ಕಾಸರಗೋಡು: ವಿದ್ಯಾನಗರ ಚಿನ್ಮಯ ಕಾಲನಿಯ ಶ್ರೀಕೃಷ್ಣ ಮಂದಿರದಲ್ಲಿ ಭಾಗವತ ಸಪ್ತಾಹ ಯಜ್ಞ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ಮಾ. 10ರಿಂದ 17ರ ವರೆಗೆ ಜರುಗಲಿದೆ.ಕಾರ್ಯಕ್ರಮದ ಪೂರ್ವಭಾವಿಯಾಗಿ ಬುಧವಾರ ಶ್ರೀ ಗಣಪತಿ ಹವನ, ಯಜ್ಞಾಚಾರ್ಯರು ಮತ್ತು ವಿಶೇಷ ಅಭ್ಯಾಗತರಿಗೆ ಸ್ವಾಗತ, ಆಚಾರ್ಯವರಣ, ಯಜ್ಞಮಂಟಪದಲ್ಲಿ ದೀಪ ಪ್ರಜ್ವಲನೆ, ಉದ್ಘಾಟನೆ, ಶ್ರೀಮದ್‍ಭಾಗವತ ಮಹಾತ್ಮೆ ಪಾರಾಯಣ, ಪ್ರವಚನ, ಅತ್ತಾಳ ಪೂಜೆ ನಡೆಯಿತು.
10ರಿಂದ 16ರ ವರೆಗೆ ಭಾಗವತ ಯಜ್ಞ ನಡೆಯಲಿದ್ದು, 10ರಂದು ಚಿನ್ಮಯ ಮಿಷನ್ ಕೇರಳ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಉದ್ಘಾಟಿಸುವರು. ಚಿನ್ಮಯ ಮಿಷನ್ ಒಟ್ಟಪ್ಪಾಲಂನ ಬ್ರಹ್ಮಚಾರಿ ಮುಕುಂದ ಚೈತನ್ಯ ಯಜ್ಞದ ಆಚಾರ್ಯರಾಗಿರುವರು.
15ರಂದು ಸಂಜೆ ವಿದ್ಯಾಗೋಪಾಲ ಮಂತ್ರಾರ್ಚನೆ, ಸರ್ವೈಶ್ವರ್ಯ ಪೂಜೆ, 16ರಂದು ಮಧ್ಯಾಹ್ನ 12ಕ್ಕೆ ಯಜ್ಞ ಸಮರ್ಪಣೆ ನಡೆಯಲಿದೆ. ಮಾ. 17ರಂದು ಶ್ರೀಕೃಷ್ಣ ಮಂದಿರದ ವಾರ್ಷಿಕೋತ್ಸವ, ಪ್ರತಿಷ್ಠಾ ದಿನ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯುವುದು. ಸಂಜೆ 5ಕ್ಕೆ ಶ್ರೀ ವಿಷ್ಣುಸಹಸ್ರನಾಮ, ಭಜನೆ, ಮಹಾಪೂಜೆ ನಡೆಯಲಿರುವುದು.