ಕುಂಬಳೆ : ಕುಂಬಳೆ ಅಬಕಾರಿ ಕಚೇರಿಗೆ ಶನಿವಾರ ಮಧ್ಯರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ನಡೆದಿದೆ. ಬದಿಯಡ್ಕ ರಸ್ತೆಯಲ್ಲಿರುವ ಕುಂಬಳೆ ಅಬಕಾರಿ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ದುಷ್ಕರ್ಮಿಗಳು ಯತ್ನಿಸಿದರು.
ದುಷ್ಕರ್ಮಿಗಳು ಜೀಪಿನೊಳಗೆ ಕಲ್ಲುಗಳನ್ನು ತುಂಬಿಕೊಂಡು ಇತರ ವಾಹನಗಳನ್ನು ನಾಶಪಡಿಸಲು ಪ್ರಯತ್ನಿಸಿದರು. ಕರ್ತವ್ಯ ನಿರತ ಅಬಕಾರಿ ಅಧಿಕಾರಿಗಳು ಕಿಟಕಿಯ ಮೂಲಕ ನೋಡಿದಾಗ ಪೆಟ್ರೋಲ್ ಸುರಿಯುವುದು ಕಂಡುಬಂದಿತು. ಪೆÇೀಲೀಸರು ಗಮನಿಸುವುದನ್ನು ಕಂಡು ದಾಳಿಕೋರರು ಪರಾರಿಯಾಗಿದ್ದಾರೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಅಬ್ಕಾರಿ ಪ್ರಕರಣ ದಾಖಲಾಗಿ, ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಯೋರ್ವನ ಕೃತ್ಯವೆಂದು ಶಂಕಿಸಲಾಗಿದೆ. ಕುಂಬಳೆ ಪೆÇಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.