುಖ್ಯಸ್ಥ ಕೈರಿಲೊ ಟಿಮೊಶೆಂಕೊ ಹೇಳಿದ್ದಾರೆ.

      ರಷ್ಯಾದ ರಕ್ಷಣಾ ಸಚಿವಾಲಯವು ಈ ಹಿಂದೆ ಉಕ್ರೇನಿಯನ್ ಪಡೆಗಳೊಂದಿಗೆ ಆಯಕಟ್ಟಿನ ಬಂದರು ಮತ್ತು ವೊಲ್ನೋವಾಖಾದ ಪೂರ್ವ ನಗರಕ್ಕೆ ಮರಿಪೋಲ್‌ಗೆ ಸ್ಥಳಾಂತರಿಸುವ ಮಾರ್ಗಗಳನ್ನು ಒಪ್ಪಿಕೊಂಡಿದೆ ಎಂದು ಹೇಳಿತ್ತು. ಆದರೂ ಎಷ್ಟು ಸಮಯದವರೆಗೆ ಮಾರ್ಗಗಳು ತೆರೆದಿರುತ್ತವೆ ಎಂಬುದರ ಕುರಿತು ಸ್ಪಷ್ಟಪಡಿಸಿರಲಿಲ್ಲ.

     ರಷ್ಯಾ ಕದನ ವಿರಾಮಕ್ಕೆ ಬದ್ಧವಾಗಿಲ್ಲ ಮತ್ತು ಮರಿಪೋಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳೆರಡರಲ್ಲೂ ಶೆಲ್ ದಾಳಿಯನ್ನು ಮುಂದುವರೆಸಿದೆ. ಭದ್ರತಾ ಕಾರಣಗಳಿಗಾಗಿ ಆ ಭಾಗದಲ್ಲಿರುವ ನಾಗರಿಕರ ಸ್ಥಳಾಂತರಿಸುವಿಕೆಯನ್ನು ಮುಂದೂಡಲಾಗಿದೆ. ವರದಿಗಳ ಪ್ರಕಾರ, ವೊಲ್ನೋವಾಖಾದಲ್ಲಿ ರಷ್ಯಾ ಒಪ್ಪಂದವನ್ನು ಉಲ್ಲಂಘಿಸಿದೆ. “ಕದನ ವಿರಾಮದ ಬಳಿಕವೂ ಗುಂಡು ಹಾರಿಸುವುದನ್ನು ನಿಲ್ಲಿಸಲು ನಾವು ರಷ್ಯಾದ ಕಡೆಯಿಂದ ಮನವಿ ಮಾಡುತ್ತೇವೆ” ಎಂದು ಉಪ ಪ್ರಧಾನ ಮಂತ್ರಿ ಐರಿನಾ ವೆರೆಶ್ಚುಕ್ ಹೇಳಿದ್ದಾರೆ.

      4,50,000 ಜನಸಂಖ್ಯೆಯ ಮರಿಪೊಲ್ ನಗರ ರಷ್ಯಾ ತೆಕ್ಕೆಗೆ ಬಂದಿದೆ. ಈ ಕದನ ವಿರಾಮ ಘೋಷಣೆಯು ಈ ಗೆಲುವಿನ ಘೋಷಣೆ ಎಂದೇ ಹೇಳಲಾಗುತ್ತಿದೆ. ಇದು ಉಕ್ರೇನ್ ವಿರುದ್ಧದ ಸಮರದಲ್ಲಿ ರಷ್ಯಾ ಗಳಿಸಿದ ದೊಡ್ಡ ಗೆಲುವು ಎಂದೇ ವ್ಯಾಖ್ಯಾನಿಸಲಾಗಿದೆ.

       ಉಕ್ರೇನ್​ಗೆ ಇರುವ ಸಾಗರ ಸಂಪರ್ಕವನ್ನು ರಷ್ಯಾ ಇನ್ನು ಮುಂದೆ ಪರಿಣಾಮಕಾರಿಯಾಗಿ ನಿಯಂತ್ರಿಸಿ, ಅಲ್ಲಿನ ಆಡಳಿತವನ್ನು ತನಗೆ ಬೇಕಾದಂತೆ ಮಣಿಸಲು ಈ ಗೆಲುವು ಅನುವು ಮಾಡಿಕೊಟ್ಟಿದೆ. ಮರಿಪೋಲ್ ನಗರಕ್ಕೆ ಹಲವು ದಿನಗಳಿಂದ ನೀರು, ಆಹಾರ ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಚಳಿಯನ್ನು ತಡೆಯಲು ಬೇಕಿದ್ದ ಹೀಟಿಂಗ್ ಉಪಕರಣಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಸಾರ್ವಜನಿಕ ಸಾರಿಗೆಯೂ ರಷ್ಯಾ ಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದವು. ಜನರು ಅಲ್ಲಿ ಬದುಕಲು ಸಾಧ್ಯವೇ ಇಲ್ಲದ ವಾತಾವರಣ ನಿರ್ಮಿಸಿದ ನಂತರ ಸುರಕ್ಷಿತ ಕಾರಿಡಾರ್ ಘೋಷಿಸಿ, ಅವರಿಗೆ ಹೊರಗೆ ಹೋಗಲು ಅವಕಾಶ ನೀಡಲಾಗಿತ್ತು.

      ಕದನ ವಿರಾಮ ಘೋಷಣೆಯ ಮೂಲಕ ರಷ್ಯಾ ಅತ್ಯಂತ ಜಾಣ ರಾಜತಾಂತ್ರಿಕ ನಡೆಯಿಟ್ಟಿತ್ತು. ರಷ್ಯಾ ಪಡೆಗಳು ಹಲವು ದಿನಗಳಿಂದ ಬಂದರು ನಗರಿ ಮರಿಪೊಲ್​ಗೆ ದಿಗ್ಬಂಧನ ಹಾಕಿ, ಉಸಿರುಗಟ್ಟಿಸಿದ್ದವು. ಅಲ್ಲಿನ ನಾಗರಿಕರಿಗೆ ಹೊರಗೆ ಹೋದರೆ ಸಾಕು ಎನ್ನುವಂತೆ ಆಗಿತ್ತು. ಇದೀಗ ತನ್ನ ಪಟ್ಟು ಬಿಗಿಗೊಳಿಸಿರುವ ರಷ್ಯಾ, ಆಯಕಟ್ಟಿನ ಸ್ಥಳಗಳನ್ನು ವಶಪಡಿಸಿಕೊಂಡ ನಂತರ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿ, ನಾಗರಿಕರು ಹೊರಗೆ ನಡೆಯಲು ಸುರಕ್ಷಿತ ಕಾರಿಡಾರ್ ಕಲ್ಪಿಸಿಕೊಡುವ ಭರವಸೆ ನೀಡಿತ್ತು. ಆದರೆ, ಮತ್ತೆ ಮರಿಪೋಲ್​ನಲ್ಲಿ ಗುಂಡಿನ ದಾಳಿ ನಡೆಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries