ತಿರುವನಂತಪುರ: ಕೇರಳದ ಜನರ ವಿರೋಧದ ನಡುವೆಯೂ ಸಿಲ್ವರ್ ಲೈನ್ ಯೋಜನೆಗೆ ಶಂಕುಸ್ಥಾಪನೆ ಪ್ರಕ್ರಿಯೆ ನಡೆಯಲಿದೆ ಎಂದು ಕೆ ರೈಲ್ ಎಂಡಿ ವಿ ಅಜಿತ್ ಕುಮಾರ್ ಹೇಳಿದ್ದಾರೆ. ಪ್ರತಿಭಟನೆಯ ಹೆಸರಿನಲ್ಲಿ ಕಲ್ಲುತೂರಾಟ ನಿಂತಿಲ್ಲ, ಯಾವುದೇ ಅಡ್ಡಿ ಉಂಟಾದರೆ ಅದನ್ನು ನಿವಾರಿಸುವುದು ಸರ್ಕಾರದ ಜವಾಬ್ದಾರಿ ಎಂದು ವಿ.ಅಜಿತ್ ಕುಮಾರ್ ಹೇಳಿದರು.
ಈಗ ನಡೆಯುತ್ತಿರುವುದು ಭೂಸ್ವಾಧೀನವಲ್ಲ. ಸಾಮಾಜಿಕ ಪರಿಣಾಮದ ಅಧ್ಯಯನಕ್ಕೆ ಸರ್ವೇ ಕಲ್ಲು ಹಾಕಲಾಗಿದೆ. ಈ ಹಂತದಲ್ಲಿ ಯಾರದ್ದೂ ಜಮೀನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಪ್ರತಿಭಟನಾಕಾರರು ಕಲ್ಲು ಕಿತ್ತೆಸೆದರೆ ಹೊಸ ಕಲ್ಲುಗಳನ್ನು ಹಾಕಲಾಗುವುದು. ಇದನ್ನು ಸುಮಾರು ಎರಡು ತಿಂಗಳಲ್ಲಿ ಪೂರ್ಣಗೊಳಿಸಬಹುದು. ಸಾಮಾಜಿಕ ಪರಿಣಾಮಗಳ ಅಧ್ಯಯನವನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಆದರೆ ಯಾವುದೇ ಅಡ್ಡಿ ಉಂಟಾದರೆ ಅದಕ್ಕೆ ತಕ್ಕಂತೆ ವಿಳಂಬಗೊಳ್ಳಿವುದು ಎಂದು ಕೆ ರೈಲ್ ಎಂಡಿ ತಿಳಿಸಿದ್ದಾರೆ.