ಕಾಸರಗೋಡು: ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋದನಾ ಕೇಂದ್ರ(ಸಿಪಿಸಿಆರ್‍ಐ)ವತಿಯಿಂದ 'ತೆಂಗು ಆಧಾರಿತ ಆಹಾರ ಸಂಸ್ಕರಣೆ'ವಿಷಯದಲ್ಲಿ ಎರಡು ದಿವಸಗಳ ತರಬೇತಿ ಶಿಬಿರ ಕಾಸರಗೋಡು ಸಿಪಿಸಿಆರ್‍ಐ ಸಭಾಂಗಣದಲ್ಲಿ ಜರುಗಿತು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ತೆಂಗು ಬೆಳೆಯಿಂದ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುವ ಮೂಲಕ ಸಿಪಿಸಿಆರ್‍ಐ ಸಾಧನೆ ಮೆರೆದಿದೆ. ಪ್ರಸಕ್ತ ತೆಂಗು ಆಧಾರಿತ ಆಹಾರ ಸಂಸ್ಕರಣೆ ಬಗ್ಗೆ ನಡೆಯುವ ತರಬೇತಿ ಕಾರ್ಯಕ್ರಮದಿಂದ ಮತ್ತಷ್ಟು ಉತ್ಪನ್ನಗಳ ತಯಾರಿಗೆ ಪ್ರೋತ್ಸಾಹ ಲಭಿಸಿದಂತಾಗಿದೆ. ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ಮತ್ತಷ್ಟು ಉದ್ದಿಮೆಗಳು ನಾಡಿಗೆ ಬರುವಂತೆ ಶ್ರಮಿಸಬೇಕು ಎಂದು ತಿಳಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಮಹಾ ಪ್ರಬಂಧಕ ಕೆ. ಸಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಸಿಪಿಸಿಆರ್‍ಐ ನಿರ್ದೇಶಕಿ ಡಾ. ಅನಿತಾ ಕರುಣ್ ಮುಖ್ಯ ಅತಿಥಿಯಾಗಿದ್ದರು. ಸಿಪಿಸಿಆರೈ ವಿಜ್ಞಾನಿಗಳಾದ ಡಾ. ಸಿ.ತಂಬಾನ್, ಡಾ, ಶಮೀನಾ ಬೀಗಂ ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಬಂಧಕಿ ಆರ್. ರೇಖಾ ಸ್ವಾಗತಿಸಿದರು. ಕೆ.ಪಿ ಗಿರೀಶ್ ಕುಮಾರ್ ವಂದಿಸಿದರು. ಐವತ್ತಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳು ತರಬೇತಿ ಕಾರ್ಯಖ್ರಮದಲ್ಲಿ ಪಾಲ್ಗೊಂಡಿದ್ದರು. ಸಿಪಿಸಿಆರ್‍ಐ ವಿಜ್ಞಾನಿಗಳು ತರಗತಿ ನಡೆಸಿಕೊಟ್ಟರು.