ಕುಂಬಳೆ: ಭಜನೆಯೆಂಬುದು ಧರ್ಮ ಜಾಗೃತಿಯ ಜೊತೆಗೆ ಮನುಷ್ಯನ ಮಾನಸಿಕ ಸ್ಥಿಮಿತಕಾಯ್ದುಕೊಂಡು ಭೌತಿಕ, ಶಾರೀಕ ಸಮತೋಲನಕ್ಕೆ ಸಹಕಾರಿ ಎಂದು ಒಡಿಯೂರು ಶ್ರೀದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಮುಜಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನದಲ್ಲಿ ಜರಗಿದ ಕಾಸರಗೋಡು ತಾಲೂಕು ಭಜನಾ ಅಭಿಮಾನ - ಆಭಿಯಾನ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭಾ ಸಂತ್ಸಂಗ ಕಾರ್ಯಕ್ರಮವನ್ನು ಉದ್ಧೇಶಿಸಿ ಆಶೀರ್ವಚನ ನೀಡಿದರು.
ಸಭಾ ಕಾರ್ಯಕ್ರದಲ್ಲಿ ಧಾರ್ಮಿಕ ಮುಂದಾಳು ವೆಂಕಟ್ರಮಣ ಹೊಳ್ಳ ಅಧ್ಯಕ್ತೆ ವಹಿಸಿದ್ದರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಧ.ಭ.ಪ ಕಾರ್ಯದರ್ಶಿ ಜಯರಾಮ್ ನೆಲ್ಲಿತ್ತಾಯ , ಮಧ್ವಾದೀಶ ರಾಮಕೃಷ್ಣ ಕಾಟುಕುಕ್ಕೆ, ಧ. ಗ್ರಾ. ಯೋ ಕಾಸರಗೋಡು ತಾಲೂಕಿನ ಯೋಜನಾಧಿಕಾರಿ ಮುಖೇಶ್ ಗಟ್ಟಿ, ಕ್ಷೇತ್ರಾಧಿಕಾರಿ ಜಯಪ್ರಕಾಶ್, ನಿತ್ಯಾನಂದ ನಾಯಕ್, ಕಮಲಾಕ್ಷ ಮೊದಲಾದವರು ಉಪಸ್ಥಿತರಿದ್ದರು.
ಬೆಳಗ್ಗಿನಿಂದಲೇ ಕ್ಷೇತ್ರಾಂಗಣದಲ್ಲಿ ವಿವಿಧ ಮಹಿಳಾ, ಮಕ್ಕಳ ಭಜನಾ ತಂಡಗಳಿಂದ ಬಜನೆ ಜರಗಿದ್ದು ಬಳಿಕ ನಡೆದ ಕುಣಿತ ಭಜನೆ ಆಕರ್ಷಣೀಯವಾಗಿ ಮೂಡಿಬಂದಿತ್ತು. ನೆರೆದ ಭಕ್ತಾದಿಗಳು ಭಜಕರು ದಿನವಿಡೀ ನಡೆದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಾರ್ಥರಾದರು.