HEALTH TIPS

ಮಾವಿನೆಲೆ ತೋರಣಕ್ಕಷ್ಟೇ ಅಲ್ಲ, ತ್ವಚೆ ಹಾಗೂ ಕೂದಲಿನ ಸಮಸ್ಯೆಗೂ ಪರಿಣಾಮಕಾರಿ ಆಯುಧ!

 ಮಾವಿನ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರೂ ಇಷ್ಟಪಟ್ಟು ಸೇವಿಸುವ ಹಣ್ಣುಗಳಲ್ಲಿ ಇದೂ ಒಂದು. ಇದರಲ್ಲಿ ದೇಹಕ್ಕೆ ಅಗತ್ಯವಾಗ ಉತ್ತಮ ಪೋಷಕಾಂಶಗಳಿದ್ದು, ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ, ಹಣ್ಣಿನ ಹೊರತಾಗಿ, ಮಾವಿನ ಎಲೆಗಳು ಸಹ ದೇಹಕ್ಕೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿ ಎಂದು ತಿಳಿದಿದೆಯೇ? ಹೌದು, ಮಾವಿನ ಎಲೆಯನ್ನು ಕೇವಲ ಶುಭಕಾರ್ಯಗಳಲ್ಲಿ ಅಲಂಕಾರಕ್ಕಾಗಿ ತೋರಣವಾಗಿ ಮಾತ್ರ ಬಳಸುವುದಲ್ಲ. ಇದರಿಂದ ಕೂದಲು ಹಾಗೂ ತ್ವಚೆಯ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಮಾವಿನ ಎಲೆಗಳಿಂದ ಸೌಂದರ್ಯಕ್ಕೆ ಏನು ಪ್ರಯೋಜನ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಾವಿನ ಎಲೆಯಲ್ಲಿರುವ ಔಷಧೀಯ ಗುಣಗಳು: ಮಾವಿನ ಎಲೆಗಳು ತ್ವಚೆ ಹಾಗೂ ಕೂದಲಿಗೂ ಪ್ರಯೋಜನಕಾರಿ. ಮಾವಿನ ಎಲೆಗಳಲ್ಲಿ ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಬಿ ಯಂತಹ ಅನೇಕ ಪೋಷಕಾಂಶಗಳು ಸಮೃದ್ಧವಾಗಿದೆ. ಇವು ತ್ವಚೆಯ ಆರೋಗ್ಯಕ್ಕೆ ಬಹಳ ಮುಖ್ಯವಾದಂತವುಗಳು. ಜೊತೆಗೆ, ಮಾವಿನ ಎಲೆಗಳಲ್ಲಿ ಸ್ಟೀರಾಯ್ಡ್ಗಳು, ಆಲ್ಕಲಾಯ್ಡ್ಗಳು, ರೈಬೋಫ್ಲಾವಿನ್, ಥಯಾಮಿನ್, ಫೀನಾಲಿಕ್, ಬೀಟಾ-ಕ್ಯಾರೋಟಿನ್ ಮುಂತಾದ ಸಂಯುಕ್ತಗಳನ್ನು ಹೊಂದಿದೆ. ಇವುಗಳು ಕೂದಲು ಹಾಗೂ ತ್ವಚೆಯನ್ನುಆರೋಗ್ಯಕರವಾಗಿಡಲು ಸಹಕಾರಿಯಾಗಿವೆ. ಈ ಎಲೆಗಳ ವಿಶೇಷತೆಯೆಂದರೆ ಕೂದಲು ಉದುರುವಿಕೆಯಿಂದ ಹಿಡಿದು, ಚರ್ಮದ ಕಿರಿಕಿರಿಯನ್ನು ತೆಗೆದುಹಾಕಲು ಬಳಸಬಹುದು. ಅದನ್ನು ಹೇಗೆ ಬಳಸಬೇಕು ಎಂಬುದನ್ನು ಇಲ್ಲಿ ನೋಡೋಣ.

ಚರ್ಮದ ಕಿರಿಕಿರಿ ಮತ್ತು ಶುಷ್ಕತೆ: ಮಾವಿನ ಎಲೆಗಳಿಂದ ತ್ವಚೆಗೆ ಆಗುವ ಪ್ರಯೋಜನಗಳಲ್ಲಿ ತ್ವಚೆಯ ಶುಷ್ಕತೆಯ ಜೊತೆಗೆ ಕಿರಿಕಿರಿಯನ್ನು ಹೋಗಲಾಡಿಸುವುದು ಒಂದು. ಇದಕ್ಕಾಗಿ ನೀವು ಮೊದಲು ಮಾವಿನ ಎಲೆಗಳನ್ನು ಸುಡಬೇಕು. ಮಾವಿನ ಎಲೆಗಳನ್ನು ಸುಟ್ಟ ನಂತರ, ಅದರ ಬೂದಿಯನ್ನು ಪೀಡಿತ ಪ್ರದೇಶದ ಮೇಲೆ ಅನ್ವಯಿಸಿ. ಇದು ಕಿರಿಕಿರಿಯನ್ನು ನಿವಾರಿಸುತ್ತದೆ ಜೊತೆಗೆ ಶುಷ್ಕತೆಯನ್ನು ಸಹ ಕಡಿಮೆ ಮಾಡುವುದು.

ಆರೋಗ್ಯಕರ ತ್ವಚೆ: ಆರೋಗ್ಯಕರ ತ್ವಚೆ ಪಡೆಯಲು, ತಾಜಾ ಮಾವಿನ ಎಲೆಗಳ ಮುಖವಾಡವನ್ನು ಬಳಸಬೇಕು. ಇದಕ್ಕಾಗಿ, 4 ರಿಂದ 5 ಮಾವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ರುಬ್ಬಿ. ನಂತರ ಅವುಗಳಿಗೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ. ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಸಾಮಾನ್ಯ ನೀರಿನಿಂದ ಮುಖವನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿ ಮತ್ತು ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ನೋಡಲು ಸಾಧ್ಯವಾಗುತ್ತದೆ.

ಕೂದಲಿನ ಬೆಳವಣಿಗೆ: ವಿಟಮಿನ್ ಎ ಮತ್ತು ವಿಟಮಿನ್ ಸಿ ಮಾವಿನ ಎಲೆಗಳಲ್ಲಿ ಹೇರಳವಾಗಿ ಲಭ್ಯವಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ಕೂದಲಿನ ಬೆಳವಣಿಗೆಯನ್ನು ಸುಧಾರಿಸಬಹುದು. ಇದಕ್ಕಾಗಿ ಮಾವಿನ ಎಲೆಗಳನ್ನು ರುಬ್ಬಿಕೊಂಡು ಪೇಸ್ಟ್ ಅನ್ನು ತಲೆಗೆ ಹಚ್ಚಿಕೊಳ್ಳಿ. ಸುಮಾರು 15 ನಿಮಿಷಗಳ ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಮಾವಿನ ಎಲೆಗಳಿಗೆ ಸಂಬಂಧಿಸಿದ ಈ ಮನೆಮದ್ದನ್ನು ಅಳವಡಿಸಿಕೊಳ್ಳುವುದರಿಂದ ಕೂದಲಿನ ಬಣ್ಣ ಸುಧಾರಿಸುತ್ತದೆ, ಜೊತೆಗೆ ಅವುಗಳು ಬಲವಾಗಿ, ಉತ್ತಮವಾಗಿ ಬೆಳೆಯಲು ಪ್ರಾರಂಭವಾಗುತ್ತದೆ.





Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries