HEALTH TIPS

ನೀವೇನಾದರೂ ಈ ಅಡುಗೆಮನೆಯ ಪದಾರ್ಥಗಳನ್ನು ಮುಖಕ್ಕೆ ಹಚ್ಚುತ್ತಿದ್ದರೆ, ಕೂಡಲೇ ನಿಲ್ಲಿಸಿ

        ತ್ವಚೆಯ ಆರೈಕೆಗಾಗಿ ಮಾರ್ಕೆಟ್‌ನಲ್ಲಿ ಸಿಗುವ ಉತ್ಪನ್ನಗಳಿಗಿಂತ, ಮನೆಮದ್ದುಗಳೇ ಸುರಕ್ಷಿತ ಎನ್ನುವುದುಂಟು. ಇದೇ ಕಾರಣಕ್ಕಾಗಿಯೇ, ಹೆಚ್ಚಿನವರು ಮನೆಮದ್ದುಗಳ ಮೊರೆ ಹೋಗುತ್ತಾರೆ. ಆದರೆ, ಅಡುಗೆಮನೆಯಲ್ಲಿ ಸಿಗುವ ಸಿಕ್ಕಸಿಕ್ಕ ಪದಾರ್ಥಗಳನ್ನೆಲ್ಲಾ ಮುಖಕ್ಕೆ ಸಂಬಂಧಿಸಿದ ಮನೆಮದ್ದುಗಳಲ್ಲಿ ಬಳಸುವುದು ಸರಿಯಲ್ಲ. ನಿಮ್ಮ ಚರ್ಮಕ್ಕೆ ಯಾವುದು ಹೊಂದಿಕೊಳ್ಳುತ್ತದೆ? ಯಾವುದನ್ನು ಹಚ್ಚಬಾರದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಹಾಗಾಗಿ ನಾವಿಂದು, ಮುಖಕ್ಕೆ ಬಳಸಲೇಬಾರದ ಅಡುಗೆಮನೆಯ ಪದಾರ್ಥಗಳ ಬಗ್ಗೆ ತಿಳಿಸಿಕೊಡುತ್ತೇವೆ. ನೀವೇನಾದರೂ, ಇವುಗಳನ್ನು ನಿಮ್ಮ ಫೇಸ್ ಮಾಸ್ಕ್ಕಗಳಲ್ಲಿ ಬಳಸುತ್ತಿದ್ದರೆ, ಕೂಡಲೇ ನಿಲ್ಲಿಸಿ.

          ಮುಖಕ್ಕೆ ಬಳಸಬಾರದ ಅಡುಗೆಮನೆಯ ಪದಾರ್ಥಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

         ನಿಂಬೆಹಣ್ಣು: ಸಾಮಾನ್ಯವಾಗಿ ಹೆಚ್ಚಿನ ಮನೆಮದ್ದುಗಳಲ್ಲಿ ಈ ಒಂದು ಪದಾರ್ಥ ಇದ್ದೇ ಇರುವುದು. ನಿಂಬೆ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದರೂ, ಇದನ್ನು ಫೇಸ್‌ ಮಾಸ್ಕ್‌ಗಳಲ್ಲಿ ಬಳಸಬಾರದು. ಏಕೆಂದರೆ, ಅವು ಸಿಟ್ರಿಕ್ ಆಮ್ಲವನ್ನು ಹೊಂದಿದ್ದು, ಇದು ಸೂಕ್ಷ್ಮ ಚರ್ಮ ಹೊಂದಿರುವ ಜನರಿಗೆ ಕಿರಿಕಿರಿಯನ್ನು ಉಂಟುಮಾಡಬಹುದು. ಹೆಲ್ತ್‌ಲೈನ್ ಪ್ರಕಾರ, ನಿಂಬೆ ರಸವನ್ನು ಮುಖದ ಮೇಲೆ ಹಚ್ಚುವುದರಿಂದ ಫೈಟೊಫೋಟೊಡರ್ಮಟೈಟಿಸ್‌ಗೆ ಕಾರಣವಾಗಬಹುದು. ಇದು ಸಿಟ್ರಸ್ ಹಣ್ಣುಗಳಿಂದ ಉಂಟಾಗುವ ಚರ್ಮದ ಪ್ರತಿಕ್ರಿಯೆಯ ಒಂದು ವಿಧವಾಗಿದೆ. ಜೊತೆಗೆ ನಿಂಬೆ ರಸವು ಚರ್ಮ ಸುಡುವುದಕ್ಕೂ ಕಾರಣವಾಗಬಹುದು.

 ದಾಲ್ಚಿನ್ನಿ: ದಾಲ್ಚಿನ್ನಿ ಆರೋಗ್ಯಕ್ಕೆ ಉತ್ತಮವೇ ಹೊರತು, ಚರ್ಮಕ್ಕೆ ಒಳ್ಳೆಯದಲ್ಲ. ದಾಲ್ಚಿನ್ನಿಯನ್ನು ತ್ವಚೆಯ ಆರೈಕೆಗೆ ಬಳಸುವುದರಿಂದ, ಒಳಿತಿಗಿಂತ ಹಾನಿಯೇ ಹೆಚ್ಚಾಗುವುದು. ತಜ್ಞರ ಪ್ರಕಾರ, ದಾಲ್ಚಿನ್ನಿ ಮುಖದ ಮೇಲೆ ಕೆಂಪು ಗುಳ್ಳೆ ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು. ಸೂಕ್ಷ್ಮ ಚರ್ಮವನ್ನು ಹೊಂದಿರುವ ಜನರು ಇದನ್ನು ಬಳಸಲೇಬಾರದು, ಬಳಸಿದರೆ, ನಾನಾ ಸಮಸ್ಯೆಗಳನ್ನು ಎದುರಸಿಬೇಕಾಗಬಹುದು.

ಆಪಲ್ ಸೈಡರ್ ವಿನೆಗರ್: ಮುಖದ ಕಾಂತಿ ಹೆಚ್ಚಿಸಲು ಹಾಗೂ ಕಲೆಗಳನ್ನು ಕಡಿಮೆಮಾಡಲು, ಬಹಳಷ್ಟು ಜನರು ಆಪಲ್ ಸೈಡರ್ ವಿನೆಗರ್ ಅನ್ನು ಶಿಫಾರಸು ಮಾಡಿದ್ದಾರೆ. ಆದರೆ, ಇದು ಕೂಡ ಹೆಚ್ಚು ಆಮ್ಲೀಯವಾಗಿದ್ದು, ನೈಸರ್ಗಿಕ ಚರ್ಮಕ್ಕೆ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಇದನ್ನು ಮುಖಕ್ಕೆ ಬಳಸದೇ ಇರುವುದು ಉತ್ತಮ. ಜೊತೆಗೆ ಆಪಲ್ ಸೈಡರ್ ವಿನೆಗರ್ ಅನ್ನು ಅತಿಯಾಗಿ ಬಳಸುವುದರಿಂದ ರಾಸಾಯನಿಕ ಸುಡುವಿಕೆಗೆ ಕಾರಣವಾಗಬಹುದು.

ಮಸಾಲೆ ಪದಾರ್ಥಗಳು: ಅರಿಶಿನ, ಕಾಳುಮೆಣಸು, ಜೀರಿಗೆ ಮೊದಲಾದ ಮಸಾಲೆ ಪದಾರ್ಥಗಳು ಆಹಾರದ ರುಚಿಯನ್ನು ಹೆಚ್ಚಿಸಲು ಸಹಕಾರಿ, ಆದರೆ, ನಿಮ್ಮ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳಲ್ಲಿ ನಿಮ್ಮ ಮುಖದ ಸೂಕ್ಷ್ಮ ಚರ್ಮವನ್ನು ಕೆರಳಿಸುವಂತಹ ಅಂಶಗಳಿದ್ದು, ಹಲವಾರು ವ್ಯತಿರಿಕ್ತ ಪರಿಣಾಮಗಳಿಗೆ ಕಾರಣವಾಗಬಹುದು. ಆದ್ದರಿಂದ ಮಸಾಲೆ ಪದಾರ್ಥಗಳನ್ನು ನಿಮ್ಮ ಮನೆಮದ್ದುಗಳಲ್ಲಿ ಸೇರಿಸಬೇಡಿ.

ಸಸ್ಯಜನ್ಯ ಎಣ್ಣೆ: ತ್ವಚೆಯ ಆರೈಕೆಗಾಗಿ ಬಹಳಷ್ಟು ಜನರು ಸಸ್ಯಜನ್ಯ ಎಣ್ಣೆಯನ್ನು ಶಿಫಾರಸು ಮಾಡಿದ್ದಾರೆ. ಆದಾಗ್ಯೂ, ವಿಭಿನ್ನ ಜನರು ವಿಭಿನ್ನ ಚರ್ಮದ ಪ್ರಕಾರಗಳನ್ನು ಹೊಂದಿರುವುದರಿಂದ, ಎಲ್ಲರೂ ಒಂದೇ ಮಾದರಿಯನ್ನು ಅನುಸರಿಸಬಾರದು. ಅದು ಒಂದೇ ರೀತಿಯ ಫಲಿತಾಂಶಗಳನ್ನು ನೀಡಲಾರದು. ಸಸ್ಯಜನ್ಯ ಎಣ್ಣೆಯನ್ನು ಅನ್ವಯಿಸುವುದರಿಂದ ಚರ್ಮ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries