ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಸ್ವತಃ ಪ್ರಾಣಭೀತಿ ಎದುರಾಗಿದ್ದು, ಇದೇ ಕಾರಣಕ್ಕೆ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಬರೊಬ್ಬರಿ 1 ಸಾವಿರ ವೈಯುಕ್ತಿಕ ಸಿಬ್ಬಂದಿಗಳನ್ನು ಬದಲಿಸಿದ್ದಾರೆ ಎಂದು ಹೇಳಲಾಗಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 1,000 ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ. ಅಡುಗೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಖಾಸಗಿ ಕಾರ್ಯದರ್ಶಿಗಳು ಹೀಗೆ ಸುಮಾರು 1000 ಜನರನ್ನು ವಜಾಮಾಡಲಾಗಿದೆ. ರಷ್ಯಾದ ಗುಪ್ತಚರ ವರದಿಗಳ ಪ್ರಕಾರ ಪುಟಿನ್ ಗೆ ತನ್ನ ಹಳೆಯ ಸಿಬ್ಬಂದಿಗಳಿಂದ ಆಹಾರದಲ್ಲಿ ವಿಷ ಸೇರಿಸಿ ತನ್ನನ್ನ ಸಾಯಿಸಲಿದ್ದಾರೆಂಬ ಭಯದಲ್ಲಿ ಬದುಕುತ್ತಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಈ ಕಾರಣಕ್ಕಾಗಿಯೇ ಪುಟಿನ್ 1,000 ವೈಯಕ್ತಿಕ ಸಿಬ್ಬಂದಿಯನ್ನು ವಜಾಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ರಷ್ಯಾ ಉಕ್ರೇನ್ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ. ಪುಟಿನ್ ಹೊರಗೆ ಗಾಂಭೀರ್ಯತೆಯನ್ನ ತೋರುವಂತೆ ನಟಿಸುತ್ತಿದ್ದರೂ ಒಳಗೊಳಗೆ ಜೀವಭಯದಲ್ಲಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಯುದ್ಧದಿಂದ ಹೊರಬರುವುದು ಹೇಗೆ ಎಂದು ಪುಟಿನ್‌ಗೆ ತಿಳಿಯುತ್ತಿಲ್ಲ ಎಂಬ ವರದಿಗಳೂ ಇವೆ.