HEALTH TIPS

ಅಪ್ಪನ ಜತೆ ಸಂಬಂಧ ಇಟ್ಟುಕೊಳ್ಳಲು ಬಯಸದ ಮಗಳು ಶಿಕ್ಷಣ, ಮದುವೆಗೆ ಹಣ ಕೇಳಲು ಅರ್ಹಳಲ್ಲ ಎಂದ ಸುಪ್ರೀಂ

             ನವದೆಹಲಿ: ಅಪ್ಪ- ಅಮ್ಮ ದೂರ ದೂರವಿದ್ದ ಸಂದರ್ಭದಲ್ಲಿ ಮಗಳು ಅಪ್ಪನ ಜತೆ ಯಾವುದೇ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸದಿದ್ದರೆ, ಅವಳು ತನ್ನ ಶಿಕ್ಷಣಕ್ಕೆ ಮತ್ತು ಮದುವೆಗಾಗಿ ತನ್ನ ತಂದೆಯಿಂದ ಹಣ ಪಡೆಯಲು ಸಹ ಅರ್ಹಳಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ.

             ಮಗಳು ತನ್ನ ಜೀವನವನ್ನು ತನ್ನ ಇಚ್ಚೆಯಂತೆ ನಡೆಸಿಕೊಂಡು ಹೋಗಲು ಸ್ವತಂತ್ರಳಾಗಿದ್ದು, ತಂದೆಯ ಜತೆ ಯಾವುದೇ ಸಂಬಂಧವನ್ನು ಮುಂದುವರೆಸಿಕೊಂಡು ಹೋಗಲು ಇಚ್ಛಿಸದಿದ್ದರೆ ಆಕೆ ಶಿಕ್ಷಣ ಮತ್ತು ಮದುವೆಗೆ ಹಣ ನೀಡುವಂತೆ ತಂದೆಯನ್ನು ಕೇಳಲು ಅರ್ಹಳಲ್ಲ ಎಂದು ಕೋರ್ಟ್​ ಮಹತ್ವದ ತೀರ್ಪು ನೀಡಿದೆ.

             ಪಂಜಾಬ್​ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದ್ರೇಶ್ ಅವರನ್ನು ಒಳಗೊಂಡ ಪೀಠವು ಈ ಆದೇಶವನ್ನು ಹೊರಡಿಸಿದೆ.

ಒಂದು ವೇಳೆ ಪತ್ನಿಯು ಮಗಳನ್ನು ನೋಡಿಕೊಳ್ಳಲು ಬಯಸಿದರೆ, ಆಕೆಗೆ ಸಿಗುವ ಪರಿಹಾರದ ಮೊತ್ತವನ್ನು ನಿರ್ಧರಿಸುವ ಸಂದರ್ಭದಲ್ಲಿ ಮಗಳನ್ನು ಗಮನದಲ್ಲಿ ಇಟ್ಟುಕೊಂಡು ಕೋರ್ಟ್​ಗಳು ಈ ಹಣವನ್ನು ನಿರ್ಧಾರ ಮಾಡಬಹುದೇ ವಿನಾ, ಮಗಳು ತನ್ನ ವೆಚ್ಚವನ್ನು ತಂದೆಯಿಂದ ಕೇಳಲು ಅರ್ಹಳಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

             ಈ ಪ್ರಕರಣದಲ್ಲಿ ಪಂಜಾಬ್​ನ ವ್ಯಕ್ತಿಯೊಬ್ಬರು ಪತ್ನಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಅದನ್ನು ಕೌಟುಂಬಿಕ ಕೋರ್ಟ್​ ಮಾನ್ಯ ಮಾಡಿತ್ತು. ಈ ಆದೇಶವನ್ನು ಪತ್ನಿ ಪಂಜಾಬ್​-ಹರಿಯಾಣ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ವಿಚ್ಛೇದನ ಆದೇಶವನ್ನು ಹೈಕೋರ್ಟ್​ ವಜಾ ಮಾಡಿತ್ತು. ಇದನ್ನು ಪತಿ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.

            ಸುಪ್ರೀಂಕೋರ್ಟ್​ನಲ್ಲಿ ದಂಪತಿಗೆ ರಾಜಿ ಸಂಧಾನ ಮಾಡಲು ಪ್ರಯತ್ನಿಸಲಾಯಿತು. ಅದೇ ರೀತಿ ಹುಟ್ಟಿದಾಗಿನಿಂದಲೂ ಅಮ್ಮನ ಜತೆಯೇ ಇದ್ದ 20 ವರ್ಷದ ಮಗಳಿಗೂ ಕೌನ್ಸೆಲಿಂಗ್​ ನಡೆಸಲಾಯಿತು. ದಂಪತಿ ಒಟ್ಟಾಗಿ ಇರುವುದು ಸಾಧ್ಯವೇ ಇಲ್ಲ ಎಂದರೆ, ಮಗಳು ಕೂಡ ಅಪ್ಪನ ಜತೆ ತಾನು ಹೋಗುವುದಿಲ್ಲ ಎಂದಳು. ಆದರೆ ಆಕೆಯ ಖರ್ಚನ್ನು ಭರಿಸುವಂತೆ ಪತ್ನಿ ಕೋರಿಕೊಂಡಿದ್ದರು.

ಇದರ ವಿಚಾರಣೆ ನಡೆಸಿದ ಕೋರ್ಟ್​, ಪತ್ನಿಗೆ ಕಾನೂನಿನ ಅನ್ವಯ ನೀಡಬಹುದಾದ ಪರಿಹಾರದ ಮೊತ್ತ ನೀಡಬಹುದು. ಆದರೆ ಮಗಳು ತಂದೆಯ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳಲು ಬಯಸದ ಹಿನ್ನೆಲೆಯಲ್ಲಿ ಆಕೆಯ ಶಿಕ್ಷಣವಾಗಲಿ, ಮದುವೆಯ ಬಗ್ಗೆ ಅವಳು ಹಣವನ್ನು ತಂದೆಯಿಂದ ಕೇಳಲು ಅರ್ಹಳಲ್ಲ ಎಂದು ಹೇಳಿದೆ.

                ಈ ಪ್ರಕರಣದಲ್ಲಿ 10 ಲಕ್ಷ ರೂಪಾಯಿ ಪರಿಹಾರ ಹಾಗೂ ಮಾಸಿಕವಾಗಿ ಎಂಟು ಸಾವಿರ ರೂಪಾಯಿಗಳನ್ನು ಪತ್ನಿಗೆ ನೀಡುವಂತೆ ಕೋರ್ಟ್​ ಆದೇಶಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries