ಮಧೂರು: ಕನ್ನಡ ಹೋರಾಟಗಾರರಾದ ಡಾ.ಕಯ್ಯಾರ ಕಿಂಞ್ಞಣ್ಣ ರೈ ಅವರ ಹೆಸರಿನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ ಗಡಿನಾಡ ಚೇತನ ಪ್ರಶಸ್ತಿಗೆ ಪಾತ್ರರಾದ ಕನ್ನಡದ ಸಂತ ಬಿ.ಪುರುಷೋತ್ತಮ ಮಾಸ್ತರ್ ಅವರಿಗೆ ಅವರ ಮನೆಯಲ್ಲಿ ಹಾಲೆಹೊಂಡ ಶ್ರೀ ಮಹಾಮಾಯೆ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ವಿ.ಶ್ರೀನಿವಾಸ್, ಕಾರ್ಯದರ್ಶಿ ದಿನೇಶ್ ಅಣಂಗೂರು, ಜೊತೆ ಕಾರ್ಯದರ್ಶಿ ಜಗದೀಶ್ ಬಿ, ಸದಸ್ಯರಾದ ಕಮಲಾಕ್ಷ ಅಣಂಗೂರು, ಬಿ.ಗಂಗಾಧÀರ ಅಣಂಗೂರು, ಚಂದ್ರಕಾಂತ ಅಣಂಗೂರು, ನಳಿನಾಕ್ಷ ಅಣಂಗೂರು, ನವೀನ್ ಪರಕ್ಕಿಲ, ಲಕ್ಷ್ಮೀ ನಾರಾಯಣ ಕೋಟೆಕಣಿ, ಅನಿತಾ ಶ್ರೀನಿವಾಸ್, ಬಿ.ವೆಂಕಟೇಶ್ ಅಣಂಗೂರು, ಯತೀರಾಜ್ ಅಣಂಗೂರು, ಪಾಂಡುರಂಗ ಮೀಪುಗುರಿ ಮೊದಲಾದವರು ಉಪಸ್ಥಿತರಿದ್ದರು.