ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಪೆರಿಯ ಕ್ಯಾಂಪಸ್‍ನಲ್ಲಿ ಚಟುವಟಿಕೆ ನಡೆಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಕೇಂದ್ರ ಶಿಕ್ಷಣ ಖಾತೆ ಸಹಾಯಕ ಸಚಿವ ಡಾ. ಸುಭಾಷ್ ಸರ್ಕಾರ್ ಊಕ್ರವಾರ ಉದ್ಘಾಟಿಸಿದರು. ವಿಶ್ವ ವಿದ್ಯಾಲಯದ ಉಪಕುಲಪತಿ ಪ್ರೊ, ಎಚ್. ವೆಂಕಟೇಶ್ವರಲು ಅಧ್ಯಕ್ಷತೆ ವಹಿಸಿದ್ದರು.
ಆಂಧ್ರ ಪ್ರದೇಶ ಕೇಂದ್ರೀಯ ವಿಶ್ವ ವಿದ್ಯಾಲಯ ಉಪಕುಲಪತಿ ಪ್ರೊ. ಕಟ್ಟೀಮನಿ, ತಮಿಳ್ನಾಡು ಕೇಂದ್ರೀಯ ವಿಶ್ವ ವಿದ್ಯಾಲಯ ಉಪಕುಲಪತಿ ಪ್ರೊ. ಎಂ. ಕೃಷ್ಣನ್, ಕೇರಳ ಯೂನಿವರ್ಸಿಟಿ ಆಫ್ ಹೆಲ್ತ್ ಸಯನ್ಸ್‍ನ ಮೋಹನನ್ ಕುನ್ನುಮ್ಮಲ್, ಹೈದರಾಬಾದ್ ಕೇಂದ್ರೀಯ ವಿಶ್ವ ವಿದ್ಯಾಲಯ ಉಪಕುಲಪತಿÉ್ಪ್ರೂ. ಬಿ.ಜೆ ರಾವ್, ತುಮಕೂರು ವಿಶ್ವ ವಿದ್ಯಾಲಯದ ಪ್ರೊ. ವಐ.ಎಸ್ ಸಿದ್ಧಗೌಡ, ಕೋಯಿಕ್ಕೋಡ್ ವಿಶ್ವ ವಿದ್ಯಾಲಯದ ನಿಕಟಪೂರ್ವ ಉಪಕುಲಪತಿ ಪ್ರೊ. ಅಬ್ದುಲ್ ಸಲಾಂ, ತೆಲಂಗಾಣ ಸ್ಟೇಟ್ ಕೌನ್ಸಿಲ್ ಆಫ್ ಹೈಯರ್ ಎಜ್ಯುಕೇಶನ್ ಉಪಾಧ್ಯಕ್ಷ ಪ್ರೊ. ವೆಂಕಟರಮಣ, ವೈದ್ಯಾಧಿಕಾರಿಗಳಾದ ಡಾ. ಆರತಿ ನಾಯರ್, ಡಾ. ಎ.ಎಸ್ ಕಣ್ಣನ್ ಉಪಸ್ಥಿತರಿದ್ದರು.
ಡೀನ್ ಅಕಾಡಮಿಕ್ ಪ್ರೊ. ಅಮೃತ್ ಜಿ.ಕುಮಾರ್ ಸ್ವಾಗತಿಸಿದರು. ರಿಜಿಸ್ಟ್ರಾರ್ ಡಾ. ಎಂ. ಸಂತೋಷ್ ಕುಮಾರ್ ವಂದಿಸಿದರು. ಸಾಯಂಕಾಳ ನಡೆದ ಸಮಾರಂಭದಲ್ಲಿ ನೂತನ ಕಟ್ಟಡದ ಶಿಲಾಫಲಕವನ್ನು ಪ್ರೊ. ಎಚ್. ವೆಂಕಟೇಶ್ವರಲು ಅನಾವರಣಗೊಳಿಸಿದರು.