ಬೆಂಗಳೂರು: ಕೋಲ್ಕತದಲ್ಲಿರುವ ಪ್ರತಿಷ್ಠಿತ ರಾಷ್ಟ್ರೀಯ ಹೋಮಿಯೋಪಥಿ ಸಂಸ್ಥೆಯ ಗೌರವ ಸದಸ್ಯರನ್ನಾಗಿ ರಾಜಧಾನಿಯ ಹಿರಿಯ ಹೋಮಿಯೋಪಥಿ ವೈದ್ಯ. ಡಾ.ಶ್ರೀಪಾದ ಹೆಗಡೆ ಹುಕ್ಲಮಕ್ಕಿ ಅವರನ್ನು ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಆಯ್ಕೆ ಮಾಡಿದೆ. ಇವರು ದಕ್ಷಿಣ ಭಾರತದ ಏಕೈಕ ಸದಸ್ಯರಾಗಿದ್ದಾರೆ.

ಜನಪರ ಕಾಳಜಿ, ನಿರಂತರ ಅಧ್ಯಯನ ಹಾಗೂ ಪ್ರಯೋಗಶೀಲ ಚಿಂತಕರೆಂದು ಗುರುತಿಸಲ್ಪಟ್ಟಿರುವ ಡಾ. ಹೆಗಡೆಯವರು, ಬೆಂಗಳೂರಿನ ಸರ್ಕಾರಿ ಹೋಮಿಯೋಪಥಿ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಉತ್ತಮ ವಾಗ್ಮಿಗಳೂ, ಅಪಾರ ಅನುಭವದ ವಿಷಯ ತಜ್ಞರೂ ಆದ ಇವರು, ದೇಶ-ವಿದೇಶಗಳ ಹಲವಾರು ಪ್ರತಿಷ್ಠಿತ ವೇದಿಕೆಯಲ್ಲಿ ಭಾಗವಹಿಸಿದವರು. ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಗೋಷ್ಠಿಗಳನ್ನು, ವಿಚಾರ ಸಂಕಿರಣಗಳನ್ನೂ ಆಯೋಜಿಸಿದ್ದಾರೆ.
ಬೆಂಗಳೂರಿನ ವಿಜಯನಗರದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ಸತತ 14 ವರ್ಷಗಳಿಂದ 150ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಉಚಿತವಾಗಿ ನಡೆಸಿ ಸಾವಿರಾರು ಜನರಿಗೆ ಅನುಕೂಲ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರವು ಇವರನ್ನು ನವದೆಹಲಿಯ ಕೇಂದ್ರೀಯ ಹೋಮಿಯೋಪಥಿ ಪರಿಷತ್ನ ಎಂಎಆರ್ಬಿ ಗೌರವ ಸದಸ್ಯರನ್ನಾಗಿಯೂ ಈ ಹಿಂದೆಯೇ ನೇಮಕ ಮಾಡಿದೆ.