ಬರ್ಲಿನ್: ದೇಶದ ಪರಮಾಣು ಸೌಲಭ್ಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ 'ತುರ್ತು ತಾಂತ್ರಿಕ ನೆರವು' ನೀಡುವುದರ ಸಂಬಂಧ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಲು ವಿಶ್ವಸಂಸ್ಥೆ ಪರಮಾಣು ವಾಚ್‌ಡಾಗ್ ಮಹಾನಿರ್ದೇಶಕರು ಉಕ್ರೇನ್‌ಗೆ ಆಗಮಿಸಿದ್ದಾರೆ.
ಉಕ್ರೇನ್‌ನ ಪರಮಾಣು ತಾಣಗಳ ಸುರಕ್ಷತೆ ಮತ್ತು ಭದ್ರತಾ ಬೆಂಬಲವನ್ನು ಆರಂಭಿಸುವುದು ರಾಫೆಲ್ ಮರಿಯಾನೋ ಗ್ರಾಸ್ಸಿ ಅವರ ಗುರಿಯಾಗಿದೆ ಎಂದು ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ ಹೇಳಿದೆ. ಐಎಇಎ ತಜ್ಞರನ್ನು 'ಆದ್ಯತೆಯ ಸೌಲಭ್ಯ' ಒದಗಿಸುವುದು, ಮೇಲ್ವಿಚಾರಣೆ ಮತ್ತು ತುರ್ತು ಸಲಕರಣೆಗಳನ್ನು ಒಳಗೊಂಡಂತೆ 'ಪ್ರಮುಖ ಸುರಕ್ಷತೆ ಮತ್ತು ಭದ್ರತಾ ಸರಬರಾಜುಗಳನ್ನು' ಕಳುಹಿಸುವುದು ಸೇರಿದೆ.
ಈ ವಾರ ಉಕ್ರೇನ್‌ನ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಒಂದಕ್ಕೆ ಗ್ರಾಸಿ ಭೇಟಿ ನೀಡಲಿದ್ದಾರೆ. ಆದರೆ ಯಾವುದೆಂದು ಹೇಳಿಲ್ಲ. ಉಕ್ರೇನ್ ನಾಲ್ಕು ಸಕ್ರಿಯ ವಿದ್ಯುತ್ ಸ್ಥಾವರಗಳಲ್ಲಿ 15 ಪರಮಾಣು ರಿಯಾಕ್ಟರ್‌ಗಳನ್ನು ಹೊಂದಿದೆ. 1986ರ ಪರಮಾಣು ದುರಂತದ ಸ್ಥಳವಾದ ಚೆರ್ನೋಬಿಲ್ ಸ್ಥಾವರವನ್ನು ನಿಷ್ಕ್ರಿಯಗೊಳಿಸಲಾಗಿದೆ. ರಷ್ಯಾದ ಪಡೆಗಳು ಚೆರ್ನೋಬಿಲ್ ಮತ್ತು ಝಪೊರಿಝಿಯಾದಲ್ಲಿನ ಅತಿದೊಡ್ಡ ಸಕ್ರಿಯ ವಿದ್ಯುತ್ ಸ್ಥಾವರದ ನಿಯಂತ್ರಣವನ್ನು ತೆಗೆದುಕೊಂಡಿವೆ.
ರಷ್ಯಾ ಸೇನೆ ದಾಳಿಯಿಂದ ಉಕ್ರೇನ್‌ನ ಪರಮಾಣು ವಿದ್ಯುತ್ ಸ್ಥಾವರಗಳು, ವಿಕೀರಣ ಸೋರಿಕೆ ಇತರ ಸೌಲಭ್ಯಗಳು ಹೆಚ್ಚು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಗ್ರಾಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.