ತಿರುವನಂತಪುರ: ರಾಷ್ಟ್ರೀಯ ಮುಷ್ಕರದ ಹಿನ್ನೆಲೆಯಲ್ಲಿ ನಾಲ್ಕು ದಿನ ರಜೆ ಇರುವುದರಿಂದ ಕೇರಳದಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಕಾರ್ಮಿಕ ಸಂಘಟನೆಗಳು ಘೋಷಿಸಿರುವ ರಾಷ್ಟ್ರೀಯ ಮುಷ್ಕರಕ್ಕೆ ಭಾನುವಾರ ಸೇರಿದಂತೆ ನಾಲ್ಕು ದಿನ ರಜೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ಸರ್ಕಾರಿ ನೌಕರರು ಹೀಗೆ ಎಲ್ಲ ವರ್ಗದ ಜನರು ಬೇರೆ ರಾಜ್ಯಗಳತ್ತ ಪ್ರಯಾಣ ಬೆಳೆಸಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಮುಷ್ಕರಗಳು ನಡೆಯುತ್ತಿವೆ. ಕೇರಳದಲ್ಲಿ ಎಲ್ಲವೂ ಬಂದ್ ಆಗಿರುವುದು ಸ್ಪಷ್ಟವಾಗುತ್ತಿದ್ದಂತೆ ಬಹುತೇಕರು ಶನಿವಾರ ರಾತ್ರಿಯೇ ರಾಜ್ಯ ತೊರೆದಿದ್ದಾರೆ. ರೈಲಿನಲ್ಲಿ ಮಲಯಾಳಿಗಳ ದಂಡೇ ತುಂಬಿರುವುದು ಕಂಡುಬಂದಿದೆ. ಕೊನೆ ಗಳಿಗೆಯಲ್ಲಿ ಟಿಕೆಟ್ ಸಿಗದೆ ಹಲವರು ನಿರಾಸೆಯಿಂದ ವಾಪಸಾದರು. ರಾಷ್ಟ್ರೀಯ ಮುಷ್ಕರಗಳು ಕೇರಳದ ಹೊರಗೆ ಪರಿಣಾಮ ಬೀರುವುದಿಲ್ಲ. ಈ ದಿನಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಪ್ರವಾಸಿ ಕೇಂದ್ರಗಳಿಗೆ ಹೆಚ್ಚಿನವರೂ ತೆರಳಿದ್ದಾರೆ.
ಏತನ್ಮಧ್ಯೆ, ಪ್ರವಾಸ ಕಂಪನಿಗಳು ಕಾಶ್ಮೀರ, ಕುಲು-ಮನಾಲಿ ಮತ್ತು ದೆಹಲಿ-ಆಗ್ರಾದಂತಹ ಸ್ಥಳಗಳಿಗೆ ಭಾರಿ ಕೊಡುಗೆಗಳನ್ನು ಘೋಷಿಸಿವೆ. ಕೇರಳದ ವಿವಿಧ ಜಿಲ್ಲೆಗಳ ಜನರು ಪ್ರವಾಸವನ್ನು ಬುಕ್ ಮಾಡಿದ್ದಾರೆ. ಇದು ಕೊರೋನಾ ಯುಗದ ಬಳಿಕದ ಸವಾಲುಗಳಿಂದ ಹೊರಬರಲು ಪ್ರವಾಸ ಕಂಪನಿಗಳಿಗೆ ಸಾಧ್ಯವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಗೋವಾ ಮತ್ತು ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಮಲಯಾಳಿಗಳ ವಿಪರೀತ ದಟ್ಟಣೆÉಯ ಕಾರಣ ಬುಕ್ಕಿಂಗ್ ಮುಗಿದಿದೆ. ಕೊಲ್ಲೂರು, ಉಡುಪಿ ಮತ್ತು ಪಳನಿ ಮಧುರೈನ ಹೊಟೇಲ್‍ಗಳಲ್ಲೂ ಬುಕ್ಕಿಂಗ್ ಮುಕ್ತಾಯಗೊಂಡಿದೆ. ಮಲಪ್ಪುರಂನ ನಾಡುಕಣಿ ಪಾಸ್ ಮತ್ತು ಕೋಝಿಕ್ಕೋಡ್‍ನ ಥಾಮರಸ್ಸೆರಿ ಪಾಸ್‍ನಲ್ಲಿ ಸಂಜೆ ಭಾರೀ ದಟ್ಟಣೆ ಉಂಟಾಗಿದೆ. ಇಲ್ಲಿ ಗಂಟೆಗಟ್ಟಲೆ ವಾಹನಗಳು ನಿಂತಿದ್ದವು. ಅದೇನೇ ಇರಲಿ, ಈಗ ರಾಷ್ಟ್ರೀಯ ಮುಷ್ಕರದ ಲಾಭವನ್ನು ಇತರ ರಾಜ್ಯಗಳು ಪಡೆಯುತ್ತಿವೆ.
ಆದರೆ ಮುಷ್ಕರದಿಂದಾಗಿ ಕೇರಳದ ಪ್ರವಾಸೋದ್ಯಮ ಕ್ಷೇತ್ರ ಭಾರೀ ಹಿನ್ನಡೆ ಎದುರಿಸುತ್ತಿದೆ. ಎರಡು ದಿನಗಳ ಮುಷ್ಕರವು ಕೊರೋನಾ ದುರಂತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಪ್ರವಾಸೋದ್ಯಮ ಕ್ಷೇತ್ರಕ್ಕೆ ದೊಡ್ಡ ಹೊಡೆತವಾಗಿದೆ. ಕೇರಳದ ಪ್ರವಾಸಿಗರು ಬೇರೆ ರಾಜ್ಯಗಳಿಗೆ ತೆರಳುವುದರಿಂದ ಕೇರಳ ಪ್ರವಾಸೋದ್ಯಮದ ದುಸ್ಥಿತಿ ಇದು.