ತಿರುವನಂತಪುರ: ಕಾಂಗ್ರೆಸ್ ನಾಯಕತ್ವಕ್ಕೆ ಸಂಸದ ಶಶಿ ತರೂರ್ ಮತ್ತೊಮ್ಮೆ ಇರಿಸುಮುರಿಸು ಸೃಷ್ಟಿಸಿ ನುಂಗಲಾರದ ತುತ್ತಾಗಿದ್ದಾರೆ. ಸಿಪಿಎಂ ಪಕ್ಷದ ಸಮ್ಮೇಳನದ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳದಂತೆ ಕೆಪಿಸಿಸಿ ನಿಷೇಧ ಹೇರಿರುವುದು ತಮಗೆ ಗೊತ್ತಿಲ್ಲ ಎಂದು ಶಶಿ ತರೂರ್ ಹೇಳಿಕೆ ನೀಡಿರುವುದು ನಾಯಕತ್ವದಲ್ಲಿ ಗೊಂದಲ ಮೂಡಿಸಿದೆ. ನಿಷೇಧ ಹೇರಲಾಗಿದೆ ಎಂದು ಕೆ. ಸುಧಾಕರನ್ ಮಾಧ್ಯಮಗಳಿಗೆ ವಿವರಣೆ ನೀಡಿದ ಬಳಿಕ ತರೂರ್ ಅವರ ಪ್ರತಿಕ್ರಿಯೆ ಹೊರಬಂದಿದೆ.
ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಶಶಿ ತರೂರ್ ಕಾರ್ಯಕ್ರಮಕ್ಕೆ ತೆರಳಿದರೆ ಕೆಪಿಸಿಸಿ ಹೈಕಮಾಂಡ್ ಮೊರೆ ಹೋಗಬಹುದು.
ಸಿಪಿಎಂ ಶಶಿ ತರೂರ್ ಮತ್ತು ಕೆವಿ ಥಾಮಸ್ ಅವರನ್ನು ಸೆಮಿನಾರ್‌ಗೆ ಆಹ್ವಾನಿಸಿದೆ. ಕಾಂಗ್ರೆಸ್ ನಾಯಕರು ಸಮಾರಂಭದಲ್ಲಿ ಭಾಗವಹಿಸುವುದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಕೆಪಿಸಿಸಿ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಕಾಂಗ್ರೆಸ್ ನಾಯಕರು ಭಾಗವಹಿಸದಂತೆ ನಿಷೇಧ ಹೇರಿತ್ತು. ಆದರೆ ಇದು ನನಗೆ ಗೊತ್ತಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.
ಪ್ರಜಾಪ್ರಭುತ್ವದ ಎರಡು ಪ್ರತ್ಯೇಕ ದ್ರುವಗಳಲ್ಲಿರುವವರು ಮಾತುಕತೆ ನಡೆಸಲಿ ಎಂದು ತರೂರ್ ಹೇಳಿದ್ದಾರೆ. ತರೂರ್ ನಡೆಗೆ ಕಾಂಗ್ರೆಸ್ ನಾಯಕತ್ವ ಅತೃಪ್ತಿ ವ್ಯಕ್ತಪಡಿಸಿದೆ. ಶಶಿ ತರೂರ್ ಕಾಂಗ್ರೆಸ್‌ಗೆ ಆತಂಕ ತಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಕೆ-ರೈಲ್ ವಿರುದ್ಧದ ಅರ್ಜಿಗೆ ಶಶಿ ತರೂರ್ ಸಹಿ ಹಾಕಿರಲಿಲ್ಲ. ನಂತರ ಶಶಿತೂರ್ ವಿವಾದಕ್ಕೆ ಕೊನೆಯೆಳೆದು, ಪಕ್ಷದೊಂದಿಗಿದ್ದೇನೆ ಎಂದು ವಿವರಿಸಿದ್ದರು.