ಕಾಸರಗೋಡು: ರಾಜ್ಯ ಸಂಸ್ಕøತಿ ಇಲಾಖೆ ಬೇಕಲ ಕೋಟೆ ರೆಡ್ ಮೂನ್ ಬೀಚ್ ಪಾರ್ಕ್ ನಲ್ಲಿ ಆಯೋಜಿಸುವ ಸಮಂ ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಕ್ರಮಗಳ ಸಂಘಟನಾ ಸಮಿತಿ ಸಭೆಯನ್ನು ಸಮಂ ಯೋಜನೆಯ ಜಿಲ್ಲಾ ಮಟ್ಟದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಇಲಾಖೆ ಉಪ ಕಾರ್ಯದರ್ಶಿ ಹಾಗೂ ಸಂಸ್ಕೃತಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಉದಯಕುಮಾರ್ ಯೋಜನೆ ವಿವರಿಸಿದರು.
ಏಪ್ರಿಲ್ ಮೊದಲ ವಾರದ ಜಿಲ್ಲಾ ಸಮಿತಿ ಕಾರ್ಯಕ್ರಮ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಹಾಗೂ ರಾಜ್ಯ ಯುವ ಕಲ್ಯಾಣ ಮಂಡಳಿ ಜಿಲ್ಲಾ ಸಂಯೋಜಕ ಎ.ವಿ.ಶಿವಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿ ಆಯ್ಕೆ ಸಮಿತಿಯ ಸಂಚಾಲಕರಾಗಿ ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿಮ್ನಾ ಅವರನ್ನು ಆಯ್ಕೆ ಮಾಡಲಾಯಿತು.
ಪಳ್ಳಿಕ್ಕೆರೆÀ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್, ಪುಲ್ಲೂರು ಪೆರಿಯ ಪಂಚಾಯಿತಿ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್, ಗ್ರಾಮ ಪಂಚಾಯಿತಿ ಸಂಘದ ಅಧ್ಯಕ್ಷ ಕೆ.ಪಿ.ವತ್ಸನ್, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶಕುಂತಳಾ, ಜಿಲ್ಲಾ ಯುವ ಕಾರ್ಯಕ್ರಮ ಅಧಿಕಾರಿ ಶಿಲಾಸ್ ಪಿಸಿ ಮಾತನಾಡಿದರು. ಎ.ವಿ.ಶಿವಪ್ರಸಾದ್ ಸ್ವಾಗತಿಸಿ, ವಜ್ರ ಮಹೋತ್ಸವ ಸಂಯೋಜಕ ಶ್ಯಾಮಪ್ರಸಾದ್ ವಂದಿಸಿದರು.