ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ನಿತಿನ್ ಗಡ್ಕರಿ ಅವರ ಕಾರ್ಯಗಳನ್ನು ಹಲವು ವಿರೋಧ ಪಕ್ಷಗಳು ಮುಖಂಡರು ಸೋಮವಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ನಿತಿನ್ ಗಡ್ಕರಿ ಅವರ ಕಾರ್ಯಗಳನ್ನು ಹಲವು ವಿರೋಧ ಪಕ್ಷಗಳು ಮುಖಂಡರು ಸೋಮವಾರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆದರೆ ರಸ್ತೆಗಳ ಗುಣಮಟ್ಟ, ನಿರ್ವಹಣೆ ಮತ್ತು ಟೋಲ್ ಸಂಗ್ರದಲ್ಲಿನ ಪಾರದರ್ಶಕತೆಯ ಕೊರತೆಯಂತಹ ಸಮಸ್ಯೆಗಳ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ 2022-23ರ 'ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅನುದಾನದ ಬೇಡಿಕೆ' ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷದ ಬಹುತೇಕ ಸಂಸದರು ರಸ್ತೆ ಸಾರಿಗೆಯಲ್ಲಿ ಗಡ್ಕರಿ ಅವರು ಮಾಡಿದ ಕೆಲಸವನ್ನು ಶ್ಲಾಘಿಸುವ ಮೂಲಕ ತಮ್ಮ ಮಾತುಗಳನ್ನು ಪ್ರಾರಂಭಿಸಿದರು.
ರಸ್ತೆಗಳ ಕಳಪೆ ಗುಣಮಟ್ಟದ ಬಗ್ಗೆ ವಿರೋಧ ಪಕ್ಷಗಳ ಹಲವು ಸಂಸದರು ಕಳವಳ ವ್ಯಕ್ತಪಡಿಸಿದರು.