HEALTH TIPS

ಪುಟಿನ್ ಪರಮಾಣು ಯುದ್ಧದ ಡ್ರಿಲ್ ಆದೇಶ: ವಿಶ್ವದ ರಾಷ್ಟ್ರಗಳಲ್ಲಿ ತಳಮಳ!

             ಮಾಸ್ಕೋ: ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಪರಮಾಣು ಯುದ್ಧದತ್ತ ಸಾಗುವ ಲಕ್ಷಣಗಳನ್ನು ತೋರಿಸುತ್ತಿದ್ದಾರೆ ಎಂದು ಟೆಲಿಗ್ರಾಮ್ ಚಾನೆಲ್‌ಗಳನ್ನು ಉಲ್ಲೇಖಿಸಿ ಹಲವಾರು ಯುಕೆ ಮಾಧ್ಯಮಗಳು ವರದಿಗಳು ಮಾಡಿವೆ. 

                  ಪರಮಾಣು ಯುದ್ಧದ ಅಭ್ಯಾಸಕ್ಕಾಗಿ ಪುಟಿನ್ ತನ್ನ ಸೈನ್ಯವನ್ನು ಅಭ್ಯಾಸ ಮಾಡಲು ಆದೇಶಿಸಿದ ಕಾರಣ ವಿಶ್ವದ ರಾಷ್ಟ್ರಗಳಲ್ಲಿ ಈ ಸಂಚಲನ ಸೃಷ್ಟಿಯಾಗಿದೆ. ಅಷ್ಟೇ ಅಲ್ಲ, ತನ್ನ ಕುಟುಂಬವನ್ನು ಸುರಕ್ಷತೆಗಾಗಿ ಸೈಬೀರಿಯಾಕ್ಕೆ ಕಳುಹಿಸಿದ್ದಾರೆಂಬ ಮಾಹಿತಿಯೂ ಹೊರಬಿದ್ದಿದೆ. 

              ಇದೇ ಸಂದರ್ಭದಲ್ಲಿ ಪರಮಾಣು ಡ್ರಿಲ್‌ನ ವರದಿಯು ಕ್ರೆಮ್ಲಿನ್ (ರಷ್ಯಾದ ಅಧ್ಯಕ್ಷೀಯ ಕಚೇರಿ) ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ. ಪುಟಿನ್ ಅವರ ನಿರ್ಧಾರದ ಪರಿಣಾಮಗಳು ಎಷ್ಟು ಭೀಕರವಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

              25 ದಿನಗಳ ಯುದ್ಧದ ನಂತರವೂ ಉಕ್ರೇನ್ ಇನ್ನೂ ಶಸ್ತ್ರಾಸ್ತ್ರಗಳನ್ನು ತ್ಯಜಿಸಿಲ್ಲ. ಇದು ಪುಟಿನ್ ಅವರನ್ನು ಕೆರಳಿಸಿದೆ. ಪುಟ್ಟ ದೇಶವೊಂದು ತನಗೆ ಸವಾಲೊಡ್ಡುತ್ತಿದೆ ಎಂದು ಪುಟಿನ್ ಈ ವಿಧ್ವಂಸಕ ಕೃತ್ಯಕ್ಕೆ ಕೈ ಹಾಕುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

               ಪುಟಿನ್ ಅವರ ಕುಟುಂಬ ಸದಸ್ಯರ ಬಗ್ಗೆ ಹೆಚ್ಚಿನ ವಿವರ ತಿಳಿದುಬಂದಿಲ್ಲ. ಆದರೆ, ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಪುಟಿನ್ ಅವರು ತಮ್ಮ ಕುಟುಂಬದ ಸದಸ್ಯರನ್ನು ಸೈಬೀರಿಯಾಕ್ಕೆ ಕಳುಹಿಸಿದ್ದಾರೆ ಎಂದು ವರದಿಗಳು ಹೇಳಿವೆ. ಸೈಬೀರಿಯಾದಲ್ಲಿರುವ ಅಲ್ಟಾಯ್ ಪರ್ವತಗಳಲ್ಲಿ ಸಂಪೂರ್ಣವಾಗಿ ಹೈಟೆಕ್ ಆಗಿರುವ ಭೂಗರ್ಭಿತ ಬಂಕರ್ ನಲ್ಲಿ ಇರಿಸಿದ್ದಾರೆ ಎಂಬ ಮಾಹಿತಿಯೂ ಇದೆ. 

           ಪುಟಿನ್ ಅಪಾಯಕಾರಿ ಪ್ಲಾನ್ ರೆಡಿ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ. ಪರಮಾಣು ಸಂಘರ್ಷಕ್ಕಾಗಿ ರಷ್ಯಾ ಡೂಮ್ಸ್ ಡೇ ವಿಮಾನಗಳನ್ನು ಹೊಂದಿದೆ. ಇದನ್ನು ಪುಟಿನ್ ಮತ್ತು ಅವರ ನಿಕಟವರ್ತಿಗಳು ಪರಮಾಣು ಯುದ್ಧದಲ್ಲಿ ಬಳಸುತ್ತಾರೆ. ಸ್ಕೈ ಬಂಕರ್ ಕೂಡಾ ಡೂಮ್ಸ್ ಡೇ ಯೋಜನೆಯಡಿಯಲ್ಲಿತ್ತು ಆದರೆ, ಅದು ಇನ್ನೂ ಸಿದ್ದವಾಗಿಲ್ಲ ಎಂದು ಹೇಳಲಾಗುತ್ತಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries