ಕಾಸರಗೋಡು: ಕೇರಳದ ಜನತೆಗೆ ಮಾರಕವಾಗಿರುವ ಕೆ-ರೈಲು ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಗೆ ಅವಕಾಶಕೊಡುವುದಿಲ್ಲೆ ಂದು ಬಿಜೆಪಿ ರಾಜ್ಯ ಸಮಿತಿ ವಕ್ತಾರ ಸಂದೀಪ್ ವಾರ್ಯರ್ ತಿಳಿಸಿದ್ದಾರೆ. ಅವರು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಕೆ-ರೈಲ್ ಯೋಜನೆ ವಇರುದ್ಧ ನೀಲೇಶ್ವರದಿಂದ ಆರಂಇಸಿದ ಕಾಞಂಗಾಡು ವಲಯ ಜಾಥಾ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೆ-ರೈಲು ಯೋಜನೆಯಲ್ಲಿ ಭಾರಿ ಪ್ರಮಾಣದಲ್ಲಿ ಖಜಾನೆ ಲೂಟಿಗೆ ಎಡರಂಗ ಸರ್ಕಾರ ಯೋಜನೆ ತಯಾರಿಸಿದೆ.ರಾಜ್ಯದ ಖಜಾನೆ ಖಾಲಿಯಾಗಿರುವ ಸಂದರ್ಬ ಇಷ್ಟೊಂದು ಬೃಹತ್ ಗಾಥ್ರದ ಹಾಗೂ ಜನತೆಗೆ ಮಾರಕವಾಗಿರುವ ಯೋಜನೆ ಜಾರಿಗೊಳಿಸುವ ಹಿಂದಿನ ರಹಸ್ಯ ಸ್ಪಷ್ಟವಾಗಿರುವುದಾಗಿ ತಿಳಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ವರದಿಂದ ಆರಂಭಗೊಂಡಿದ್ದ ಪಾದಯಾತ್ರೆಯನ್ನು ಬಿಜೆಪಿ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಎ.ಪಿ ಅಬ್ದುಲ್ಲಕುಟ್ಟಿ ಉದ್ಘಾಟಿಸಿದ್ದರು.