ನವದೆಹಲಿ: ಕೊರೊನಾ ಲಸಿಕೆ ಕಡ್ಡಾಯವೇ..? ಇಂಥದ್ದೊಂದು ವಿಚಾರ ಕಳೆದ ಕೆಲವು ತಿಂಗಳುಗಳಿಂದ ಆಗಾಗ ಮುನ್ನೆಲೆಗೆ ಬರುತ್ತಲೇ ಇದ್ದು, ಈಗ ಮತ್ತೊಮ್ಮೆ ಈ ಸುದ್ದಿ ಸದ್ದು ಮಾಡುವಂತಾಗಿದೆ. ಮಾತ್ರವಲ್ಲ ಈ ಕುರಿತು ಕೇಂದ್ರ ಸರ್ಕಾರವೇ ಸುಪ್ರೀಂ ಕೋರ್ಟ್ಗೆ ಸ್ಪಷ್ಟೀಕರಣವನ್ನು ನೀಡಿದೆ.

ನಿನ್ನೆ ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿದ್ದ ಪೀಠದ ಮುಂದೆ ತಮಿಳುನಾಡಿನ ಅಡಿಷನಲ್ ಅಡ್ವೋಕೇಟ್ ಜನರಲ್ ಅಮಿತ್ ಆನಂದ್ ತಿವಾರಿ ಕರೊನಾ ಲಸಿಕೆ ವಿಷಯವನ್ನು ಪ್ರಸ್ತಾಪಿಸಿದ್ದರು. ಮಾತ್ರವಲ್ಲ, ಕೊರೊನಾ ಲಸಿಕೆಯನ್ನು ಕೇಂದ್ರ ಸರ್ಕಾರದ ಆದೇಶಿಸಿದ್ದಾರೆ ಎಂದೂ ಹೇಳಿದ್ದರು.
ಇದಕ್ಕೆ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಸ್ಪಷ್ಟೀಕರಣವನ್ನು ನೀಡಿ ಸುಪ್ರೀಂಕೋರ್ಟ್ ಗಮನಕ್ಕೆ ತಂದರು. ಕೇಂದ್ರ ಸರ್ಕಾರ ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸಿದೆ ಎಂದು ತಮಿಳುನಾಡು ಸರ್ಕಾರದವರು ಹೇಳಿದ್ದಾರೆ. ಆದರೆ ಕೋವಿಡ್ ಲಸಿಕೆ ಕಡ್ಡಾಯವಲ್ಲ. ಕೊರೊನಾ ಲಸಿಕೀಕರಣ ನೂರಕ್ಕೆ ನೂರರಷ್ಟು ಆಗಬೇಕು ಎಂಬುದು ಕೇಂದ್ರ ಸರ್ಕಾರದ ನಿಲುವೇ ಹೊರತು ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸಿಲ್ಲ ಮತ್ತು ಕಡ್ಡಾಯ ಎಂದು ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.