HEALTH TIPS

'ರೇಡಿಯೋ ತರಂಗ ಸಂದೇಶ': ಅಮೆರಿಕಾದ ಎಂಐಟಿ ಆವಿಷ್ಕಾರ ಕುರಿತು ಬೆಂಗಳೂರಿನ ರಾಮನ್ ಖಗೋಳ ವಿಜ್ಞಾನಿಗಳ ಪ್ರಶ್ನೆ!

             ಬೆಂಗಳೂರು: ಮಹಾ ಸ್ಫೋಟದಿಂದಾಗಿ (ಬಿಗ್ ಬ್ಯಾಂಗ್) ಬ್ರಹ್ಮಾಂಡದ ಉಗಮದ ಸಂದರ್ಭದಲ್ಲಿ ಹುಟ್ಟಿದ ನಕ್ಷತ್ರಗಳು ಮತ್ತು ನಕ್ಷತ್ರ ಪುಂಜಗಳಿಂದ ಹೊರಹೊಮ್ಮಿದ  ರೇಡಿಯೊ ತರಂಗ  ಸಂದೇಶ ಪತ್ತೆ ಮಾಡಲಾಗಿದೆ ಎಂಬ ನಾಲ್ಕು ವರ್ಷಗಳ ಹಿಂದಿನ ಆವಿಷ್ಕಾರವನ್ನು ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಖಗೋಳ ವಿಜ್ಞಾನಿಗಳು ನಿರಾಕರಿಸಿದ್ದಾರೆ.

             ಕನ್ನಡಿಗ ಪ್ರೊ. ಎನ್. ಉದಯಶಂಕರ್ ಮತ್ತು ಪ್ರೊ. ರವಿಸುಬ್ರಹ್ಮಣ್ಯ ನೇತೃತ್ವದ ತಂಡ ಸಂಸ್ಥೆಯೇ ಅಭಿವೃದ್ಧಿಪಡಿಸಿದ 'ಸರಾಸ್ -3 (ಎಸ್ ಎಆರ್ ಎಎಸ್ -3) ರೇಡಿಯೋ ದೂರದರ್ಶಕದ ಮೂಲಕ ಬ್ರಹ್ಮಾಂಡದ ಸಂದೇಶದ ರಹಸ್ಯ ಬಿಡಿಸಿ ಜಗತ್ತಿನ ಮುಂದಿಟ್ಟಿದ್ದಾರೆ. 

          ಈ ಸಂಶೋಧನೆ ಮೂಲಕ ಮೊದಲ ಬಾರಿಗೆ ಹೈಡ್ರೋಜನ್ ನೊಂದಿಗೆ ರೇಡಿಯೊ ಸಂಕೇತ ಕಂಡುಹಿಡಿದಿರುವುದಾಗಿ  ಅಮೆರಿಕದ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯ ಖಗೋಳಶಾಸ್ತ್ರಜ್ಞರು 2018 ಫೆಬ್ರವರಿಯಲ್ಲಿ ಕೈಗೊಂಡಿದ್ದ ಪ್ರಯೋಗದ ಫಲಿತಾಂಶ ನಿಜವಲ್ಲ ಎಂದು ಅವರು ಹೇಳಿದ್ದಾರೆ. 

           ಅಮೆರಿಕಾ ವಿಜ್ಞಾನಿಗಳ ಆವಿಷ್ಕಾರವನ್ನು ಹಾರ್ವರ್ಡ್ ಖಗೋಳಿ ವಿಜ್ಞಾನಿ ಅವಿ ಲೋಬ್ ಅವರು ಎರಡು ನೊಬೆಲ್ ಪ್ರಶಸ್ತಿಗೆ ಅರ್ಹ ಎಂದು ಶ್ಲಾಘಿಸಿದ್ದರು. ಆದರೇ, ಪ್ರೊಫೆಸರ್ ರವಿ ಸುಬ್ರಹ್ಮಣ್ಯ ಅವರನ್ನೊಳಗೊಂಡ ರಾಮನ್ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ,  ರೇಡಿಯೋ ತರಂಗಗಳನ್ನು ಪತ್ತೆ ಮಾಡಲು ಅಗತ್ಯವಾದ ನಿಖರತೆಯನ್ನು ಒದಗಿಸುವ ಹೊಸ ಪ್ರಯತ್ನವಾಗಿ ಸರಸ್-3 ರೇಡಿಯೊ ದೂರದರ್ಶಕವನ್ನು ಅಭಿವೃದ್ಧಿಪಡಿಸಿದ್ದಾರೆ. ವಿಶೇಷವಾಗಿ ಹೈಡ್ರೋಜನ್ ಪರಮಾಣುಗಳಿಂದ 21 ಸೆಂಟಿ ಮೀಟರ್ ತರಂಗಾಂತರದಲ್ಲಿ (1.4 ಗಿಗಾ ಹರ್ಟ್ಸ್) ಹೊರಹೊಮ್ಮುವ ವಿಕಿರಣಗಳ ಅನ್ವೇಷಣೆ ಕೈಗೊಳ್ಳುವುದು ಈ ಉಪಕರಣದ ಮೂಲ ಉದ್ದೇಶವಾಗಿದೆ. 

             ಈ ವಿಶ್ಲೇಷಣೆಗಳಲ್ಲಿ ಎಂಐಟಿ ಮತ್ತು ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯ ವಿಜ್ಞಾನಿಗಳು ನಡೆಸಿದ ಪ್ರಯೋಗಗಳಲ್ಲಿ ಕಂಡುಬಂದ ಸಂಕೇತಗಳ ಕುರಿತು ಯಾವುದೇ ಸಾಕ್ಷ್ಯಗಳು ದೊರೆಯಲಿಲ್ಲ ಎಂದು ಸಂಸ್ಥೆಯ ಸಂಶೋಧನಾ ವಿಜ್ಞಾನಿ ಸೌರಭ್ ಸಿಂಗ್ ತಿಳಿಸಿದರು. ಹೀಗಾಗಿ ಈ ಬಗ್ಗೆ ಎಚ್ಚರಿಕೆಯಿಂದ ಮೌಲ್ಯಮಾಪನ ನಡೆಸಿ ಅಮೆರಿಕ ವಿಶ್ವವಿದ್ಯಾಲಯಗಳ ಸಂಶೋಧಕರ ಪ್ರಯೋಗವನ್ನು ತಿರಸ್ಕರಿಸಲಾಯಿತು.

         ಉಪಕರಣ ಮಾಪನದ ತಪ್ಪಿನಿಂದ ಕಂಡುಬಂದ ಸಂಕೇತಗಳನ್ನೇ ರೇಡಿಯೊ ತರಂಗಗಳೆಂದು ಅಮೆರಿಕದ ಸಂಶೋಧಕರು ಪರಿಗಣಿಸಿದ್ದಾರೆ ಎಂದು ಅವರು ಹೇಳಿದರು. ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ಖಗೋಳ ವಿಜ್ಞಾನಿಗಳ ಸಂಶೋಧನೆಯೊಂದಿಗೆ ಈ ಹಿಂದೆ ಕಂಡುಹಿಡಲಾಗಿದ್ದ ರೇಡಿಯೋ ಸಂಕೇತಗಳು ಈಗ ಅಸ್ಪಷ್ಟವಾಗಿ ಉಳಿದಿವೆ. ಖಗೋಳವಿಜ್ಞಾನಿಗಳ ಹೊಸ ಸಿದ್ದಾಂತಗಳಿಗೆ ಬೆಲೆ ಇಲ್ಲದಂತಾಗಿದೆ. ಈ ಅಧ್ಯಯನ ಅಂತಾರಾಷ್ಟ್ರೀಯ ವಿಜ್ಞಾನ ಲೇಖನ ನೇಚರ್ ಅಸ್ಟ್ರಾನಮಿಯಲ್ಲಿ ಪ್ರಕಟವಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries