HEALTH TIPS

ಪ್ರಜೆಗಳು ಆನ್‌ಲೈನ್ ನಲ್ಲಿ ಸ್ವಯಂ ಗಣತಿ ವಿವರಗಳನ್ನು ದಾಖಲಿಸಲು ಹೊಸ ಜನಗಣತಿ ನಿಯಮಗಳಲ್ಲಿ ಅವಕಾಶ

               ನವದೆಹಲಿ:ಕೇಂದ್ರ ಸರಕಾರವು ಹೊಸ ಜನಗಣತಿ ನಿಯಮಗಳನ್ನು ಅಧಿಸೂಚಿಸಿದ್ದು,ಭಾರತೀಯ ಪ್ರಜೆಗಳು ಜನಗಣತಿ ಸಂದರ್ಭ ಆನ್‌ಲೈನ್‌ನಲ್ಲಿ ಸ್ವಯಂ ಗಣತಿ ವಿವರಗಳನ್ನು ದಾಖಲಿಸಲು ಸಾಧ್ಯವಾಗಲಿದೆ.

‌          ಕೇಂದ್ರವು 2020ರಲ್ಲಿಯೇ ಜನಗಣತಿ ನಿಯಮಗಳಿಗೆ ತಿದ್ದುಪಡಿಗಳನ್ನು ಪ್ರಕಟಿಸಿತ್ತಾದರೂ ಶುಕ್ರವಾರವಷ್ಟೇ ಈ ಬಗ್ಗೆ ಗೆಝೆಟ್ ಅಧಿಸೂಚನೆಯನ್ನು ಹೊರಡಿಸಿದೆ.

            ಗೆಝೆಟ್ ಅಧಿಸೂಚನೆಯಲ್ಲಿ ಗೃಹ ಸಚಿವಾಲಯವು 'ವಿದ್ಯುನ್ಮಾನ ನಮೂನೆ' ಮತ್ತು 'ಸ್ವಯಂ ಗಣತಿ ' ಶಬ್ದಗಳನ್ನು ಸೇರಿಸಲು ನಿಯಮಗಳನ್ನು ಪರಿಷ್ಕರಿಸಿದೆ. ವ್ಯಾಖ್ಯೆಗಳನ್ನು ಹೊಂದಿರುವ ನಿಯಮ 2ರ 'ಸಿ'ಉಪನಿಬಂಧನೆಯಲ್ಲಿ ತಿದ್ದುಪಡಿಯನ್ನು ಸೇರಿಸಲಾಗಿದೆ.
             ಈ ನಿಯಮಗಳ ಇತರ ಯಾವುದೇ ನಿಬಂಧನೆಗಳಿಗೆ ಪೂರ್ವಾಗ್ರಹವಿಲ್ಲದೆ ವ್ಯಕ್ತಿಯು ಸ್ವಯಂ ಗಣತಿಯ ಮೂಲಕ ಆನ್‌ಲೈನ್ ಜನಗಣತಿ ನಮೂನೆಯಲ್ಲಿ ವಿವರಗಳನ್ನು ತುಂಬಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

           ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ರಜಿಸ್ಟರ್‌ನ ಉನ್ನತೀಕರಣವನ್ನು 2020ರ ಎಪ್ರಿಲ್ ಮತ್ತು ಸೆಪ್ಟಂಬರ್ ನಡುವೆ ನಡೆಸಲು ನಿರ್ಧರಿಸಲಾಗಿತ್ತು,ಆದರೆ ಕೋವಿಡ್ ಸಾಂಕ್ರಾಮಿಕದಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

            ಸ್ವಯಂ ಗಣತಿಯ ಆಯ್ಕೆಯ ಜೊತೆಗೆ ಮನೆ ಭೇಟಿಗಳ ಮೂಲ ಪದ್ಧತಿಯ ಮೂಲಕವೂ ಜನಗಣತಿ ನಡೆಯಲಿದೆ. ಹೆಚ್ಚಾಗಿ ಸರಕಾರಿ ಅಧಿಕಾರಿಗಳು ಮತ್ತು ಸರಕಾರಿ ಶಾಲಾ ಶಿಕ್ಷಕರು ಸೇರಿದಂತೆ ಸುಮಾರು 30 ಲಕ್ಷ ಗಣತಿದಾರರು ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳ ಮೂಲಕ ತಲಾ 650ರಿಂದ 800 ಕುಟುಂಬಗಳ ವಿವರಗಳನ್ನು ಸಂಗ್ರಹಿಸಲಿದ್ದಾರೆ.

               ಜನಗಣತಿಯ ಅಂಕಿಅಂಶಗಳ ಪ್ರಕಟಣೆಗೆ ಸಂಬಂಧಿಸಿದ ಜನಗಣತಿ ನಿಯಮಗಳ ನಿಯಮ 5ಕ್ಕೆ ತರಲಾಗಿರುವ ಪ್ರತ್ಯೇಕ ತಿದ್ದುಪಡಿಯಲ್ಲಿ 'ಮಾಧ್ಯಮಗಳು' ಶಬ್ದದ ಬದಲಾಗಿ 'ವಿದ್ಯುನ್ಮಾನ ಅಥವಾ ಇತರ ಯಾವುದೇ ಮಾಧ್ಯಮಗಳು' ಎಂದು ಸೇರಿಸಲಾಗಿದೆ.
          ಜನಗಣತಿಯ ಪ್ರಚಾರ ವಿಧಾನಗಳನ್ನು ಉಲ್ಲೇಖಿಸುವಾಗ ಕೇಂದ್ರವು 'ರೇಡಿಯೊ'ದ ಬಳಿಕ 'ಮುದ್ರಣ ಮಾಧ್ಯಮ,ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಮಾಧ್ಯಮ 'ಎಂಬ ಪದಗುಚ್ಛವನ್ನೂ ಸೇರಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries